ಬೆಂಗಳೂರು: ಹಲ್ಲಗೆರೆ ಶಂಕರ್, ಈ ಹೆಸ್ರೂ ಇನ್ನೂ ಹತ್ತು ವರ್ಷ ಯಾರೂ ಮರೆಯಲ್ಲ. ಯಾಕಂದ್ರೆ ಇದೇ ಶಂಕರ್ ಮನೆಯಲ್ಲಿ ನಾಲ್ಕೈದು ತಿಂಗಳ ಹಿಂದೆ ಮಗುವನ್ನು ಕೊಂದು ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸುದ್ದಿ ರಾಷ್ಟ್ರ ವ್ಯಾಪಿ ಸದ್ದು ಮಾಡಿತ್ತು. ಒಂದು ಕಡೆ ಆತ್ಮಹತ್ಯೆ ಪ್ರಚೋದನೆ ಕೇಸ್‌ನಲ್ಲಿ ಶಂಕರ್ ಮತ್ತು ಅಳಿಯಂದಿರು ಇನ್ನೂ ಜೈಲಿನಲ್ಲೆ ಇದ್ದಾರೆ.
ಮಧ್ಯೆ ಶಂಕರ್ ಫ್ಯಾಮಿಲಿ ಇದ್ದ ಅಂದ್ರಹಳ್ಳಿ ಈ ಮನೆ ಅಂದಿನಿಂದ ಬಿಕೋ ಎನ್ನುತ್ತಿದೆ. ಮನೆ ಸುತ್ತಲಿರುವ ಇಲ್ಲಿ ದೆವ್ವ ಭೂತ ಇದೆ ಅಂತ ಒಂದಷ್ಟು ಕತೆಯನ್ನೂ ಕಟ್ಟಿದ್ದಾರೆ. ಅದು ಅಮಾವಾಸ್ಯೆ ಹಿಂದೆಮುಂದೆ ಮನೆ ಅಕ್ಕಪಕ್ಕದ ಜನ ಓಡಾಡೋಕು ಭಯಪಡುತ್ತಾರೆ. ಕಳೆದ ಅಮಾವಾಸ್ಯೆ ಮಾರನೇ ದಿನ ಕೂಡ ಅಂತಹದ್ದೆ ಒಂದು ಘಟನೆ ನಡೆದಿದೆ. ಅದು ಮಧ್ಯರಾತ್ರಿ ಶಂಕರ್ ಮನೆಯಲ್ಲಿ ಕಂಡ ಬೆಳಕಿನ ಸಂಚಾರ.
ಎಸ್ ಶಂಕರ್ ಮನೆಯಲ್ಲಿ ಕರೆಂಟ್ ಕಟ್ ಆಗೇ ನಾಲ್ಕು ತಿಂಗಳಾಗಿದೆ. ಹಾಗಿದ್ದರೂ ಬೆಳಕನ್ನು ನೋಡಿ ಸ್ಥಳೀಯೊಬ್ಬರು ಗಾಬರಿಯಗಿದ್ದರು. ಆ ಕೂಡಲೇ ಶಂಕರ್ ಸಂಬಂಧಿಗೆ ಕರೆ ಮಾಡಿ ಮನೆ ಬರಲಿ ಸೂಚಿಸಿದರು. ನಂತರ ಮೂರ್ನಾಲ್ಕು ಜನ ಗಟ್ಟಿ ಮನಸ್ಸು ಮಾಡಿ ಮನೆಯೊಳಗೊಗಿ ಮನೆಯಲ್ಲ ಜಾಲಡಿದ್ರೂ ಏನೂ ಸಿಗಲಿಲ್ಲ. ಕೊನೆಗೆ ದೇವರಮನೆ ಬಳಿ ಬಂದಾಗ ದೆವ್ವಾ ದೆವ್ವಾ ಅಂತ ಚೀರಾಡಿ ಒಬ್ಬ ವ್ಯಕ್ತಿ ಹೊರ ಬಂದಿದ್ದ. ಒಂದು ಕ್ಷಣಕ್ಕೆ ಅಲ್ಲಿದ್ದವರು ಗಾಬರಿಯಾಗಿದ್ದರು. ತಕ್ಷಣ ಇಡೀ ಏರಿಯಾ ಜನ ಮನೆ ಬಳಿ ಜಮಾಯಿಸಿದ್ದರು. ಇನ್ನೂ ಚೀರಾಡಿದ ವ್ಯಕ್ತಿಯನ್ನು ಯಾರೂ ಅಂತ ನೋಡಿದ್ರೆ ಶಂಕರ್ ಮನೆ ದೋಚಲು ಬಂದಿದ್ದ ಕಳ್ಳ. ಮೊಬೈಲ್ ಟಾರ್ಚ್ ಹಿಡಿದು ಮನೆ ಸರ್ಚ್ ಮಾಡ್ತಿದ್ದ.
ಇತ್ತ ಕಳ್ಳ ಮನೆಗೆ ಜನ ಬರುತ್ತಿದ್ದಂತೆ ದೇವರಮನೆ ಸೇರಿದ್ದ. ಜನ ಅಲ್ಲಿಗೂ ಬಂದಾಗ ದೆವ್ವದ ಕತೆ ಕಟ್ಟಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದ. ಆಸಮಯಕ್ಕೆ ಸ್ಥಳೀಯರು ಆತನ ಹಿಡಿದು ಆತನಿಗೆ ಎರಡು ಬಿಡ್ತಿದ್ದಂತೆ ನಿಜ ಹೊರ ಹಾಕಿದ್ದಾನೆ. ಸದ್ಯ ಕಳ್ಳನನ್ನ ಭರತ್ ಕುಮಾರ್ ಎಂದು ಗುರುತಿಸಿದ್ದು, ಬ್ಯಾಡರಹಳ್ಳಿ ಠಾಣೆಗೆ ಒಪ್ಪಿಸಿದ್ದಾರೆ.
ಶ್ರೀನಿವಾಸ್ ಚಂದ್ರ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
05/02/2022 07:32 am