ಅಪ್ಪಂನಂತೆ ಮಕ್ಕಳು ಒಳ್ಳೆ ರೀತಿಯಲ್ಲಿ ಆಗಬೇಕು ಅನ್ಮೋದು ಕಾಮನ್. ಆದ್ರೆ ಅಪ್ಪನಂತೆ ಕಳ್ಳ ಆಗೋದು ದುರುಂತ. ಆ ಕಳ್ಳತನಕ್ಕೂ ಅಪ್ಪನಿಂದಲೇ ಸಿಕ್ಕಿತ್ತಂತೆ ಟ್ರೈನಿಂಗ್. ಮಹಡಿ ಮನೆಗಳನ್ನೇ ಟಾರ್ಗೆಟ್ ಮಾಡ್ತಿದ್ದ ಈತ 10 ನಿಮಿಷದಲ್ಲಿ ಮನೆಯ ಬೀಗ ಮುರಿದು ಕಳವು ಮಾಡಿ ಪರಾರಿಯಾಗ್ತಿದ್ದ.
ಈ ವಿಡಿಯೋದಲ್ಲಿ ಬರಿಗೈಯಲ್ಲಿ ಅಪಾರ್ಟ್ಮೆಂಟ್ ಒಂದರ ಒಳಗೆ ಹೋಗಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಚಿನ್ನಾಭರಣ ತುಂಬಿಕೊಂಡು ಬರುವ ಈ ಕಳ್ಳನ ಹೆಸರು ಚೋರ್ ಇಮ್ರಾನ್. 15 ವರ್ಷಗಳಿಂದ ಮನೆಗಳಿಗೆ ಕನ್ನ ಹಾಕೋದನ್ನೇ ಕಸುಬು ಮಾಡಿಕೊಂಡಿದ್ದ. ಕಳವು ಮಾಡ್ಬೇಕು ಅಂದಾಗ ಈತ ಬಹುಮಹಡಿ ಕಟ್ಟಡಗಳನ್ನೇ ಆಯ್ಕೆ ಮಾಡ್ಕೋತಿದ್ದ. ಅದರಲ್ಲೂ 2-3ನೇ ಮಹಡಿಯಲ್ಲಿ ಬೀಗ ಹಾಕಿರುವ ಮನೆ ನೋಡಿ ಕಳವು ಮಾಡ್ತಿದ್ದ. ಬೀಗ ಮುರಿಯೋದ್ರಲ್ಲಿ ಎಕ್ಸ್‌ಪರ್ಟ್ ಆಗಿದ್ದ ಚೋರ್ ಇಮ್ರಾನ್, 10 ನಿಮಿಷದಲ್ಲಿ ಬೀಗ ಮುರಿದು ಕಳವು ಮಾಡಿ ಪರಾರಿಯಾಗ್ತಿದ್ದ. ಈತನ ವಿರುದ್ಧ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ಕನ್ನ ಕಳವು ಪ್ರಕರಣಗಳು ದಾಖಲಾಗಿವೆ.
ಇಮ್ರಾನ್‌ಗೆ ಚಿಕ್ಕ ವಯಸ್ಸಿನಲ್ಲೇ ಕಳವು ಮಾಡೋಕೆ ತರಬೇತಿ ಕೊಟ್ಟಿದ್ದು ಅವನ ಅಪ್ಪ ಎಜಾಜ್ ಖಾನ್ ಅಲಿಯಾಸ್ ದಾದಾಪೀರ್. ಬಹಳ ಹಿಂದೆ ಪೊಲೀಸರಿಗೆ ಇನ್ಫಾರ್ಮರ್ ಆಗಿ ಕೆಲಸ ಮಾಡ್ತಿದ್ದ ದಾದಾಫೀರ್. ಪೊಲೀಸರು ಹೇಗೆ ಕೆಲಸ ಮಾಡ್ತಾರೆ ಅಂತ ತಿಳಿದುಕೊಂಡಿದ್ದ. ಹೀಗಾಗಿ ಮಗನಿಗೆ ಪೊಲೀಸರಿಗೆ ಸಿಗದಂತೆ ಕಳವು ಮಾಡುವ ಬಗ್ಗೆ ಟ್ರೈನಿಂಗ್ ಕೊಟ್ಟಿದ್ದ. ಮಗ ಚೋರ್ ಇಮ್ರಾನ್ ಕಳವು ಮಾಡಿದ್ದನ್ನು ತಾನೇ ಮಾರಾಟ ಮಾಡ್ತಿದ್ದ ದಾದಾಫೀರ್. ಇನ್ನು ಇಮ್ರಾನ್ ಹಾಗೂ ದಾದಾಫೀರ್ ಜೈಲಿನಲ್ಲಿರುವಾಗ ಮತ್ತೋರ್ವ ಆರೋಪಿ ಸೈಯದ್ ಅಹಮದ್ ಪರಿಚಯವಾಗುತ್ತೆ. ನಂತ್ರ ಈ 3 ಮಂದಿ ಸೇರಿಕೊಂಡು ಕಳವು ಮಾಡಲಾರಂಭಿಸುತ್ತಾರೆ. ಸದ್ಯ ಸಿಸಿಬಿ ಪೊಲೀಸ್ರು ಈ ಮೂವರನ್ನ ಬಂಧಿಸಿದ್ದಾರೆ.
ಇಮ್ರಾನ್ ಐಷಾರಾಮಿ ಹೋಟೆಲ್‌ಗಲ್ಲಿ ಉಳಿದುಕೊಳ್ಳುತ್ತಿದ್ದ. ಒಮ್ಮೆ ಉಳಿದುಕೊಂಡ ಹೋಟೆಲ್‌ಗೆ ಮತ್ತೆ ಹೋಗುತ್ತಿರಲಿಲ್ಲ. ಹೀಗಾಗಿ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಚೋರ್ ಇಮ್ರಾನ್ ವಿರುದ್ಧ 50 ಸಮನ್ಸ್ ಜಾರಿಯಾಗಿವೆ. 15 ಪ್ರಕರಣಗಳು ದಾಖಲಾಗಿವೆ. ಇಮ್ರಾನ್ ಸಾಕಷ್ಟು ಸಲ ಜೈಲಿಗೆ ಹೋದ್ರೂ ಒಂದು ಪ್ರಕರಣದಲ್ಲೂ ಈತನಿಗೆ ಶಿಕ್ಷೆಯಾಗಿಲ್ಲ. ಬಂಧಿತರಿಂದ 1.3 ಕೆಜಿ ಚಿನ್ನಾಭರಣ ವಶಪಡಿದಿಕೊಳ್ಳಲಾಗಿದೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
01/07/2022 08:48 pm