ಬೆಂಗಳೂರು: ಕೇರಳ ಟೂ ಕರ್ನಾಟಕ ಈ ಗ್ಯಾಂಗ್ ಕಣ್ಣಿಟ್ರೆ ಕೋಟಿ ಲೂಟಿ ಪಕ್ಕಾ. ಪ್ರೊಫೆಷನಲಿ ಪ್ಲಾನ್ ಮಾಡ್ತಿದ್ದ ಅವ್ರ ಪ್ಲಾನ್ ಫೇಲ್ಯೂರ್ ಆಗ್ತಿರ್ಲಿಲ್ಲ. ಪ್ಲಾನ್ ಸಕ್ಸಸ್ ಆಗೋದಿಕ್ಕೆ ಅವರು ಮಾಡ್ತಾ ಇದ್ದ ತಯಾರಿ ಕೇಳಿದ್ರೆ ನೀವೇ ಶಾಕ್ ಆಗಿ ಬಿಡ್ತೀರಿ. ಅಂತದೊಂದು ನಟೋರಿಯಸ್ ದರೋಡೆ ಗ್ಯಾಂಗ್‌ನ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಮಂಜುನಾಥ್ ಅಂಡ್ ಟೀಂ ಅರೆಸ್ಟ್ ಮಾಡಿದ್ದಾರೆ.
ಒಂದುವರೆ ತಿಂಗಳ ಹಿಂದೆ ಹಾಡಹಗಲೇ ನಡು ರಸ್ತೆಯಲ್ಲಿ ಕೋಟಿ ಲೂಟಿ ಮಾಡಿದ ಪ್ರಕರಣ ಇಡೀ ಬೆಂಗಳೂರು ಗ್ರಾಮಂತರ ಪೊಲೀಸ್ರ ನಿದ್ದೆ ಗೆಡಿಸಿತ್ತು. ತುಮಕೂರು ರಸ್ತೆಯ ಮಾದವಾರ ಬಳಿ ಚಿನ್ನದ ವ್ಯಾಪಾರಿ ಫ್ರಾಂಕ್ಲಿನ್ ಮತ್ತು ಸ್ನೇಹಿತರು ಚಿನ್ನ ಮಾರಿ ಒಂದು ಕೋಟಿ ಕ್ಯಾಶ್ ಸಮೇತ ಕನ್ಯಾಕುಮಾರಿ ಕಡೆ ಹೊರಟಿದ್ರು. ಈ ವೇಳೆ ಇನ್ನೋವಾ ಕಾರಿನಲ್ಲಿ ಅಡ್ಡಗಡ್ಡಿದ ದರೋಡೆಕೋರರು ಕಾರಿನಲ್ಲಿದ್ದ ಒಂದು ಕೋಟಿ ಲೂಟಿ ಮಾಡಿದ್ರು. ಪ್ರಕರಣ ದಾಖಲಿಸಿಕೊಂಡಿದ್ದ ಮಾದನಾಯಕನಹಳ್ಳಿ ಪೊಲೀಸರು ಸಿಸಿ ಟಿವಿ ದದೃಶ್ಯವಾಳಿ ಜಾಡು ಹಿಡಿದು ಕೇರಳ ಗಡಿಮುಟ್ಟಿದ್ರು. ಒಂದು ತಿಂಗಳ ನಂತರ ಕೇರಳದಲ್ಲಿ ರಾಜೀವ್, ವಿಷ್ಣುಲಾಲ್, ಸನಾಲ್, ಜಸೀನ್, ರಂಶೀದ್, ಸನಾಫ್, ಶಫೀಕ್ ಸೇರಿದಂತೆ ಒಟ್ಟು ಹತ್ತು ದರೋಡೆಕೋರರನ್ನ ಮಾದನಾಯನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಈ ಗ್ಯಾಂಗ್‌ನ ಕಿಂಗ್ ಪಿನ್ ಶ್ರೀಧರ್ @ ಕೊಡಾಲಿ ಶ್ರೀಧರ್ ರಾಬರಿ ಮಾಡಿದ್ದ 90 ಲಕ್ಷ ಹಣದ ಜೊತೆಗೆ ಪರಾರಿಯಾಗಿದ್ದಾನೆ. ಈತನ ಪತ್ತೆಗೆ ವಿಶೇಷ ತಂಡ ಕೂಡ ರಚೆನೆಯಾಗಿದ್ದು ಪೊಲೀಸ್ರು ಆತನ ಪತ್ತೆಗೂ ಮುಂದಾಗಿದ್ದಾರೆ. ಇನ್ನೂ ಈತನ ಅಣತಿಯಂತೆ ಪ್ರತಿ ಟೋಲ್ ಪಾಸಿಂಗ್ ನಂತರ ಕಾರಿನ ನಂಬರ್ ಪ್ಲೇಟ್ ಚೇಂಜ್ ಮಾಡ್ತಿದ್ದ ಇವರು ಹಣ ರಾಬರಿ ಮಾಡಿ ಅದನ್ನ ಸೇಫ್ ಮಾಡಲು ಕಾರಿನಲ್ಲಿ ಸಿಕ್ರೇಟ್ ಲಾಕರ್ ಕೂಡ ಮಾಡಿಸಿದ್ರಂತೆ.
ಆರೋಪಿಗಳ ಹೆಡೆಮುರಿ ಕಟ್ಟಲು ಹುಬ್ಬಳ್ಳಿಯಿಂದ ತನಿಖೆ ಶುರುಮಾಡಿದ ಇನ್ಸ್‌ಪೆಕ್ಟರ್ ಮಂಜುನಾಥ್ ಅಂಡ್ ಟೀಂ ನೂರಾರು ಸಿಸಿಟಿಟಿವಿ ನೋಡಿ ಕೊನೆಗೆ ಕೇರಳ ತಲುಪಿದ್ರು. ಸದ್ಯ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನ ಬಂಧಿಸಿ 10 ಲಕ್ಷ ನಗದು ಹಾಗೂ ಎರಡು ಇನ್ನೋವಾ ಕಾರುಗಳನ್ನ ಜಪ್ತಿ ಮಾಡಿದ್ದಾರೆ.
ಇನ್ನು ಆರೋಪಿಗಳು ಈ ಹಿಂದೆ ಕೂಡ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಚಿನ್ನದ ವ್ಯಾಪರಿಗಳನ್ನೇ ಟಾರ್ಗೇಟ್ ಮಾಡಿ ರಾಬರಿ ಮಾಡಿರೋದು ಬೆಳಕಿಗೆ ಬಂದಿದೆ. ಇತ್ತ ದೂರುದಾರರಾದ ಪ್ರಾಂಕ್ಲಿನ್, ಯೋಗೇಶ್‌ರನ್ನ ವಿಚಾರಣೆ ನಡೆಸುತ್ತಿರುವ ಪೊಲೀಸರು ಒಂದು ಕೋಟಿ ಹಣದ ಮೂಲವನ್ನು ಕೆದಕುತ್ತಿದ್ದಾರೆ.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
25/04/2022 08:53 pm