ಬನಶಂಕರಿ: ಹಿಂದೂ ಯುವಕನಿಗೆ ಬಲವಂತವಾಗಿ ಮತಾಂತರ ಮಾಡಿದ ಆರೋಪದಡಿ ಹುಬ್ಬಳ್ಳಿಯಿಂದ ಬನಶಂಕರಿ ಠಾಣೆಯಿಂದ ವರ್ಗವಾಗಿದ್ದ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಬನಶಂಕರಿ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಮಾಜಿ ಕಾರ್ಪೊರೇಟರ್ ಅನ್ಸರ್ ಪಾಷಾ ತಮಿಳುನಾಡಿನಲ್ಲಿ ಲಾಕ್ ಆಗಿದ್ದಾನೆ. ಇವನ ಜೊತೆಗೆ ನಯಾಜ್ ಖಾನ್ ಹಾಗೂ ಅಜೀಸಾಬ್ ಬಂಧಿತ ಆರೋಪಿಗಳಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಪಡೆದು ವಿಚಾರಣೆ ನಡೆಸಲಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಏಳು ಮಂದಿ ನಾಪತ್ತೆಯಾಗಿದ್ದು, ಪೊಲೀಸ್ರು ಹುಡುಕಾಟ ನಡೆಸ್ತಿದ್ದಾರೆ.
ಹಣಕಾಸಿನ ಸಹಾಯದ ನೆಪದಲ್ಲಿ ಎಒನ್ ಆರೋಪಿ ಅತ್ತಾವರ್ ರೆಹಮಾನ್ ಕಳೆದ ವರ್ಷ ಬನಶಂಕರಿ ಮಸೀದಿಗೆ ಸಂತ್ರಸ್ತ ಶ್ರೀಧರ್‌ನನ್ನ ಕರೆತಂದು ಎಲ್ಲಾ ಆರೋಪಿಗಳನ್ನು ಪರಿಚಯಿಸಿದ್ದ. ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಮಾತನಾಡಿ ಹಂತ-ಹಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಒತ್ತಡ ಹೇರಿದ್ದರು.
ಅಕ್ರಮವಾಗಿ ಬಂಧನದಲ್ಲಿರಿಸಿ ಬಲವಂತವಾಗಿ ಇಸ್ಲಾಂ ಧರ್ಮದಂತೆ ಕತ್ನಾ ಮಾಡಿಸಿದ್ದರು. ಬಲವಂತದ ಮತಾಂತರ, ಕತ್ನಾ ಪ್ರಕರಣದಲ್ಲಿ ಕಾರ್ಪೊರೇಟರ್ ಅನ್ಸರ್ ಪಾಷಾ ಕೂಡ ಆರೋಪಿಯಾಗಿದ್ದು, ಅನ್ಸರ್ ಪಾಷಾನ ಸಂಬಂಧಿ ಖಬರಿಸ್ತಾನ್ ಮಸೀದಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದ್ದ, ಬಂಧಿತ ನಯಾಜ್ ಪಾಷಾ ಇಸ್ಲಾಂ ಧರ್ಮದ ಭೋದನೆ ಮಾಡಿ ,ಮರ್ಮಾಂಗದ 'ಕತ್ನಾ'ಮಾಡಿದಲ್ಲದೆ ದನದ ಮಾಂಸವನ್ನ ಬಲವಂತವಾಗಿ ತಿನ್ನಿಸಿರುವ ಆರೋಪ ಕೇಳಿ ಬಂದಿದೆ.
PublicNext
13/10/2022 05:13 pm