ಬೆಂಗಳೂರು: ಮಹಾರಾಷ್ಟ್ರದ ನಾಗ್ಪುರದಿಂದ ಬೆಂಗಳೂರಿಗೆ ಸಪ್ಲೈ ಆಗುತ್ತಿದ್ದ ಕಂಟ್ರಿಮೇಡ್ ಪಿಸ್ತೂಲ್ ಡೀಲರ್‌ನನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ನಾಗ್ಪುರ ಮೂಲದ ನೀಲೇಶ್ ನಾವರೆ ಬಂಧಿತ ಆರೋಪಿಯಾಗಿದ್ದಾನೆ. ಬೆಂಗಳೂರಿನ ಡಿ.ಜೆ. ಹಳ್ಳಿ ಇನ್ಸ್ ಪೆಕ್ಟರ್ ಪ್ರಕಾಶ್ ಅಂಡ್ ಟೀಂ ಸದ್ಯ ಈ ಕಿಡಿಗೇಡಿಗಳ ಪ್ಲಾನ್ ಅನ್ನು ಪ್ಲಾಫ್ ಮಾಡಿದ್ದಾರೆ.
ಗನ್ ಡೀಲರ್ ನೀಲೇಶ್ ಡಿ.ಜೆ. ಹಳ್ಳಿಯ ಹಾಗೂ ಬೆಂಗಳೂರಿನಲ್ಲಿ ಕ್ರಿಮಿನಲ್ ಚಟುವಟಿಕೆ ಹಿನ್ನೆಲೆಯುಳ್ಳ ವ್ಯಕ್ತಿಯೊಬ್ಬನಿಗೆ ಪಿಸ್ತೂಲ್ ನೀಡಲು ಬಂದಿದ್ದ. ಈತ ಅನುಮಾನಸ್ಪದವಾಗಿ ಬ್ಯಾಗ್ ಹಿಡಿದು ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಕೂಡಲೇ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತನ ಬಳಿ ಎರಡು ಕಂಟ್ರಿಮೇಡ್ ಪಿಸ್ತೂಲ್ ಹಾಗೂ ಆರು ಜೀವಂತ ಗುಂಡುಗಳು ಪತ್ತೆಯಾಗಿವೆ.
ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ಡಿ.ಜೆ. ಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪಿಸ್ತೂಲನ್ನು ಯಾರು ಬುಕ್ ಮಾಡಿದ್ದರು ಎಂಬ ಬಗ್ಗೆ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು ಸಿಕ್ಕಿರುವ ಮೊಬೈಲ್ ನಂಬರ್ ಪರೀಶಿಲಿಸುತ್ತಿದ್ದಾರೆ.
PublicNext
25/08/2022 05:55 pm