ಬೆಂಗಳೂರು: ರಸ್ತೆ ಮೇಲೆ ಓಡಾಡೋವಾಗ ಆ ಗ್ಯಾಂಗ್ ಕಣ್ಣು ನಿಮ್ಮ ಮೇಲೆ ಬಿದ್ರೆ ಮುಗೀತು. ಕೆಲಸದ ಟೆನ್ಶನ್ ನಲ್ಲಿ ಹೋಗುವವರನ್ನೇ ಟಾರ್ಗೆಟ್ ಮಾಡೋ ಗ್ಯಾಂಗ್, ಸೈಲೆಂಟ್ ಆಗಿ ಬಂದು ಗಾಡಿ ಟಚ್ ಆಯ್ತು ಅಂತ ಕಿರಿಕ್ ಶುರು ಮಾಡಿ ಗಾಡಿ ಸೈಡಿಗೆ ಹಾಕಿಸ್ತಾರೆ. ನೀವೇನಾದ್ರು ಕೊಂಚ ಭಯಬಿದ್ರೆ ಸಾಕು, ಬಳಿಕ ನಿಮ್ಮನ್ನ ಹೆದರಿಸಿ, ಬೆದರಿಕೆ ಹಾಕಿ ಜೇಬಿನಲ್ಲಿರೋದನ್ನೆಲ್ಲ ಕಿತ್ತು ಪರಾರಿಯಾಗ್ತಾರೆ. ಹೀಗೆ ಸದ್ದಿಲ್ಲದೇ ನಗರದಲ್ಲಿ ಆಕ್ಟಿವ್ ಆಗಿದ್ದ, ಖತರ್ನಾಕ್ ಗ್ಯಾಂಗ್ ನ್ನ ಬಸವನಗುಡಿ ಇನ್ಸ್ಪೆಕ್ಟರ್ ಸುಬ್ರಮಣಿ ಮತ್ತು ತಂಡ ಬಲೆಗೆ ಕೆಡವಿದ್ದಾರೆ.
ಇವ್ರೆ ನೋಡಿ ಆ ಖದೀಮರು. ಹೆಸರು ಜುನೈದ್ ಹಾಗೂ ಜಮೀಲ್. ಮೂಲತಃ ಮೈಸೂರಿನ ಈ ಜೋಡಿ ಖತರ್ನಾಕ್ ವಂಚಕರು. ಈ ಹಿಂದೆ ಬೈಕ್ ಕದಿಯುತಿದ್ದ ಇವರಿಗೆ ಆನ್ ಲೈನ್ ಜೂಜಿನ ಚಟ ಹತ್ತಿಕೊಂಡಿತ್ತು. ಮಾಡೋಕೆ ಕೆಲಸ ಇಲ್ಲದ ಈ ಗ್ಯಾಂಗ್ ಕೆಲ ವಿಡಿಯೋಗಳ ಕಂಡು ತಮ್ಮದೇ ಮಾಸ್ಟರ್ ಕೃತ್ಯ ಶುರು ಮಾಡಿಕೊಂಡಿದ್ರು. ಅದೇ ಈ ಅಪಘಾತ ಅಂತ ಸೀನ್ ಸೃಷ್ಟಿಸಿ ಮಾಡೋದು, ನಂತರ ಬೈಕ್ ಹಾಗೂ ಕಾರು ಚಾಲಕರ ಬಳಿ ಹಣ ಕೀಳೋದು.
ಕಳೆದ ಜುಲೈ 24ರಂದು ಅಪರಾಹ್ನ 3 ಗಂಟೆ ಸುಮಾರಿಗೆ ಹೆಚ್ಚಾಗಿ ವೆಹಿಕಲ್ ಮೂಮೆಂಟ್ ಇರೋ ಬಸವನಗುಡಿಯ ಕೂಲ್ ಜಾಯಿಂಟ್ ರಸ್ತೆಯಲ್ಲಿ ಬೈಕ್ ನಲ್ಲಿ ಸ್ಪೀಡಾಗಿ ಬಂದು ಕಾರ್ ಪಕ್ಕ ಬಿದ್ದಂತೆ ಮಾಡಿದ್ರು. ಒಬ್ಬ ಕುಂಟುತ್ತಾ ಬಂದ್ರೆ, ಜೊತೆಗಿದ್ದವನು ಆತನ ಕಾರಿಗೆ ಕರೆದು ಕೂರಿಸಿ ಕಾರು ಡಿಕ್ಕಿ ಆದ ಪರಿಣಾಮ ಆತನಿಗೆ ಗಾಯ ಆಗಿದೆ ಅಂತ ಜಗಳ ಮಾಡಿ ಕಾರು ಚಾಲಕನಿಗೆ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ರು. ಏನೋ ಗಾಡಿ ಟಚ್ ಆಗಿದ್ದಕ್ಕೆ ಬಿದ್ದಿರಬಹುದು ಅಂತ ಕಾರು ಚಾಲಕ 40 ಸಾವಿರ ನೀಡಿ ಕೈ ಮುಗಿದು ಹೋಗಿದ್ರು. ಆದ್ರೆ, ಅಲ್ಲಿ ನಿಜಕ್ಕೂ ಅಪಘಾತ ಆಗಿರ್ಲಿಲ್ಲ.ಇದು ವಂಚಕರು ಹಣ ಕೀಳೋಕೆ ಮಾಡಿದ್ದ ಮಾಸ್ಟರ್ ಪ್ಲಾನ್.
ಇನ್ನೂ ಇದೇ ರೀತಿ ಮಂಡ್ಯ, ಮೈಸೂರು, ಮಳವಳ್ಳಿ ಕೆಲ ಜಿಲ್ಲೆಗಳು ಸೇರಿದಂತೆ ಬೆಂಗಳೂರಿನ ಹಲವು ಕಡೆ ನಕಲಿ ಬೈಕ್ ನಂಬರ್ ಬಳಸಿ ಎಂಟ್ರಿ ಕೊಡುತಿದ್ದ ಇವರು, ಬ್ಯಾಂಕ್ ನಿಂದ ಹೊರ ಬಂದವರು ಅಥವಾ ನೋಡೊಕೆ ಸಾಫ್ಟ್ ಆಗಿ ಕಾಣೋ ಉದ್ಯಮಿಗಳ ವಾಹನ ಟಾರ್ಗೆಟ್ ಮಾಡಿ ಸೀನ್ ಕ್ರಿಯೇಟ್ ಮಾಡುತ್ತಿದ್ರು. ನಂತರ ಕಾರು ಸೈಡಿಗೆ ಹಾಕಿಸಿ ಬೆದರಿಕೆ ಹಾಕುತ್ತಿದ್ರು. ಹಣ ಕೊಡದಿದ್ರೆ ಹುಡುಗರನ್ನು ಕರೆಸೊದಾಗಿ ಬೆದರಿಸಿ ಹಣ ವಸೂಲಿ ಮಾಡಿ ಬಿಟ್ಟು ಕಳುಹಿಸುತ್ತಿದ್ರು!
ಸದ್ಯ ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ನಾಲ್ಕು ವಿವಿಧ ಮಾದರಿಯ ಬೈಕ್, ಕಾರು ವಶಕ್ಕೆ ಪಡೆದಿದ್ದಾರೆ.
PublicNext
02/08/2022 10:04 am