ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 16.3.2022

ಮೇಷ: ಪಾಲುದಾರಿಕೆಯಲ್ಲಿ ಧನ ನಷ್ಟ. ತಾಯಿಯ ಆರೋಗ್ಯ ಬಿಗಡಾಯಿಸಬಹುದು. ಸಾರ್ವಜನಿಕವಾಗಿ ಸಹನೆಯಿರಲಿ.

ವೃಷಭ: ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆಯಾಗ ಬಹುದು. ಹೋಟೆಲ್ ಉದ್ಯಮದವರಿಗೆ ಕೆಲಸಗಾರರ ಸಮಸ್ಯೆಯಿಂದ ನಷ್ಟ.

ಮಿಥುನ: ಬಂಧುಗಳಿಂದ ಸಾಲದ ನೆರವು ಸಿಗಲಿದೆ. ಮಕ್ಕಳ ವಿವಾಹದ ವಿಷಯದಲ್ಲಿ ಚಿಂತೆ. ವಿದೇಶ ಪ್ರಯಾಣ ಸಾಧ್ಯತೆ.

ಕಟಕ: ಹಲವು ದಿನಗಳಿಂದ ಬಾಧಿಸುತ್ತಿದ್ದ ರೋಗದ ಶಮನ. ಮಿತ್ರರಿಂದ ಅನುಕೂಲ. ಅಪರಿಚಿತರ ಸಹಾಯ ಸಿಗಬಹುದು.

ಸಿಂಹ: ನಿರುದ್ಯೋಗಿಗಳಿಗೆ ಶುಭ ಸುದ್ದಿ. ಸರ್ಕಾರಿ ಕೆಲಸಗಳಲ್ಲಿ ಯಶ. ಅಧಿಕಾರದ ದಾರಿಯ ಅಡೆತಡೆ ನಿವಾರಣೆ. ದಿನಾಂತ್ಯದಲ್ಲಿ ಶುಭ.

ಕನ್ಯಾ: ಭೂ ವ್ಯವಹಾರಸ್ಥರಿಗೆ ಲಾಭ. ಷೇರು ವ್ಯವಹಾರಗಳಲ್ಲಿ ನಷ್ಟವಾದೀತು. ಮಹಿಳೆಯರಿಗೆ ಅವ್ಯಕ್ತ ಭಯ ಕಾಡಬಹುದು.

ತುಲಾ: ಖಾಸಗಿ ಉದ್ಯೋಗಿಗಳಿಗೆ ಬದಲಾವಣೆ ಸಾಧ್ಯತೆ. ಮನೆ ಬದಲಾವಣೆ ಸಾಧ್ಯತೆ. ಮಾತಿನಿಂದ ಸಮಸ್ಯೆಯಾಗಬಹುದು, ಹುಷಾರು.

ವೃಶ್ಚಿಕ: ಆಸ್ತಿಯಿಂದ ಧನಾಗಮವಾಗುವ ಅವಕಾಶವಿದೆ. ಆದರೂ ಹಣಕಾಸಿನ ಮುಗ್ಗಟ್ಟು ಕಾಡಬಹುದು. ಆರೋಗ್ಯದಲ್ಲಿ ಸಮಸ್ಯೆ.

ಧನುಸ್ಸು: ವಿವಾಹ ಯತ್ನ ಸಫಲ. ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿದ ಜವಾಬ್ದಾರಿ. ಕೃಷಿ ಉಪಕರಣ ಖರೀದಿಯಲ್ಲಿ ಮೋಸ.

ಮಕರ: ಚಿನ್ನ ಬೆಳ್ಳಿ ವ್ಯವಹಾರಸ್ಥರಿಗೆ ನಷ್ಟ. ವೈದ್ಯ ವಿದ್ಯಾರ್ಥಿಗಳಿಗೆ ನಿರಾಸೆ. ಅನಾರೋಗ್ಯ ಸಮಸ್ಯೆ ಸಾಧ್ಯತೆ. ದಿನಾಂತ್ಯದಲ್ಲಿ ಪ್ರಯಾಣ.

ಕುಂಭ: ಗೃಹ ನಿರ್ಮಾಣದ ಪ್ರಾರಂಭಕ್ಕೆ ಸಿದ್ಧತೆ. ಆತ್ಮೀಯ ಸ್ನೇಹಿತರಿಂದ ಮೋಸ. ಆಕರ್ಷಣೆಗಳಿಗೆ ಒಳಗಾಗಿ ಧನ ನಷ್ಟವಾಗುವ ಸಂಭವ.

ಮೀನ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ. ಹಣದ ಲೇವಾದೇವಿ ವ್ಯವಹಾರದವರಿಗೆ ಕಷ್ಟ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಭೂಲಾಭ.

Edited By : Nirmala Aralikatti
PublicNext

PublicNext

16/03/2022 07:35 am

Cinque Terre

72.23 K

Cinque Terre

0