ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: ಬುಧವಾರ 11 ಡಿಸೆಂಬರ್ 2024

ಮೇಷ

ನಿಮ್ಮ ದೈನಂದಿನ ದಿನಚರಿಯಿಂದ ಹೊರಗುಳಿದು, ಹೊಸತಾದ ಜೀವನವನ್ನು ಅನುಭವಿಸುವ ಮನಸ್ಸು ಮಾಡುವಿರಿ. ನಿಮಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುವಿರಿ. ಬೇರೆಯವರ ಸೌಕರ್ಯಕ್ಕಿಂತ ಸ್ವಂತ ಅಗತ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ.

ವೃಷಭ

ಇಂದು ನೀವು ಸ್ವಲ್ಪ ಪ್ರಕ್ಷುಬ್ಧತೆಯನ್ನು ಅನುಭವಿಸುವಿರಿ. ಹೆಚ್ಚಿನ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವಿರಿ. ನಿಮ್ಮನ್ನು ಪ್ರಚೋದಿಸುವ ಸವಾಲುಗಳ ಹಿಡಿತಕ್ಕೆ ಬರದಂತೆ ಸ್ವಯಂ ನಿಯಂತ್ರಣಕ್ಕೆ ಆದ್ಯತೆ ನೀಡಿ.

ಮಿಥುನ

ಇತರರೊಂದಿಗೆ ಮಾತನಾಡುವಾಗ ಅರ್ಥಪೂರ್ಣ ಸಂಭಾಷಣೆ ನಡೆಸಲು ಆದ್ಯತೆ ನೀಡಿ. ನೆಟ್‌ವರ್ಕಿಂಗ್ ಈವೆಂಟ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ನಿಮ್ಮ ತ್ವರಿತ ಬುದ್ದಿ ಆಕರ್ಷಕ ವ್ಯಕ್ತಿತ್ವವು ಬೇರೆಯವರನ್ನು ನಿಮ್ಮತ್ತ ಸೆಳೆಯುತ್ತದೆ. ಕೆಲಸದಲ್ಲಿ ಮೇಲಾಧಿಕಾರಿಗಳ ಮನ್ನಣೆ ಗಳಿಸುವಿರಿ.

ಕರ್ಕಾಟಕ

ನಿಮ್ಮ ಪ್ರೀತಿಪಾತ್ರರು ಇಂದು ನಿಮ್ಮೊಂದಿಗೆ ಭಾವನಾತ್ಮಕವಾಗಿರಬಹುದು. ಕುಟುಂಬದಲ್ಲಿ ಗುಣಮಟ್ಟದ ಸಮಯವನ್ನು ಆನಂದಿಸುವಿರಿ. ನಿಮ್ಮ ಭಾವನಾತ್ಮಕ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಿ. ಭಾವನಾತ್ಮಕವಾಗಿ ನಿಮ್ಮ ಅಡಿಪಾಯವು ಎಂತಹುದೇ ಸಂದರ್ಭದಲ್ಲಿ ನಿಮ್ಮನ್ನು ಬೆಂಬಲಿಸುತ್ತದೆ.

ಸಿಂಹ

ನಿಮ್ಮ ಮನಸ್ಸಿನ ಆಲೋಚನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಿರಿ. ಇದರಿಂದ ಸಂದಿಗ್ಧ ಪರಿಸ್ಥಿತಿಗಳನ್ನು ನಿವಾರಿಸಲು ಸುಲಭ ಮಾರ್ಗ ದೊರೆಯುತ್ತದೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಪ್ರಯತ್ನಿಸಿದರೆ ವರ್ಚಸ್ಸು ಹೆಚ್ಚಾಗಲಿದೆ.

ಕನ್ಯಾ

ಕೆಲಸಗಳನ್ನು ಮುಂದೂಡದೆ ಸಂಘಟನೆ ಮಾರ್ಗದ ಮೂಲಕ ಗುರಿ ಮುಟ್ಟಲು ಪ್ರಯತ್ನಿಸಿ. ನಿಮ್ಮ ಜೀವನ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ವಿಶ್ಲೇಷನಾತ್ಮಕ ಸ್ವಭಾವವು ಇಂದು ಫಲಪ್ರದವಾಗಿರಲಿದೆ.

ತುಲಾ

ನಿಮ್ಮ ಜೀವನದಲ್ಲಿ ಸಮತೋಲನ ಮತ್ತು ಸಾಮರಸ್ಯದ ಅರ್ಥವನ್ನು ಸಾಧಿಸಲು ಪ್ರಯತ್ನಿಸಿ. ಬೇರೆಯವರ ಜಗಳದಲ್ಲಿ ಮಧ್ಯಸ್ಥಿಕೆ ವಹಿಸುವಾಗ ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳದಂತೆ ನಿಗವಹಿಸಿ. ನಿಮ್ಮ ಬಾಹ್ಯ ಪ್ರಪಂಚದೊಳಗೆ ಸಮತೋಲನ ಸೃಷ್ಟಿಸುವಟ್ಟ ಗಮನಹರಿಸಿ.

