ಯಲಹಂಕ: ಬೆಂಗಳೂರಿನ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಪೊಲೀಸರು ಓಎಲ್ಎಕ್ಸ್ ಆಪ್ ಮೂಲಕ ಖರೀದಿದಾರರು ಮತ್ತು ಮಾರಾಟಗಾರರನ್ನು ನಂಬಿಸಿ ವಂಚಿಸುತ್ತಿದ್ದ ಓಎಲ್ಎಕ್ಸ್ ಮಂಜನನ್ನ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ವಂಚಿಸಿ ಖರೀದಿಸಿದ್ದ ಲಕ್ಷಾಂತರ ಬೆಲೆಯ 2 ಹೋಂಡಾ ಕಾರು, ಫಿಯೆಟ್ ಲಿನಿವಾ ಹಾಗೂ ಅಪಾಚೆ ಬೈಕ್ ಸೇರಿ 5 ಮೊಬೈಲ್ಸ್, ಸಿಮ್ ಕಾರ್ಡ್ ಮತ್ತು ನಂಬರ್ ಪ್ಲೇಟ್ಸ್ ನ ವಶಕ್ಕೆ ಪಡೆದಿದ್ದಾರೆ.
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಡವೆಕೆರೆದೊಡ್ಡಿ ಗ್ರಾಮದ ಓಎಲ್ಎಕ್ಸ್ ಮಂಜ, ಆಪ್ ಮೂಲಕ ಕಾರು ಮತ್ತು ಬೈಕ್ ಖರೀದಿದಾರರನ್ನು ಸಂಪರ್ಕಿಸುತ್ತಿದ್ದ. ನಿಮಗೆ ಕೆಲಸ ಬೇಕೆ ಎಂದು ಕಮೆಂಟ್ ಮಾಡಿ ಅವರ ಐ.ಡಿ.ಫ್ರೂಪ್ ಮತ್ತು ಅಪ್ರಸ್ತುತ ಪ್ರೂಫ್, ನಕಲಿ ಸಿಮ್ ಕಾರ್ಡ್ ಪಡೆದು ಯಾಮಾರಿಸುತ್ತಿದ್ದ. ಟೆಸ್ಟ್ ಡ್ರೈವ್ ಹೆರಸಲ್ಲೂ ವಿದ್ಯಾರಣ್ಯಪುರದ ಆದರ್ಶರವರ ಹೋಂಡಾ ಕಾರು ಪಡೆದು ಎಸ್ಕೇಪ್ ಆಗಿದ್ದ. ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಭಾಗದಲ್ಲಿ 9 ವಿವಿಧ ಪೊಲೀಸ್ ಠಾಣೆಗಳಲ್ಲಿ OLX ಮಂಜನ ವಿರುದ್ಧ 9 ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ. ಸದ್ಯ ವಿದ್ಯಾರಣ್ಯಪುರ ಪೊಲೀಸರು ಈ ಖತರ್ನಾಕ್ ಆಸಾಮಿಯನ್ನು ಜೈಲಿಗಟ್ಟಿದ್ದಾರೆ..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
Kshetra Samachara
16/06/2022 06:30 pm