ಮೇಷ
ನಿಮಗಿಂದು ಉತ್ತಮವಾದ ದಿನ. ಸಹೋದರರ ನಡುವಿನ ಮನಸ್ತಾಪ ಬಗೆಹರಿಯಲಿದೆ. ಹಳೆಯ ತಪ್ಪುಗಳಿಗಾಗಿ ಹಿರಿಯರ ಬಳಿ ಕ್ಷಮೆ ಯಾಚಿಸಿದರೆ ಒಳಿತು. ಕುಟುಂಬದಲ್ಲಿ ಸಂತಸದ ವಾತಾವರಣವನ್ನು ಅನುಭವಿಸುವಿರಿ. ದೂರದ ಸಂಬಂಧಿಕರನ್ನು ಭೇಟಿಯಾಗಬಹುದು.
ವೃಷಭ
ಇಂದು ನಿಮಗೆ ಉತ್ತಮ ದಿನ. ವ್ಯವಹಾರದಲ್ಲಿ ಪರಿಸ್ಥಿತಿಗಳು ಮೊದಲಿಗಿಂತ ಅನುಕೂಲಕರವಾಗಿರಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತೀರಿ. ಹಣ ಗಳಿಸಲು ಹಲವು ದಾರಿಗಳು ತೆರೆದುಕೊಳ್ಳಲಿವೆ. ಉದ್ಯೋಗ ಕ್ಷೇತ್ರದಲ್ಲಿ ಗುಡ್ ನ್ಯೂಸ್ ಕೇಳಬಹುದು.
ಮಿಥುನ
ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ನಿಮ್ಮ ನೆಚ್ಚಿನ ಉದ್ಯೋಗ ದೊರೆಯಲಿದೆ. ಹೊಸ ವ್ಯವಹಾರವನ್ನು ಆರಂಭಿಸಲು ದಿನವೂ ತುಂಬಾ ಪ್ರಾಶಸ್ತ್ಯವಾಗಿದೆ. ಕೆಲಸದಲ್ಲಿ ಪ್ರಗತಿ ಹೊಂದಲು ಅನುಭವಸ್ಥರಿಂದ ಸಲಹೆಯನ್ನು ಪಡೆಯಿರಿ.
ಕರ್ಕಾಟಕ
ಈ ದಿನ ನೀವು ಮಿಶ್ರ ಫಲಗಳನ್ನು ಅನುಭವಿಸಬೇಕಾಗಬಹುದು. ಕೆಲಸದಲ್ಲಿ ಸಣ್ಣ ನಿರ್ಲಕ್ಷ್ಯವೂ ಕೂಡ ನಿಮ್ಮನ್ನು ಭಾರೀ ನಷ್ಟದತ್ತ ಕೊಂಡೊಯ್ಯುವ ಸಾಧ್ಯತೆ ಇದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.
ಸಿಂಹ
ಇಂದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಸ್ವಂತ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗಸ್ಥರಿಗೆ ಹೊಸ ಅವಕಾಶಗಳು ದೊರೆಯುವ ಸಾಧಯ್ತೆ ಇದೆ. ರಾಜಕೀಯ ಜೀವನದಲ್ಲಿರುವವರಿಗೆ ಫಲಪ್ರದವಾದ ದಿನ. ಕೌಟುಂಬಿಕ ಸಂಬಂಧಗಳು ಬಲಗೊಳ್ಳುತ್ತವೆ.
ಕನ್ಯಾ
ಇಂದು ನಿಮಗೆ ಸಾಮಾನ್ಯವಾದ ದಿನವಾಗಿರುತ್ತದೆ. ಬೇರೆಯವರ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಯಾವುದಾದರೂ ದೊಡ್ಡ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ಕ್ಷೇತ್ರ ತಜ್ಞರಿಂದ ಸಲಹೆ ಪಡೆದು ಮುಂದುವರೆಯುವುದನ್ನು ಪರಿಗಣಿಸಿ.
