ವರದಿ : ಬಲರಾಮ್ ವಿ
ಬೆಂಗಳೂರು: ಕೆಆರ್ ಪುರದ ಹೊರಮಾವು ಮುಖ್ಯರಸ್ತೆಯ ಬಂಜಾರ ಲೇಔಟ್‌ನಲ್ಲಿ ಎಲೆಕ್ಟ್ರಿಕ್ ಗೋದಾಮಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಗೋದಾಮಿನ ಮೇಲ್ಛಾವಣಿ ಸುಟ್ಟು ಭಸ್ಮವಾಗಿದೆ.
ರಿಶಿಧಿವನ್ ಎಂಬುವರಿಗೆ ಸೇರಿದ ಪ್ಲೇನ್ ಶೇ ಪ್ಲೈವುಡ್ ಗೋಡೌನ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಬಂಜಾರ್ ಲೇಔಟ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ಲೈವುಡ್ ಕಾರ್ಯ ನಡೆಸಲಾಗುತ್ತಿತ್ತು.
ಏಕಾಏಕಿ ಬೆಂಕಿ ಕಂಡು ಸುತ್ತಮುತ್ತಲಿನ ಜನರು ಗಾಬರಿಗೊಂಡು ಅಗ್ನಿಶಾಮಕ ದಳದ ಸಿಬ್ಬಂದಿಗೆ ತಿಳಿಸಿದ್ದಾರೆ. ಇನ್ನು ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಲು ಯಶ್ವಸಿಯಾಗಿವೆ.
PublicNext
16/09/2022 01:43 pm