ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಓಲಾ, ರ‍್ಯಾಪಿಡ್ ಆಟೋಗಳಿಗೆ ಕಡಿವಾಣ ಹಾಕಲು ಪ್ರತಿಭಟನೆ

ಬೆಂಗಳೂರು: ಮೂರು ದಿನದಿಂದ ಓಲಾ, ಉಬರ್, ರ‍್ಯಾಪಿಡ್ ಆಟೋ ಚಾಲಕರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇಂದು ಜಯನಗರ ಆರ್.ಟಿ.ಓ ಅಧಿಕಾರಿಗಳಿಂದ ನಾಲ್ಕು ಕಡೆ ಆಟೋ ಸೀಜ್ ಆಗಿದೆ. ಸೀಜ್‌ ಆದ ವಾಹನಗಳಿಂದ ಆಟೋ ಚಾಲಕರು ರೊಚ್ಚಿಗೆದ್ದಿದ್ದಾರೆ. ಓಲಾ ಆ್ಯಪ್‌ಗಳಿಂದ ಕಮಿಷನ್ ದಂಧೆ ಹೆಚ್ಚಾಗ್ತಿದೆ ಎಂದು ಆಟೋ ಚಾಲಕರು ಸರ್ಕಾರಕ್ಕೆ ಪ್ರತಿಭಟನೆ ಮಾಡುವ ಮೂಲಕ ಬಿಸಿ ಮುಟಿಸಿದ್ದಾರೆ.

ಯಾವುದೇ ಸರ್ಕಾರದ ಆದೇಶ ಇಲ್ಲದೇ ಆಟೋ ಜಪ್ತಿ ಮಾಡಿದ್ದಾರೆಂದು ಆಟೋ ಚಾಲಕರು ಧರಣಿ ನಡೆಸುತ್ತಿದ್ದು, ಪ್ರತಿಭಟನೆಯಿಂದ ಸೀಸ್ ಆದ ಆಟೋ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆಟೋ ಚಾಲಕರಿಗೆ ಓಲಾ, ಉಬರ್ ಕಂಪನಿಗಳು ಯಮಾರಿಸಿದೆ. ಆಟೋ ಪ್ರಯಾಣಿಕರ ಸುಲಿಗೆಗೆ ಮುಂದಾದ ಓಲಾ ರ‍್ಯಾಪಿಡ್ ಕಂಪನಿಗಳ ವಿರುದ್ಧ ಚಾಲಕರು ರೊಚ್ಚಿಗೆದ್ದಿದ್ದು, ನಾಳೆ ಇದೇ ವಿಷಯವಾಗಿ ಆಟೋ ಚಾಲಕ ಸಂಘಟನೆಗಳ ಸಭೆ ನಡೆಯಲಿದೆ.

Edited By : Manjunath H D
PublicNext

PublicNext

10/10/2022 08:43 pm

Cinque Terre

44.08 K

Cinque Terre

0

ಸಂಬಂಧಿತ ಸುದ್ದಿ