ತುಲಾ
ಈ ದಿನ ನೀವು ಕುಟುಂಬ ಜೀವನದಲ್ಲಿ ಸಾಮರಸ್ಯವನ್ನು ಕಾಣುವಿರಿ. ದೊಡ್ಡ ಜವಾಬ್ದಾರಿಯೊಂದು ನಿಮ್ಮ ಹೆಗಲೇರಬಹುದು. ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿಯೂ ಬಲಗೊಳ್ಳಲಿದೆ. ನಿಮ್ಮ ಮಕ್ಕಳು ಇಂದು ನಿಮ್ಮ ದಿನವನ್ನು ಬೆಳಗಳಿದ್ದಾರೆ.
ವೃಶ್ಚಿಕ
ಈ ದಿನ ನಿಮಗೆ ಅತ್ಯುತ್ತಮವಾಗಿದೆ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ಕೌಟುಂಬಿಕ ಬದುಕಿನಲ್ಲಿ ಶಾಂತಿ ಸಂತೋಷದ ವಾತಾವರಣವನ್ನು ಅನುಭವಿಸುವಿರಿ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಪ್ರಗತಿ ಕಾಣುವಿರಿ.
ಧನು
ಇಂದು ನಿಮಗೆ ಅನುಕೂಲಕರವಾದ ದಿನವಾಗಿರುತ್ತದೆ. ದೈನಂದಿನ ಕಾರ್ಯಗಳು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಇಂದು ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಮೊದಲು ಹಿರಿಯರ ಸಲಹೆ ಪಡೆಯಿರಿ. ತಂದೆಯಿಂದ ನಿಮ್ಮ ಇಷ್ಟಾರ್ಥ ಸಿದ್ಧಿಯಾಗಲಿದೆ.
ಮಕರ
ಕೆಲಸದಲ್ಲಿ ಎದುರಾಗಿದ್ದ ಅಡೆತಡೆಗಳನ್ನು ಮೆಟ್ಟಿ ನಿಲ್ಲುವಿರಿ. ನಿಮ್ಮ ತಾಯಿ ಕಡೆಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ವಿದೇಶದಲ್ಲಿ ವ್ಯಾಪಾರ ಮಾಡುವವರಿಗೆ ಬಂಪರ್ ಲಾಭವಾಗಲಿದೆ. ಹಣಕ್ಕೆ ಸಂಬಂಧಿಸಿದಂತೆ ನಿಮ್ಮ ಸಮಸ್ಯೆಗಳು ಕೊನೆಗೊಳ್ಳಲಿವೆ.
ಕುಂಭ
ಇಂದು ನಿಮಗೆ ಲಾಭದಾಯಕವಾದ ದಿನ. ಯಾವುದೇ ಕ್ಷೇತ್ರದಲ್ಲಿ ಕೆಯಲ್ಸ ಮಾಡುತ್ತಿದ್ದರೂ ಅಡೆತಡೆಗಳು ನಿವಾರಣೆಯಾಗಿ ಉತ್ತಮ ಫಲವನ್ನು ಪಡೆಯುವಿರಿ. ದಾಂಪತ್ಯ ಜೀವನದಲ್ಲಿ ಮೂಡಿದ್ದ ಬಿರುಕುಗಳು ಸರಿಹೋಗಲಿವೆ. ಕುಟುಂಬದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ.
ಮೀನ
ಇಂದಿನ ದಿನವು ನಿಮಗೆ ಮೊದಲಿಗಿಂತ ಹೆಚ್ಚು ಲಾಭದಾಯಕವಾಗಿರುತ್ತದೆ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಕೊನೆಗೊಳ್ಳಲಿವೆ. ಆರೋಗ್ಯದ ದೃಷ್ಟಿಯಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ವ್ಯಾಪಾರಸ್ಥರು ಉತ್ತಮ ಆದಾಯವನ್ನು ಕಾಣಬಹುದು.
PublicNext
09/12/2024 08:32 am