ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 12.12.2024

ಮೇಷ: ಅನಿರೀಕ್ಷಿತ ಘಟನೆ ನಡೆಯಲಿದೆ. ಕೃಷಿಕರಿಗೆ ಅತ್ಯಂತ ಸಂತೋಷದಾಯಕ ವಾತಾವರಣ. ಸಂಗೀತ ವಾದ್ಯಗಾರರಿಗೆ ಶುಭ.

ವೃಷಭ: ರತ್ನಗಳ ವ್ಯಾಪಾರದಲ್ಲಿ ಎಚ್ಚರಿಕೆಯಿಂದ ಇರುವುದು ಅಪೇಕ್ಷಣೀಯ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ, ಮಾನಸಿಕ ಅಶಾಂತಿ.

ಮಿಥುನ: ತಾಯಿಯ ಆಸ್ತಿ ಲಭ್ಯ. ಸಂಧಾನದ ಬಳಿಕ ಬಹುಕಾಲದಿಂದ ಇದ್ದ ಭೂವಿವಾದ ಇತ್ಯರ್ಥ. ಸಂತಾನಾಕಾಂಕ್ಷಿಗಳಿಗೆ ಅಶುಭ.

ಕಟಕ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಮುನ್ನಡೆ ಸಿಗಲಿದೆ. ಅಪಾಯದ ಕೆಲಸಗಳು ಸುಲಭವಾಗುತ್ತವೆ. ಸ್ಥಿರಾಸ್ತಿಯನ್ನು ಕಾಪಾಡಿಕೊಳ್ಳಿ.

ಸಿಂಹ: ಶಿಕ್ಷಕರಿಗೆ ಬಡ್ತಿ ದೊರೆಯಲಿದೆ. ವಾಣಿಜ್ಯ ಇಲಾಖೆಯಲ್ಲಿ ಇರುವವರಿಗೆ ಅಧಿಕಾರ ಪ್ರಾಪ್ತಿ. ಹೋಟೆಲ್ ವ್ಯಾಪಾರದಲ್ಲಿ ಲಾಭ.

ಕನ್ಯಾ: ವಾಣಿಜ್ಯಶಾಸ್ತ್ರ ಅಧ್ಯಯನದಲ್ಲಿ ಪ್ರಗತಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭ. ಮಕ್ಕಳಿಗೋಸ್ಕರ ಅನವಶ್ಯಕ ಖರ್ಚು ಮಾಡುವಿರಿ.

ತುಲಾ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇರದು. ಕೌಟುಂಬಿಕ ವಿಷಯದಲ್ಲಿ ತಾಳ್ಮೆ ಅತ್ಯಗತ್ಯ. ವಿದ್ಯಾರ್ಥಿಗಳಿಗೆ ಆತಂಕ ಕಾಡುವುದು.

ವೃಶ್ಚಿಕ: ಹಣಕಾಸಿನ ಕೊರತೆ ಉಂಟಾಗುವುದು. ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಸಿಗಲಿದೆ. ಸಾಫ್ಟ್ ವೇರ್ ಉದ್ಯೋಗಿಗಳಿಗೆ ಶುಭದಿನ.

ಧನಸ್ಸು: ಉತ್ತಮ ಕ್ಷೇತ್ರದಲ್ಲಿ ಉದ್ಯೋಗ ದೊರೆತು ನೆಮ್ಮದಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಹಿನ್ನಡೆ. ಪಶು ಸಂಗೋಪನೆಯಲ್ಲಿ ಆಸಕ್ತಿ.

ಮಕರ: ಷೇರು ಮಾರುಕಟ್ಟೆ ವ್ಯಾಪಾರದಲ್ಲಿ ಆದಾಯ. ಸರ್ಕಾರಿ ಉದ್ಯೋಗಿಗಳಿಗೆ ಯಶಸ್ಸು. ರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಒತ್ತಡ.

ಕುಂಭ: ಪುಸ್ತಕ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಗಾಯಗಳಾಗುವ ಸಂಭವ.

ಮೀನ: ಹೋಟೆಲ್ ವ್ಯಾಪಾರದಲ್ಲಿ ಕೆಲಸಗಾರರ ತೊಂದರೆ. ಬೇಕರಿ ವ್ಯಾಪಾರದಲ್ಲಿ ಆದಾಯ. ನಿರ್ವಪಕರಿಗೆ ನಷ್ಟದ ಭೀತಿ ಕಾಡಲಿದೆ.

Edited By : Nirmala Aralikatti
PublicNext

PublicNext

12/12/2024 07:16 am

Cinque Terre

21.53 K

Cinque Terre

0