ಮೇಷ ರಾಶಿ: ನಿಮ್ಮ ಸೇವೆ, ಸಾಮಾಜಿಕ ಕಳಕಳಿಗೆ ಜನ ಮನ್ನಣೆ ಸಿಗುವ ದಿನ. ಬೆಲೆ ಬಾಳುವ ವಸ್ತು ಖರೀದಿ ಮಾಡುವ ವಿಚಾರದಲ್ಲಿ ಚರ್ಚೆ ಮಾಡಬಹುದು. ನಿಮ್ಮ ಬಗ್ಗೆಯೇ ಹೆಚ್ಚು ಗಮನ ಕೊಡಬೇಕಾದ ದಿನ, ಭದ್ರತೆಯನ್ನು ಕಾಪಾಡಿಕೊಳ್ಳಿ.
ವೃಷಭ: ಇಂದು ತಾಳ್ಮೆಯಿಂದ ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ಸಹಕಾರಕ್ಕೆ ಅನುಗುಣವಾಗಿ ಬೆಲೆ ದೊರೆಯತ್ತದೆ. ಹಣದ ವಿಚಾರದಲ್ಲಿ ನಿರಾಸೆ ಸಾಧ್ಯತೆಯಿದೆ. ಅನಗತ್ಯ ಅಥವಾ ಅನುಪಯುಕ್ತ ಕೆಲಸಗಳಲ್ಲಿ ಸಮಯ ವ್ಯರ್ಥವಾಗಬಹುದು.
ಮಿಥುನ: ಬೇರೆಯವರ ವಿಚಾರದಲ್ಲಿ ಹಸ್ತಕ್ಷೇಪ ಬೇಡ. ಕುಟುಂಬದಲ್ಲಿ ನೆಮ್ಮದಿಯ, ಶಾಂತಿಯ ವಾತಾವರಣ ಕಾಪಾಡಿ. ಜನರು ನಿಮ್ಮ ಸಲಹೆ ಸ್ವೀಕರಿಸಬಹುದು ಅಥವಾ ಬಿಡಬಹುದು ಬಲವಂತ ಬೇಡ. ಬಂಧುಗಳಲ್ಲಿ, ಜನರಲ್ಲಿ ಸಂತೋಷದ ಸಮಯವಿದೆ ಆನಂದಿಸಿ.
ಕಟಕ: ಹಳೆಯ ವಿಚಾರಗಳನ್ನು ದೂರಮಾಡಿ, ಬೇಸರ ಕಡಿಮೆ ಮಾಡಿಕೊಳ್ಳಿ. ಅನುಕೂಲದ ಸಮಯವನ್ನು ವಿನಿಯೋಗಿಸಿಕೊಳ್ಳಿ ಹೊಸ ಹೂಡಿಕೆಗೆ ಅನುಕೂಲಕರ ದಿನ. ಸ್ವೇಚ್ಛೆ ಇರುವವರು ಗುರಿಮುಟ್ಟುವ ಬಗ್ಗೆ ಆಲೋಚನೆ ಬೇಡ.
ಸಿಂಹ: ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳಿಂದ ಮಾನಸಿಕ ನೆಮ್ಮದಿ ಸಿಗುವ ದಿನ. ಮಕ್ಕಳಿಗೆ ನೀತಿ ಪಾಠ ಹೇಳಿ ಗೌರವ ಸಂಪಾದನೆ ಮಾಡಬಹುದು ಸಮಾರಂಭಗಳಿಗೆ ಹಾಜರಾಗಬಹುದು. ನಿಮ್ಮ ಉದ್ಯಮದಿಂದ ಬೇರೆಯವರ ಪರಿಚಯವಾಗಬಹುದು. ನಿಮ್ಮ ಕೆಲಸಕ್ಕೆ, ಸಾಧನೆಗೆ ಪ್ರಶಂಸೆಯಿದೆ.
ಕನ್ಯಾ: ನಿಮ್ಮ ವೈಯಕ್ತಿಕ ವಿಚಾರಕ್ಕೆ ಬೇರೆಯವರ ಸಲಹೆ ಬೇಡ. ತಾಳ್ಮೆ ಬಹಳ ಮುಖ್ಯವಾಗಿರಬೇಕಾದ ದಿನ. ಬೇರೆಯವರು ವಿರೋಧ ಮಾಡುವ ಪರಿಸ್ಥಿತಿ ಬಂದರು ತಾಳ್ಮೆ ಕಳೆದುಕೊಳ್ಳಬಾರದು. ಜವಾಬ್ದಾರಿಗಳಿಂದ ಹೊರ ಬರಬೇಕು.
