ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಕ್ಷತ್ರ ಆಮೆ ಸ್ಮಗ್ಲಿಂಗ್; ಆರೋಪಿಗಳು ಅರೆಸ್ಟ್- ಸಾವಿರಕ್ಕೂ ಹೆಚ್ಚು ಆಮೆ‌ಗಳು ವಶ

ಬೆಂಗಳೂರು: ಅಳಿವಿನ ಅಂಚಿನಲ್ಲಿರೋ ನಕ್ಷತ್ರ ಆಮೆಗಳಿಗೆ ಫಾರಿನ್ ಕಂಟ್ರಿಗಳಲ್ಲಿ ಒಳ್ಳೆ ರೇಟ್ ಇದೆ. ಕರ್ನಾಟಕ-ಆಂಧ್ರದ ಡೀಪ್ ಕಾಡಿನ ನೀರಲ್ಲಿ ಸಿಗುವ ಆಮೆಗಳ ಬಗ್ಗೆ ಈ ಗ್ಯಾಂಗ್ ಮಾಹಿತಿ ಪಡೆದು ಅವುಗಳನ್ನು ಕದ್ದು ತಂದು ದೊಡ್ಡದಾಗಿ ದುಡ್ಡು ಮಾಡಬೇಕು ಅಂತ ಬೆಂಗಳೂರಿಗೆ ಬಂದು ಸಿಕ್ಕಿಬಿದ್ದಾರೆ.

ಸ್ಟಾರ್ ಆಮೆಗಳು, ಈ ಹೆಸರನ್ನು ನೀವು ಕೇಳೋದೆ ಅಪರೂಪ. ಈ ಆಮೆಗಳು ಕಾಣೋದು ಕೂಡ ಅದಕ್ಕಿಂತ ಅಪರೂಪ. ಇಂತಹ ಪ್ರಭೇದಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಇದೆ. ಈ ಬಗ್ಗೆ ತಿಳಿದು ಸ್ಟಾರ್ ಆಮೆಗಳನ್ನ ಕದ್ದು ಮಾರಾಟ ಮಾಡಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನ ನಗರದ ಆರ್‌.ಎಮ್.ಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಕಲ್ಯಾಣ್, ಸಿಂಹಾದ್ರಿ, ಇಸಾಕ್, ರಾಜ್ ಪುತ್ರ ಎಂಬ ನಾಲ್ವರನ್ನ ಬಂಧಿಸಿ ಒಂದು ಸಾವಿರದ ನೂರ ಮೂವತ್ತೆರಡಕ್ಕೂ ಹೆಚ್ಚು ಸ್ಟಾರ್ ಆಮೆಗಳನ್ನ ವಶಪಡೆದಿದ್ದಾರೆ. ಆಮೆಗಳನ್ನ ಸೇಫ್ ಆಗಿ ಬನ್ನೇರುಘಟ್ಟ ಕಾಡಿನ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಪೊಲೀಸರು ಈ ಗ್ಯಾಂಗ್‌ನ ಲಿಂಕ್ ಬೆನ್ನಟ್ಟಿದ್ದು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.

Edited By : Manjunath H D
PublicNext

PublicNext

11/09/2022 09:32 am

Cinque Terre

33.26 K

Cinque Terre

0

ಸಂಬಂಧಿತ ಸುದ್ದಿ