ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆ್ಯಸಿಡ್ ನಾಗ ಯಾವೂದೇ ಸಾಕ್ಷಿ ಬಿಡದೆ ಪರಾರಿಯಾಗಿದ್ದಾನೆ : ಕಮಿಷನರ್ ಪಂಥ್

ಬೆಂಗಳೂರು: ಕಳೆದ ತಿಂಗಳು ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ ಪ್ರಕರಣದ ಆರೋಪಿ ನಾಗೇಶ್ ಇನ್ನೂ ಪತ್ತೆಯಾಗಿಲ್ಲ.ಈ ಕುರಿತು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಪ್ರತಿಕ್ರಿಯಿಸಿದ್ದು ಆರೋಪಿ ಹಿಡಿಯಲು ತಂಡಗಳು ರಚನೆಯಾಗಿದ್ದು. ಆರೋಪಿ ಯಾವೂದು ಸಾಕ್ಷಿ ಬಿಡದೇ ಪರಾರಿಯಾಗಿದ್ದಾನೆ.

ನಮ್ಮಲ್ಲಿ ಈಗಾಗಲೇ ಬಹಳ ಪ್ರಯತ್ನ ನಡೆದಿದ್ದು,ಇತ್ತೀಚೆಗೆ ಈ ಕೇಸ್ ಗೆ ಮಾಡಿದ ಪ್ರಯತ್ನ ಬೇರೆ ಯಾವುದೇ ಕೇಸ್ ನಲ್ಲಿ ಮಾಡಿಲ್ಲ. ಆತ ಈ ಹಿಂದೆಯೇ ಪ್ರೀಪ್ಲಾನ್ ಮಾಡಿ ಕೃತ್ಯ ನಡಿಸಿ ಮನೆಯವರಿಗೆ ಮನೆ ಖಾಲಿ ಮಾಡಲು ತಿಳಿಸಿದ್ದ ಎಂದು ತಿಳಿದು ಬಂದಿದೆ.

ಈಗಾಗಲೇ ಬೇರೆ ಬೇರೆ ರಾಜ್ಯಗಳಿಗೂ ವಿಶೇಷ ತಂಡಗಳನ್ನು ರವಾನೆ ಮಾಡಿದ್ದು ಎಲ್ಲಾ ದೇವಸ್ಥಾನದಲ್ಲಿಯೂ ಕೂಡಾ ಹುಡುಕಾಟ ನಡೆಸುತ್ತಿದ್ದೇವೆ ಎಂದು ಕಮಲ್ ಪಂತ್ ಹೇಳಿದ್ದಾರೆ.

Edited By :
PublicNext

PublicNext

11/05/2022 04:10 pm

Cinque Terre

35.27 K

Cinque Terre

0

ಸಂಬಂಧಿತ ಸುದ್ದಿ