ವೃಶ್ಚಿಕ

ಇಂದು ಯಾವುದಾದರೂ ರಹಸ್ಯ ಬೇಧಿಸುವತ್ತ ನಿಮ್ಮ ಮನಸ್ಸು ಸೆಳೆಯಬಹುದು. ಇಂತಹ ವಿಚಾರದಲ್ಲಿ ಉತ್ಸಾಹವು ನಿಮ್ಮ ಜ್ಞಾನ ತಿಳುವಳಿಕೆಯನ್ನು ಹೆಚ್ಚಿಸಲಿದೆ. ದಿನಾಂತ್ಯದ ವೇಳೆಗೆ ಕೆಲವು ಆಶ್ಚರ್ಯಗಳು ಬಹಿರಂಗಗೊಳ್ಳಬಹುದು.

ಧನು

ಯಾವುದೇ ಪ್ರಮುಖ ವ್ಯವಹಾರದಲ್ಲಿ ಸಹಿ ಹಾಕುವ ಮುನ್ನ ಜಾಗರೂಕರಾಗಿರಿ. ಹೂಡಿಕೆ ಸಂಬಂಧಿತ ವಿಚಾರಗಳಲ್ಲಿ ತಿಳುವಳಿಕೆ ಇರುಯವರ ಸಹಾಯವನ್ನು ಪಡೆಯುವುದನ್ನು ನಿರ್ಲಕ್ಷಿಸಬೇಡಿ. ಆಸಕ್ತಿದಾಯಕ ಹೊಸ ಅವಕಾಶಗಳು ನಿಮ್ಮ ದಾರಿಯಲ್ಲಿ ಬರುವ ಸಂಭವವಿದೆ.

ಮಕರ

ದೀರ್ಘಕಾಲಿನ ಗುರಿ ಮತ್ತು ಮಹಾತ್ವಕಾಂಕ್ಷೆಗಳಲ್ಲಿ ನಿಮ್ಮೆಲ್ಲಾ ಶಕ್ತಿಯನ್ನು ಕೇಂದ್ರೀಕರಿಸಿರುವಿರಿ ಎಂದು ನೀವು ಭಾವಿಸಬಹುದು. ಇದು ವ್ಯಾಪಾರ ಯೋಜನೆ ಅಥವಾ ಹೊಸ ವ್ಯವಹಾರವಾಗಿರಲಿ ನಿಮ್ಮ ಗುರಿ ಸಾಧಿಸಲು ಕಠಿಣ ಪರಿಶ್ರಮದ ಅಗತ್ಯವಿದೆ ಎಂಬುದನ್ನು ಅರಿತು ಮುಂದುವರೆದರೆ ಒಳಿತು.

ಕುಂಭ

ಯಾವುದಾದರೂ ಸಭೆ ಸಮಾವೇಶಗಳಲ್ಲಿ ನಿಮ್ಮ ಪ್ರತ್ಯೇಕತೆಯ ಬಗ್ಗ್ ಮುಕ್ತವಾಗಿ ಮಾತನಾಡುವ ಬಯಕೆ ಹೊಂದಿರಬಹುದು. ಕೆಲಸದಲ್ಲಿ ಹೊಸತನವನ್ನು ಹುಡುಕಲು ಪ್ರಯತ್ನಿಸುವಿರಿ. ನಿಮ್ಮ ಅನನ್ಯ ದೃಷ್ಟಿಕೋಣ ಮತ್ತು ನವೀನ ಆಲೋಚನೆಗಳಿಗೆ ಒತ್ತು ನೀಡಿ.

ಮೀನ

ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ನೀವು ಬಲವಾದ ಸಂಪರ್ಕವನ್ನು ಪಡೆಯಬಹುದು. ನಿಮ್ಮ ಅಂತಃಪ್ರಜ್ಞೆ ಇಂದು ಜಾಗೃತಗೊಳ್ಳಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಗಮನ ಕೇಂದ್ರೀಕರಿಸುವ ಅಗತ್ಯವಿದೆ. ಸುತ್ತಮುತ್ತಲಿನ ಬದಲಾವಣೆಗೆ ತಕ್ಕಂತೆ ನಿಮ್ಮನ್ನು ನೀವು ಬದಲಿಸಿಕೊಳ್ಳಲು ಪ್ರಯತ್ನಿಸಿ.

Edited By : Nagaraj Tulugeri
PublicNext

PublicNext

11/12/2024 09:11 am

Cinque Terre

9.23 K

Cinque Terre

0