ಬೆಂಗಳೂರು:ನಿನ್ನರ ದಸರಾ ಹಬ್ಬದ ಹಿನ್ನೆಲೆ ದುರ್ಗಾ ಮಾತೆ ಮೂರ್ತಿ ವಿಸರ್ಜನೆ ಮಾಡಲು ಹೋಗಿ ನೀರುಪಾಲಾಗಿದ್ದ ಇಬ್ಬರ ಮೃತದೇಹವನ್ನ ಪತ್ತೆಹಚ್ಚಲಾಗಿದೆ. ನೀರಿನಲ್ಲಿ ಮುಳುಗಿದ್ದ ಜೀತು ಹಾಗೂ ಸೋಮೇಶ್ ಮೃತದೇಹ ಅಗ್ನಿಶಾಮಕ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ನಿನ್ನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಣಕಲ್ ಪಾಳ್ಯ ಬಳಿ ನಡೆದಿದ್ದ ನೀರಿನ ಕೆರೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆಗೆ ಯುವಕರು ಮುಂದಾಗಿದ್ರು.
ಈ ವೇಳೆ ಐವರು ಯುವಕರ ಪೈಕಿ ಕೆರೆಯಲ್ಲಿ ಸೋಮೇಶ್ (21) ಜಿತು (22) ಮುಳುಗಿದ್ರು. ನಿನ್ನೆ ತಡರಾತ್ರಿಯಾಗಿದ್ರಿಂದ ಮುಂಜಾನೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಯುವಕರ ಮೃತದೇಹ ಪತ್ತೆಮಾಡಿದ್ದಾರೆ.
Kshetra Samachara
06/10/2022 02:44 pm