ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ಶುಕ್ರವಾರ 06 ಡಿಸೆಂಬರ್ 2024

ಮೇಷ

ಖರ್ಚುಗಳ ಹೆಚ್ಚಳವು ಇಂದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಆದಾಗ್ಯೂ, ವೈವಾಹಿಕ ಜೀವನವು ಆನಂದದಾಯಕವಾಗಿರಲಿದೆ. ಸಂಜೆ ವೇಳೆಗೆ ನಿಮ್ಮ ಹೆತ್ತವರ ಆಶೀರ್ವಾದದಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಕಠಿಣ ಕೆಲಸಗಳಲ್ಲಿ ಸ್ನೇಹಿತರು ಸಹಾಯಕ್ಕೆ ಬರಲಿದ್ದಾರೆ.

ವೃಷಭ

ನಿಮಗಿಂದು ವ್ಯಾಪಾರದಲ್ಲಿದ್ದ ಅಡೆತಡೆಗಳು ನಿವಾರಣೆಯಾಗಳಿವೆ. ಹೊಸ ಲಾಭದಾಯಕ ಕೆಲಸಗಳು ಬರಬಹುದು. ಹೊಸ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಂದು ಸಹಿ ಹಾಕದಿರುವುದು ಉತ್ತಮ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಉನ್ನತಿ ಸಾಧಿಸಲು ಕಷ್ಟಪಟ್ಟು ಓದಿ. ಸಂಬಂಧಿಕರಿಂದ ಆರ್ಥಿಕ ಲಾಭ.

ಮಿಥುನ

ವ್ಯಾಪಾರಿಗಳಿಗಿಂದು ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಸುವರ್ಣಾವಕಾಶವಿದೆ. ಇದು ನಿಮ್ಮ ಮನಸ್ಸಿಗೆ ಸಂತೋಷವನ್ನು ತರಲಿದೆ ಕೌಟುಂಬಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ತಾಳ್ಮೆ ವಹಿಸದಿದ್ದರೆ ಪಡೆಯುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.

ಕರ್ಕಾಟಕ

ನೀವಿಂದು ವೃತ್ತಿ ಬದುಕಿನಲ್ಲಿ ಪ್ರಗತಿಯ ಅವಕಾಶಗಳನ್ನು ಎದುರುನೋಡಬಹುದು. ಮಕ್ಕಳಿಂದ ಕೆಲವು ಸಂತಸದ ಸುದ್ದಿಗಳನ್ನು ಕೇಳುವಿರಿ. ಕುಟುಂಬದ ಸದಸ್ಯರೇ ನಿಮ್ಮ ಪ್ರಮುಖ ಕೆಲಸಗಳಿಗೆ ತೊಡುಕುಂಟುಮಾಡಬಹುದು. ತಾಯಿ ಕಡೆಯಿಂದ ಪ್ರೀತಿ ಗೌರವವು ಹೆಚ್ಚಾಗುತ್ತದೆ. ಕುಟುಂಬದ ಆಸ್ತಿಗೆ ಸಂಬಂಧಿಸಿದ ವಿವಾದಗಳು ಬಗೆಹರಿಯಲಿವೆ.

ಸಿಂಹ

ನಿಮ್ಮ ಪರಿಚಯಸ್ಥರಿಗೆ ನೀವಿಂದು ಮಾಡುವ ಸಹಾಯವು ಭವಿಷ್ಯದಲ್ಲಿ ನಿಮಗೆ ಲಾಭದಾಯಕವಾಗಿರಲಿದೆ. ಇಂದು ಯಾವುದೇ ರೀತಿಯ ಸಾಲ ಪಡೆಯುವುದನ್ನು ತಪ್ಪಿಸಿ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಹಾದಿ ಸುಗಮವಾಗಲಿದೆ. ಮಾತಿನಲ್ಲಿ ಮೃದುತ್ವವನ್ನು ಕಾಯ್ದುಕೊಳ್ಳಿ.

