ಮೇಷ: ಸುಲಭ ವಿಷಯಗಳಿಗೆ ಗೋಜಲು ಮಾಡಿ ಕೊಳ್ಳಬೇಡಿ. ಸಂಧಾನದಿಂದ ಸಮಸ್ಯೆ ಇತ್ಯರ್ಥ. ದಿನಾಂತ್ಯಕ್ಕೆ ಶುಭ
ವೃಷಭ: ಆತ್ಮೀಯರೊಂದಿಗೆ ಸಮಾಲೋಚನೆ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಬೈಗುಳ. ಸಮಾಧಾನದಿಂದಿರಿ.
ಮಿಥುನ: ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಿ. ಪತ್ನಿಯೊಂದಿಗೆ ವಿಹಾರ. ಆರೋಗ್ಯದಲ್ಲಿ ಏರುಪೇರು.
ಕಟಕ: ಆಲಸ್ಯದಿಂದ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾದೀತು. ಗೃಹನಿರ್ವಣಕ್ಕೆ ಚಿಂತನೆ. ದಿನಾಂತ್ಯಕ್ಕೆ ಆರೋಗ್ಯ ಸಮಸ್ಯೆ.
ಸಿಂಹ: ಹಿತಶತ್ರುಗಳಿಂದ ಅಸಮಾಧಾನ. ತಂದೆ-ತಾಯಿಯ ಸಲಹೆಯನ್ನು ಸ್ವೀಕರಿಸಿ. ವೈದ್ಯರ ಸಲಹೆ ನಿರ್ಲಕ್ಷಿಸಬೇಡಿ.
ಕನ್ಯಾ: ಹಳೆಯ ವಿವಾದ ಇತ್ಯರ್ಥವಾಗಲಿದೆ. ಕುಟುಂಬದವರ ಭೇಟಿ. ಮಕ್ಕಳೊಂದಿಗೆ ಸಮಯ ಕಳೆಯಿರಿ. ಸಂತಸದ ಕ್ಷಣ.
ತುಲಾ: ಸಾರ್ವಜನಿಕ ಕ್ಷೇತ್ರದಲ್ಲಿ ಎಚ್ಚರಿಕೆ. ವಾಹನ ಚಾಲನೆಯಲ್ಲಿ ಎಚ್ಚರಿಕೆಯಿಂದಿರಿ. ಹಳೆಯ ಸ್ನೇಹಿತನ ಭೇಟಿ. ಕುಶಲೋಪರಿ.
ವೃಶ್ಚಿಕ: ಬಂಧುಗಳ ಆಗಮನ. ಕುಟುಂಬದೊಂದಿಗೆ ಸಂತಸದ ಕ್ಷಣಗಳು. ಪತ್ನಿಯೊಂದಿಗೆ ಘರ್ಷಣೆ. ದಿನಾಂತ್ಯದಲ್ಲಿ ಆಯಾಸ.
ಧನಸ್ಸು: ಇಂದು ಸಿಕ್ಕಿದ ಜಯದಲ್ಲಿ ಮೈಮರೆಯಬೇಡಿ. ಶತ್ರುಗಳನ್ನು ಹಗುರವಾಗಿ ಭಾವಿಸಬೇಡಿ. ಕುಟುಂಬ ವಿವಾದ ಸುಖಾಂತ್ಯ.
ಮಕರ: ನೂತನ ಯೋಜನೆಗಳಿಗೆ ಕುಟುಂಬದ ಬೆಂಬಲ ಪಡೆಯಿರಿ. ಪತ್ನಿ-ಮಕ್ಕಳೊಂದಿಗೆ ಸಂತಸ. ಕಾಡುವ ಆರೋಗ್ಯ ಸಮಸ್ಯೆ.
ಕುಂಭ: ಕಾರ್ಯಸಿದ್ದಿಯಲ್ಲಿ ಹಲವು ಪ್ರತಿರೋಧಗಳು. ಗಣಪತಿಯನ್ನು ಪೂಜಿಸಿ. ಆರೋಗ್ಯದ ಕಡೆ ನಿಗಾ ಇರಲಿ. ಧನವ್ಯಯ.
ಮೀನ : ಬಹುದಿನದ ಕನಸು ನನಸಾಗುವ ಸುದಿನ. ವಿವಾಹದ ವಿಷಯದಲ್ಲಿ ಅಂತಿಮ ತೀರ್ವನ. ದಿನಾಂತ್ಯದಲ್ಲಿ ಶುಭವಾರ್ತೆ.
PublicNext
14/02/2021 07:22 am