ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಫಸಲು ಭರಿತ ಅಡಿಕೆ ತೋಟದಲ್ಲಿ ವಿದ್ಯುತ್ ಲೈನ್; ಕೆಪಿಟಿಸಿಎಲ್ ನಡೆಗೆ ಬೇಸತ್ತ ರೈತ ವಿಷ ಸೇವನೆ!

ದೊಡ್ಡಬಳ್ಳಾಪುರ: ಐದು ವರ್ಷಗಳಿಂದ ಬೆವರು ಹರಿಸಿ ಬೆಳೆಸಿದ ಅಡಿಕೆ ತೋಟ, ಕೆಪಿಟಿಸಿಎಲ್ ಅಧಿಕಾರಿಗಳು ಇಂದು ತೋಟದೊಳಗೆ ವಿದ್ಯುತ್ ಲೈನ್ ಅಳವಡಿಕೆಗೆ ಮುಂದಾಗಿದ್ರು. ಅಧಿಕಾರಿಗಳ ದಬ್ಬಾಳಿಕೆ ಖಂಡಿಸಿದ ರೈತ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಶ್ರೀರಾಮನಹಳ್ಳಿ ಬಳಿ ಘಟನೆ ನಡೆದಿದ್ದು, ಗ್ರಾಮದ 52 ವರ್ಷದ ರೈತ ರಂಗಪ್ಪ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದವರು. ತಕ್ಷಣ ರೈತನನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಂಗಪ್ಪ ತನ್ನ 2 ಎಕರೆ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದರು. 5 ವರ್ಷದ ಅಡಿಕೆ ತೋಟದಲ್ಲಿ ಈಗಾಗಲೇ 2 ಫಸಲು ಬಂದಿತ್ತು. ವಿದ್ಯುತ್ ಲೈನ್ ತೋಟದ ಮೂಲಕ ಹಾದು ಹೋಗುವುದರಿಂದ 300 ಅಡಿಕೆ ಮರಗಳನ್ನ ಕತ್ತರಿಸಲಾಗುತ್ತದೆ. ಪ್ರತಿ ಮರಕ್ಕೆ ಪರಿಹಾರವಾಗಿ 2 ಸಾವಿರದಂತೆ ಒಟ್ಟು 9 ಲಕ್ಷ ಪರಿಹಾರ ಕೊಡುವುದಾಗಿ ಅಧಿಕಾರಿಗಳು ಹೇಳಿದ್ದರು.

ಕೆಪಿಟಿಸಿಎಲ್ ನಿಂದ ಕೊಡುವ ಪರಿಹಾರದ ಹಣವನ್ನ ರೈತ ರಂಗಪ್ಪ ಒಂದು ವರ್ಷದ ಬೆಳೆಯಲ್ಲಿ ಪಡೆಯುತ್ತಿದ್ದು, ಸೂಕ್ತ ಪರಿಹಾರ ಕೊಡಬೇಕೆಂದು ರೈತನ ಬೇಡಿಕೆಯಾಗಿತ್ತು. ಇಲ್ಲದಿದ್ದರೆ ಅವಕಾಶ ನೀಡುವುದಿಲ್ಲವೆಂದು ಹೇಳಿದ್ದರು.

ಕೆಪಿಟಿಸಿಎಲ್ ಕಾಮಗಾರಿ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೂಡಿದ್ರು ರಂಗಪ್ಪ. ವಿಚಾರಣೆ ನಡೆಸಿದ ಕೋರ್ಟ್ ರಂಗಪ್ಪ ಅರ್ಜಿ ವಜಾ ಮಾಡಿತ್ತು. ಇದ್ರಿಂದ ಇಂದು ಕೆಪಿಟಿಸಿಎಲ್ ಅಧಿಕಾರಿಗಳು ಪೊಲೀಸ್ ಬೆಂಗಾವಲಿನೊಂದಿಗೆ ವಿದ್ಯುತ್ ಲೈನ್ ಅಳವಡಿಕೆಗೆ ಮುಂದಾದ್ರು. ಅಧಿಕಾರಿಗಳ ನಡೆಗೆ ನೊಂದ ರಂಗಪ್ಪ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದೊಡ್ಡಬೆಳವಂಗಲ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Edited By :
PublicNext

PublicNext

03/07/2022 12:12 pm

Cinque Terre

51.88 K

Cinque Terre

0

ಸಂಬಂಧಿತ ಸುದ್ದಿ