ಕನ್ಯಾ

ನೀವಿಂದು ಕೈಹಾಕುವ ಯಾವುದೇ ಕೆಲಸದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುವಿರಿ. ತಾಯಿ ಮಹಾಲಕ್ಷ್ಮೀ ಕೃಪೆಯಿಂದ ನೀವು ಬಹುದಿನಗಳ ಕನಸು ನನಸಾಗಲಿದೆ. ಹೊಸ ವ್ಯವಹಾರದಲ್ಲಿ ಹೂಡಿಕೆಯು ಫಲಪ್ರದವಾಗಿರುತ್ತದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ.

ತುಲಾ

ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗೌರವ ಹ್ಚ್ಚಾಗಲಿದೆ. ಕೆಲಸದ ಹೊರೆ ಹೆಚ್ಚಾಗುವುದು ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಕಷ್ಟದಲ್ಲಿರುವ ಸ್ನೇಹಿತರಿಗೆ ನೀವು ನೆರವು ನೀಡುವಿರಿ. ವ್ಯಾಪಾರ ಕ್ಷೇತ್ರದಲ್ಲಿ ನಿಮ್ಮ ಶತ್ರುಗಳೂ ಹಾನಿ ಉಂಟು ಮಾಡಬಹುದು.

ವೃಶ್ಚಿಕ

ಪಾಲುದಾರಿಕೆ ವ್ಯವಹಾರಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಮಾತನ್ನು ನಿಯಂತ್ರಿಸಬೇಕು. ಸಂಬಂಧಿಕರೊಂದಿಗೆ ಯಾವುದೇ ವಿವಾದ ಹೊಂದಿರಬಹುದು. ಆದಾಗ್ಯೂ, ಕುಟುಂಬದಲ್ಲಿ ಮಕ್ಕಳೊಂದಿಗೆ ಸಮಯವನ್ನು ಆನಂದಿಸುವಿರಿ.

ಧನು

ಈ ರಾಶಿಯ ವ್ಯಾಪಾರಿಗಳು ಇಂದು ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬ ಸದಸ್ಯರ ಇಷ್ಟಾರ್ಥಗಳನ್ನು ಈಡೇರಿಸುವ ಸುಖ ಪ್ರಾಪ್ತಿಯಾಗಲಿದೆ. ಭವಿಷ್ಯದ ದೃಷ್ಟಿಯಿಂದ ಸ್ವಲ್ಪ ಉಳಿತಾಯದತ್ತ ಗಮನಹರಿಸಿ. ಪೋಷಕರೊಂದಿಗೆ ವಿಹಾರಕ್ಕೆ ತೆರಳಬಹುದು.

ಮಕರ

ಇಂದು ನೀವು ನಿಮ್ಮ ಪ್ರತಿ ಕೆಲಸಗಳಲ್ಲಿ ಜೀವನ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಉದ್ಯೋಗಿಗಳು ಕೆಲಸದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಸಂಜೆ ಆಧ್ಯಾತ್ಮದಲ್ಲಿ ಒಲವು ಹೆಚ್ಚಾಗಬಹುದು.

ಕುಂಭ

ಈ ರಾಶಿಯ ರಾಜಕಾರಣಿಗಳಿಗೆ ಇಂದು ವಿಶೇಷವಾಗಿ ಫಲಪ್ರದವಾಗಿದೆ. ಉದ್ಯೋಗ ಬದಲಾವಣೆ ಚಿಂತನೆಯಲ್ಲಿರುವವರಿಗೆ ಶುಭ ದಿನ. ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಕೂಡಿಡುವುದನ್ನು ಪರಿಗಣಿಸಿ. ಒಡಹುಟ್ಟಿದವರೊಂದಿಗೆ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ.

ಮೀನ

ಇಂದು ನೀವು ಯಾವುದಾದರೂ ಶುಭ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ. ಪ್ರೀತಿ-ಪ್ರೇಮದಲ್ಲಿರುವವರಿಗೆ ಸ್ವಲ್ಪ ಒತ್ತಡದ ದಿನವಾಗಿದೆ. ಸಂಜೆ ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪ ಸಾಧ್ಯತೆ ಇರುವುದರಿಂದ ಅನವಶ್ಯಕವಾಗಿ ಮಾತನಾಡುವುದನ್ನು ತಪ್ಪಿಸಿ.

Edited By : Nagaraj Tulugeri
PublicNext

PublicNext

06/12/2024 08:41 am

Cinque Terre

16.52 K

Cinque Terre

0