ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ : 25.10.2021

ಮೇಷ: ಹಳೆಯ ಸ್ನೇಹಿತರ ಪುನರ್ವಿುಲನ. ನ್ಯಾಯಾಲಯದ ಪ್ರಕರಣದಲ್ಲಿ ಜಯ. ಕಾರಣವಿಲ್ಲದ ವಿಷಯಗಳ ಬಗ್ಗೆ ಸಮಯ ವ್ಯರ್ಥ.

ವೃಷಭ: ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುವುದು. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಸಾರ್ವಜನಿಕ ರಂಗದಲ್ಲಿ ಸನ್ಮಾನ.

ಮಿಥುನ: ಪ್ರಮುಖ ನಿರ್ಧಾರದಲ್ಲಿ ತೊಂದರೆಯ ಸಾಧ್ಯತೆ. ಕಚೇರಿಯಲ್ಲಿ ಅಸಹನೆಯಿಂದ ವರ್ತಿಸಬೇಡಿ. ಹಿತಶತ್ರುಗಳಿಂದ ಅಪಪ್ರಚಾರ.

ಕಟಕ: ಹೃದಯ ಸಂಬಂಧಿ ತೊಂದರೆಗಳು ಹೆಚ್ಚಬಹುದು. ಸಣ್ಣಪುಟ್ಟ ಕಾರಣಗಳಿಗೂ ಕೋಪಿಸಿಕೊಳ್ಳಬೇಡಿ. ಮಗಳ ಮದುವೆ ನಿಶ್ಚಯ.

ಸಿಂಹ: ಧಾರ್ವಿುಕ ಚಟುವಟಿಕೆಯಲ್ಲಿ ಭಾಗವಹಿಸಿ. ಹಣದ ಅಪವ್ಯಯದ ಬಗ್ಗೆ ನಿಗಾ ಇರಲಿ. ನಿಮ್ಮ ಹಲವು ದಿನಗಳ ಪ್ರಯತ್ನ ಸಫಲ.

ಕನ್ಯಾ: ಸುತ್ತಮುತ್ತಲಿನ ವಾತಾವರಣ ನಿಮ್ಮ ಧೈರ್ಯ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಶೇರು ಮಾರುಕಟ್ಟೆಯಲ್ಲಿ ವೈಯಕ್ತಿಕ ನಷ್ಟ.

ತುಲಾ: ಒತ್ತಡವನ್ನು ಉಪೇಕ್ಷಿಸಬೇಡಿ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಕಚೇರಿಯಲ್ಲಿ ತೊಂದರೆ. ಕಲಾವಿದರಿಗೆ ಪೋತ್ಸಾಹ.

ವೃಶ್ಚಿಕ: ಉನ್ನತ ವ್ಯಕ್ತಿಗಳ ಭೇಟಿ. ವ್ಯಾಪಾರಕ್ಕೆ ಬಂಡವಾಳ ತೊಡಗಿಸುವಿಕೆಯಲ್ಲಿ ಎಚ್ಚರವಾಗಿರಿ. ದೂರ ಪ್ರಯಾಣ ಸಾಧ್ಯತೆ.

ಧನುಸ್ಸು: ಕಚೇರಿಯಲ್ಲಿ ಒತ್ತಡ ಮತ್ತು ಸಂದಿಗ್ಧತೆಯ ವಾತಾವರಣ. ಮಕ್ಕಳ ಬಗ್ಗೆ ಹೆಮ್ಮೆ. ಪ್ರತಿಭಾನ್ವಿತರಿಗೆ ವಿಶೇಷ ಅವಕಾಶ ಪ್ರಾಪ್ತಿ.

ಮಕರ: ಮುಂಗೋಪದಿಂದ ಹಾನಿ. ಕಟ್ಟಡ ಸಾಮಗ್ರಿಗಳ ಉದ್ದಿಮೆದಾರರಿಗೆ ಅಧಿಕ ಲಾಭ. ಅವಿವಾಹಿತರಿಗೆ ವಿವಾಹದ ಭರವಸೆ.

ಕುಂಭ: ನೂತನ ದಂಪತಿಗಳಿಗೆ ಶುಭ ಸುದ್ದಿ. ಮನೆಯ ಪರಿಸ್ಥಿತಿಯಲ್ಲಿ ಸುಧಾರಣೆ. ಸಂತಾನ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ

ಮೀನ: ಸಭ್ಯ ವರ್ತನೆಯಿಂದ ಕಚೇರಿಯಲ್ಲಿ ಮೆಚ್ಚುಗೆ. ಸ್ನೇಹಿತನ ಭೇಟಿಯಿಂದ ಧನಲಾಭ. ಸಹೋದ್ಯೋಗಿಗಳೊಂದಿಗೆ ವಿಹಾರ.

Edited By : Nirmala Aralikatti
PublicNext

PublicNext

25/10/2021 07:55 am

Cinque Terre

21 K

Cinque Terre

0