ಬೆಂಗಳೂರು: ಪಬ್ಜಿ, ಫ್ರಿ ಫೈರ್ ಜೊತೆಗೆ ರಮ್ಮಿ... ಈ ಆಟಗಳನ್ನ ಟೈಂ ಪಾಸ್ ಗೆ ಅಂತ ಆಡಿಕೊಂಡಿದ್ರೆ ಓಕೆ. ಆದ್ರೆ, ಇದ್ರಲ್ಲಿ ದುಡ್ಡು ಹಾಕಿ ದುಡ್ಡು ಮಾಡಬಹುದು ಅಂತ ತಲೆಗೆ ಹೋದ್ರೆ ಮುಗೀತು, ಜೀವನ ನರಕ ಆಗೋದು ಪಕ್ಕಾ.
ಇಲ್ಲೊಬ್ಬ ಮಾಡಿದ್ದು ಅದನ್ನೇ. ಗಾರೆ ಕೆಲಸ ಮಾಡ್ತಿದ್ದ ಸತೀಶ್ ಅನ್ನೋ ಯುವಕ ಪಬ್ಜಿ ಜೊತೆಗೆ ರಮ್ಮಿ ಆಡೋದಕ್ಕೆ ಅಡಿಕ್ಟ್ ಆಗಿದ್ದ. ಆಟಕ್ಕೆ ಹಣ ಬಾಜಿ ಕಟ್ಟಿ ಸಾಕಷ್ಟು ಹಣ ಕಳೆದುಕೊಂಡಿದ್ದ. ಕೊನೆಗೆ ಹಣ ಖಾಲಿ ಆದ್ಮೇಲೆ ತಂಗಿಯ ಅಕೌಂಟ್ ನಿಂದ ತಂಗಿಗೆ ಗೊತ್ತಿಲ್ಲದಂತೆ ಹಣ ಎಗರಿಸಿ ಅದನ್ನೂ ಕಳೆದುಕೊಂಡಿದ್ದ.
ಇನ್ನು, ಆಟ ಆಡೋಕೆ ಒಳ್ಳೆ ಮೊಬೈಲ್ ಬೇಕು ಅಂತ ಚಿಂತಿಸಿದ್ದ ಸತೀಶ್, ಕಳ್ಳತನ ಮಾಡೋಕೆ ಪ್ಲಾನ್ ಮಾಡಿಕೊಂಡಿದ್ದ. ಇದೇ ತಿಂಗಳ ಮೊದಲ ವಾರ ಗಂಗಮ್ಮನ ಗುಡಿ ಠಾಣೆ ವ್ಯಾಪ್ತಿಯ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ ಮಹಿಳೆಯ ಕೈಕಾಲು ಕಟ್ಟಿ ಚಾಕುವಿನಿಂದ ಹಲ್ಲೆ ನಡೆಸಿ, ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ!
ಹೀಗೆ ಚಿನ್ನ ದೋಚಿ ಪರಾರಿಯಾಗಿ ಒಂದೂವರೆ ಲಕ್ಷದ ಐಫೋನ್ ಖರೀದಿ ಮಾಡಿ ಪಬ್ಜಿ ಆಡ್ತಿದ್ದ. ಈ ಪ್ರಕರಣ ಬೆನ್ನತ್ತಿದ್ದ ಗಂಗಮ್ಮನ ಗುಡಿ ಠಾಣೆ ಇನ್ ಸ್ಪೆಕ್ಟರ್ ಸಿದ್ದೇಗೌಡ ಮತ್ತವರ ತಂಡ, ಆರೋಪಿ ಧರಿಸಿದ್ದ ಟೀ ಶರ್ಟ್ ಸುಳಿವಿನಿಂದ ಖದೀಮನನ್ನು ಬಂಧಿಸಿ, ಐಫೋನ್ ಸಮೇತ ಚಿನ್ನಾಭರಣ ಸೀಝ್ ಮಾಡಿದ್ದಾರೆ.
PublicNext
17/08/2022 04:05 pm