ಪಂಚಾಂಗ:
ರಾಹುಕಾಲ:4.45 ರಿಂದ 6.16
ಗುಳಿಕಕಾಲ:3.15 ರಿಂದ 4.45
ಯಮಗಂಡಕಾಲ:12.14 ರಿಂದ 1.44
ವಾರ: ಭಾನುವಾರ,
ತಿಥಿ: ಏಕಾದಶಿ,
ನಕ್ಷತ್ರ : ಶ್ರವಣ,
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಅಧಿಕ ಆಶ್ವಯುಜ ಮಾಸ, ಶುಕ್ಲ ಪಕ್ಷ
ಮೇಷ: ಈ ವಾರ ಕೆಲಸಗಳಲ್ಲಿ ಸ್ವಲ್ಪ ವಿಳಂಬ, ಅನಾರೋಗ್ಯ, ವ್ಯಾಪಾರದಲ್ಲಿ ಅಲ್ಪ ಲಾಭ, ಸ್ನೇಹಿತರಿಂದ ಸಹಾಯ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ವೃಷಭ: ಈ ವಾರ ಧನ ನಷ್ಟ, ಅಕಾಲ ಭೋಜನ, ಅತಿಯಾದ ನಿದ್ರೆ, ಅನ್ಯ ಜನರಲ್ಲಿ ವೈಮನಸ್ಯ, ಸಾಲ ಮಾಡುವ ಸಂಭವ, ಋಣಭಾದೆ, ವಿವಾಹಕ್ಕೆ ತೊಂದರೆ, ಪರಸ್ಥಳ ವಾಸ, ಮನಸ್ಸಿಗೆ ಚಿಂತೆ.
ಮಿಥುನ: ಈ ವಾರ ವಾಹನ ಪ್ರಾಪ್ತಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಗೃಹಪ್ರವೇಶ ಯೋಗ, ಉದ್ಯೋಗದಲ್ಲಿ ಅಭಿವೃದ್ಧಿ, ಯತ್ನ ಕಾರ್ಯದಲ್ಲಿ ಜಯ.
ಕಟಕ: ಈ ವಾರ ಕುಟುಂಬದಲ್ಲಿ ಕಲಹ, ಸಲ್ಲದ ಅಪವಾದ, ಶತ್ರುತ್ವ, ಸುಳ್ಳು ಮಾತನಾಡುವುದು, ಪರಸ್ಥಳ ವಾಸ, ಆದಾಯಕ್ಕಿಂತ ಖರ್ಚು ಜಾಸ್ತಿ, ಪ್ರಯಾಣ ಮಾಡುವುದರಿಂದ ಅಶಾಂತಿ.
ಸಿಂಹ: ಈ ವಾರ ಬಂಧುಗಳಿಂದ ಕಿರಿಕಿರಿ, ವ್ಯಾಸಂಗಕ್ಕೆ ತೊಂದರೆ, ಶತ್ರು ಭಯ, ದೂರ ಪ್ರಯಾಣ, ವ್ಯವಹಾರದಲ್ಲಿ ಏರುಪೇರು, ಹಣ ಬಂದರೂ ಉಳಿಯುವುದಿಲ್ಲ.
ಕನ್ಯಾ: ಈ ವಾರ ವಿರೋಧಿಗಳಿಂದ ತೊಂದರೆ, ಧನಲಾಭ, ಸುಖ ಭೋಜನ ಪ್ರಾಪ್ತಿ, ವಿವಾಹ ಯೋಗ, ಮನಸ್ಸಿಗೆ ಶಾಂತಿ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ.
ತುಲಾ: ಈ ವಾರ ಕೈಹಾಕಿದ ಕೆಲಸದಲ್ಲಿ ವಿಘ್ನ, ಆಕಸ್ಮಿಕ ಕರ್ಚು, ಮನಸ್ಸಿನಲ್ಲಿ ಭಯಭೀತಿ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಆರ್ಥಿಕ ಪರಿಸ್ಥಿತಿ ಏರುಪೇರು, ಅನಾರೋಗ್ಯ, ನಿಂದನೆ, ಬೇಸರ.
ವೃಶ್ಚಿಕ: ಈ ವಾರ ಅಧಿಕಾರಿಗಳಲ್ಲಿ ಕಲಹ, ಭೂಮಿ ಕಳೆದುಕೊಳ್ಳುವಿರಿ, ಮಾನಹಾನಿ,ಮಿತ್ರರಲ್ಲಿ ದ್ವೇಷ, ಶುಭವಾರ್ತೆಯನ್ನು ಕೇಳುವಿರಿ, ದೀರ್ಘಾವಧಿ ನರಳಾಟ, ನೀಚ ಜನರ ಸಹವಾಸ.
ಧನಸ್ಸು: ಈ ವಾರ ದ್ರವ್ಯಲಾಭ, ವಸ್ತ್ರಾಭರಣ ಪ್ರಾಪ್ತಿ, ಉದ್ಯೋಗದಲ್ಲಿ ಅಭಿವೃದ್ಧಿ, ಸ್ತ್ರೀ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ, ಶುಭಕಾರ್ಯಗಳಲ್ಲಿ ಬಾಗಿ, ತೀರ್ಥಕ್ಷೇತ್ರ ದರ್ಶನ.
ಮಕರ: ಈ ವಾರ ಧನಲಾಭ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ, ಕಾರ್ಯಗಳು ಮುಂದುವರಿಯುತ್ತವೆ, ಉದ್ಯೋಗದಲ್ಲಿ ಉನ್ನತ ಸ್ಥಾನಮಾನ, ಪಿತ್ರಾಜಿತ ಆಸ್ತಿ ಪ್ರಾಪ್ತಿ.
ಕುಂಭ: ಈ ವಾರ ಅಧಿಕ ಖರ್ಚು, ದಾಯಾದಿ ಕಲಹ, ಅಪಕೀರ್ತಿ, ವಾಹನ ರಿಪೇರಿಯಿಂದ ಖರ್ಚು, ಸುಳ್ಳು ಮಾತನಾಡುವುದು, ವ್ಯವಹಾರದಲ್ಲಿ ಏರುಪೇರು, ಯತ್ನ ಕಾರ್ಯಗಳಲ್ಲಿ ವಿಘ್ನ.
ಮೀನ: ಈ ವಾರ ಪತ್ನಿಗೆ ಅನಾರೋಗ್ಯ, ಮಿತ್ರರಿಂದ ತೊಂದರೆ, ಋಣಭಾದೆ, ಆಲಸ್ಯ ಮನೋಭಾವ, ಅಕಾಲ ಭೋಜನ, ನಂಬಿದ ಜನರಿಂದ ಮೋಸ, ಶೀತ ಸಂಬಂಧಿ ರೋಗಗಳು, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.
PublicNext
27/09/2020 07:18 am