ನೆಲಮಂಗಲ: ಪ್ರತಿಭಟನಾಕಾರರು ಪ್ರಯಾಣಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆ ಬಳಿ ಈ ಘಟನೆ ನಡೆದಿದೆ.
ಇನ್ನೂ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಲ್ಯಾಣ ಕರ್ನಾಟಕ ಹೂಗಾರ ಸಮಾಜದ ಧರಣಿ ಸತ್ಯಾಗ್ರಹ ಸಮಾವೇಶದಲ್ಲಿ ಪಾಲ್ಕೊಂಡಿದ್ದ ಸುಮಾರು 25 ಮಂದಿ ಪ್ರತಿಭಟನಾಕಾರರು ಬೆಂಗಳೂರಿಂದ ಕಲ್ಬುರ್ಗಿಯ ಚಿತ್ತಾಪುರಕ್ಕೆ ವಾಪಸ್ಸಾಗುತ್ತಿದ್ದರು. ಈ ವೇಳೆ ಘಟನೆ ನೆಡೆದಿದೆ. ಘಟನೆಯಲ್ಲಿ ಬಸ್‌ನ ಮುಂಭಾಗದ ಗಾಜಿಗೆ ಕಲ್ಲು ತೂರಿರುವ ಅಪರಿಚಿತ ಕಿಡಿಗೇಡಿ ವಿರುದ್ಧ ಬಸ್ ಚಾಲಕ ಮತ್ತು ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
16/07/2022 08:03 am