ತುಲಾ: ರಾಜಕೀಯ ಪ್ರಭಾವ ತುಂಬಾ ಕೆಲಸ ಮಾಡಬಹುದು. ಮಾತಿಗೆ ಬೆಲೆ ಜೊತೆಗೆ ಕೆಲಸವೂ ಕೂಡ ಆಗಬಹುದು. ವೃತ್ತಿಯಲ್ಲಿ ಅನುಕೂಲ ಇದೆ ಆದರೆ ತುಂಬಾ ಪರಿಶ್ರಮ ಪಡಬೇಕು. ಆರೋಗ್ಯದ ಬಗ್ಗೆ ಸುಧಾರಣೆ ಇದೆ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಮಿತ್ರರಿಂದಲೇ ತೊಂದರೆಯಾಗಬಹುದು. ವ್ಯವಹಾರದಲ್ಲಿ ಉತ್ತಮ ಲಾಭ, ಶುಭವೂ ಇದೆ. ಯಾರನ್ನಾದರು ಕ್ಷಮಿಸುವ ಪ್ರಸಂಗ ಬಂದರೆ ಕ್ಷಮಿಸಿ. ಮನೆಯ ಅಗತ್ಯತೆಗೆ ಆದ್ಯತೆ ನೀಡಿ.
ಧನಸ್ಸು: ನಿಮ್ಮ ಜವಾಬ್ದಾರಿಯುತ ಕೆಲಸ, ಕರ್ತವ್ಯಗಳನ್ನು ಗಮನಿಸಿ ಸಕಾಲದಲ್ಲಿ ಪೂರೈಸಿ. ಏನೋ ಬದಲಾವಣೆಯ ಆಲೋಚನೆ ಮನಸ್ಸಿಗೆ ಬರಬಹುದು ಆದರೆ ಸದ್ಯಕ್ಕಿಲ್ಲ. ಮದುವೆ ವಿಚಾರದಲ್ಲಿ ತಲೆ ಕೆಡಸಿಕೊಳ್ಳಬಹುದು ಆದರೆ ಪ್ರಯೋಜನವಿಲ್ಲ.
ಮಕರ: ತೋರಿಕೆಯ ಕೆಲಸದಲ್ಲಿ ಸಿಕ್ಕಿ ಬೀಳುವ ಸಾಧ್ಯತೆಗಳಿವೆ. ನಿಮ್ಮ ನೈತಿಕತೆ ಚೆನ್ನಾಗಿರುತ್ತದೆ. ಸ್ವಯಂ ಪ್ರಜ್ಞೆಯಿಲ್ಲದೆ ಕೆಲವು ಅನಾಹುತಗಳಿಗೆ ಅವಕಾಶವಿದೆ. ನಿಮ್ಮ ಪ್ರಗತಿಯ ಬಗ್ಗೆ ನಿಮಗೆ ಭಯವಿದೆ.
ಕುಂಭ: ಮಕ್ಕಳ ಪ್ರಗತಿ, ವಿದ್ಯಾಭ್ಯಾಸದಿಂದ ಸಂತೋಷ. ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಎಂಬ ದಿನ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಅಧಿಕವಾದ ಲಾಭಕ್ಕೆ ಅವಕಾಶವಿದೆ. ಸಂಬಂಧಿಕರ ಆಗಮನದಿಂದ ಸಂತೋಷವಾಗಬಹುದು.
ಮೀನ: ಕುಟುಂಬದಲ್ಲಿ ಮಂಗಳ ಕಾರ್ಯದ ಬಗ್ಗೆ ಚಿಂತನೆ ನಡೆಸಬಹುದು. ಮಿತ್ರರ ಭೇಟಿ, ವಿರೋಧಿಗಳ ಬಗ್ಗೆ ಚರ್ಚೆ ಮಾಡಬಹುದು
ಮೂಲ ಉದ್ದೇಶ ಮರೆತು ಕಾರ್ಯ ಪ್ರವೃತ್ತರಾಗುವುದರಿಂದ ತೊಂದರೆಯಾಗಬಹುದು. ಸಮಯಕ್ಕೆ ಆದ್ಯತೆ ನೀಡಿ, ಧನಾತ್ಮಕ ಫಲಿತಾಂಶ ನಿಮ್ಮದಾಗುತ್ತದೆ.
PublicNext
08/12/2024 07:19 am