ನೆಲಮಂಗಲ: ಇನ್ನೂ ಮೀಸೆ ಬಲಿಯದ ಪೊರ್ಕಿ ಹುಡುಗರ ಗ್ಯಾಂಗ್ ಹೆದ್ದಾರಿಯಲ್ಲೊಂದು ಕೊಲೆ ಮಾಡಿ, ಸಣ್ಣ ಸುಳಿವು ಸಹ ಬಿಡದ ಹಾಗೇ ಎಸ್ಕೇಪ್ ಆಗಿದ್ರು. ಆದ್ರೆ ರಸ್ತೆಯಲ್ಲಿ ಸಿಸಿ ಕ್ಯಾಮೆರಾ ಕಣ್ಗಳು ಅವರನ್ನ ಬಿಡಲೇ ಇಲ್ಲ, ರಸ್ತೆಯಲ್ಲಿ ನಿಂತ ಓರ್ವ ಮಂಗಳಮುಖಿಯನ್ನ ಕೊಂದು ಪಕ್ಕದ ಊರಲ್ಲೇ ರಾಜಾರೋಷದಿಂದ ಓಡಾಡ್ಕೊಂಡಿದ್ದ ಆರೋಪಿಗಳನ್ನ ಪೊಲೀಸರು ಬೇಟೆಯಾಡಿದ್ದಾರೆ..
ಹೀಗೆ ಪೊಲೀಸ್ ಜೀಪ್‌ನಿಂದ ಕೈಗೆ ಕೋಳ, ತಲೆಗೆ ಕಪ್ಪು ಮುಸುಕು ಹಾಕೊಂಡು ಬರ್ತಿರೋ ಚಿಗುರು ಮೀಸೆ ಪುಡಾರಿಗಳು, ಪೊಲೀಸರಿಂದ ಸ್ಥಳ ಮಹಜರ್.. ಇಲ್ಲಿ ಯಾವಾಗ ಏನು ನಡೆಯಿತು ಅಂತ ಎಕ್ಸ್ಪ್ಲೈನ್ ಮಾಡ್ತಿರೋ ಖತರ್ನಾಕ್ ಕೊಲೆ ಪಾತಕರು. ಹೌದು ನೆಲಮಂಗಲ ತಾಲೂಕು ಯಂಟಗಾನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬುರುಗಮರಪಾಳ್ಯ ಗ್ರಾಮದಲ್ಲಿ ಇದೇ ತಿಂಗಳ 8ನೇ ತಾರೀಖು ಮಂಗಳಮುಖಿ 23 ವರ್ಷದ ಅನಿಕಾಳನ್ನ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೈದು ತಲೆಮರೆಸಿಕೊಂಡಿದ್ದ ನವೀನ್, ಕುಮಾರ್, ಸಂತೋಷ್, ಮಹೇಶ್ ಮತ್ತು ಮಣಿಕಂಠ ಎಂಬ ಪಾತಕಿಗಳನ್ನ ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ಕಳೆದ 8ನೇ ತಾರೀಖು ಆರೋಪಿಗಳಾದ ಕುಮಾರ್ ಹಾಗೂ ಸಂತೋಷ್ ತಮ್ಮ ತೃಷೆ ತೀರಿಸಿಕೊಳ್ಳಲು ಮಂಗಳಮುಖಿ ಅನಿಕಾಳ ಬಳಿಗೆ ಹೋಗಿದ್ರಂತೆ, ಈ ವೇಳೆ ಸಣ್ಣ ಕಿರಿಕ್ ಆಗಿ ಅನಿಕಾ ಹಾಗೂ ಆರೋಪಿಗಳಿಬ್ಬರಿಗೂ ಗಲಾಟೆ ಆಗಿತ್ತಂತೆ. ಗಲಾಟೆ ಆದ್ಮೇಲೆ ಸಂತೋಷ್ ಹಾಗು ಕುಮಾರ್ ಅಲ್ಲಿಂದ ಹೊರಟು ನವೀನ, ಮಣಿಕಂಠ ಮತ್ತು ಮಹೇಶ್‌ರನ್ನ ಕರೆಸಿಕೊಂಡಿದ್ದಾನೆ. ನಂತ್ರ ಮಂಗಳಮುಖಿ ಅನಿಕಾಳಿಗೆ ಬುದ್ದಿ ಕಲಿಸಬೇಕು ಅಂತ ಐವರು ಹೋಗಿ ರಾತ್ರಿ 11.30ರ ವೇಳೆಗೆ ಡಾಬಾಗೆ ತೆರಳಲು ರಸ್ತೆ ದಾಟುತ್ತಿದ್ದ ಅನಿಕಾಳಿಗೆ ದೊಣ್ಣೆಯಿಂದ ಹೊಡೆದು ಅಲ್ಲಿಂದ ಎಸ್ಕೇಪ್ ಆಗಿದ್ರು.
ಆಗ ಮೃತ ಅನಿಕಾಳಿಗೆ ಗಂಭೀರ ಗಾಯಗಳಾಗಿ ರಕ್ತಸ್ರಾವದಿಂದ ರಸ್ತೆಯಲ್ಲಿ ಒದ್ದಾಡ್ತಿದ್ಲು, ತಕ್ಷಣ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿ ಆಗದೇ ಅನಿಕಾ ಆಸ್ಪತ್ರೆ ಬೆಡ್ ಮೇಲೆ ಕೊನೆಯುಸಿರೆಳೆದಿದ್ದಾಳೆ. ಘಟನೆ ಸಂಬಂಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಗ್ರಾಮಾಂತರ ಠಾಣಾ ಸಿಪಿಐ ರಾಜೀವ್, ಆರೋಪಿಗಳ ಪತ್ತೆ ಕಾರ್ಯ ಶುರುಮಾಡಿದ್ರು.
ಆಗ ಪೊಲೀಸ್ರಿಗೆ ಮೊದಲು ನೆರವಾಗಿದ್ದೇ ಟೋಲ್ ಮತ್ತು ನಗರ ರಸ್ತೆಯಲ್ಲಿದ್ದ ಸಿಸಿ ಕ್ಯಾಮೆರಾಗಳು. ಈ ಮೂಲಕ ಆರೋಪಿಗಳ ಸುಳಿವು ಸಿಕ್ಕಿದ ಬೆನ್ನಲ್ಲೇ ಕೊಲೆಯ ಪ್ರಮುಖ ಆರೋಪಿಗಳಾದ ಕುಮಾರ್ ಹಾಗೂ ಸಂತೋಷ್‌ನನ್ನ ಬಂಧಿಸಿದ ನಂತ್ರ, 3 ಜನರ ಪತ್ತೆ ಸುಲಭವಾಯ್ತು. ಐವರನ್ನ ತನಿಖೆಗೆ ಒಳಪಡಿಸಿದ ವೇಳೆ ಆರೋಪಿ ನವೀನ್ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬೆಳಕಿಗೆ ಬಂದಿದೆ.
ಅಲ್ಲದೆ ಕೊಲೆ ನಡೆದ ದಿನ ನವೀನ್ ಸೇರಿದಂತೆ ಮಣಿ ಹಾಗೂ ಮಹೇಶ್ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಘಟನೆ ಸಂಬಂಧ ಆರೋಪಿಗಳನ್ನ ಬಂಧಿಸಲಾಗಿತ್ತು, ಮತ್ತಷ್ಟು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರೋ ಗುಮಾನಿ ಹಿನ್ನೆಲೆ ಪೊಲೀಸ್ರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆದಿದ್ದಾರೆ.
Kshetra Samachara
30/04/2022 12:44 pm