ಮೇಷ: ಉಷ್ಣಪ್ರಕೃತಿಯ ದೇಹದವರಿಗೆ ಸ್ವಲ್ಪಮಟ್ಟಿಗೆ ತೊಂದರೆ ಆದೀತು. ಚಂದ್ರಪೀಡಾ ನಿವಾರಣಾ ಸ್ತೋತ್ರ ಪಠಿಸಿ. ಶಾಂತಿ ಲಭ್ಯ
ವೃಷಭ: ಬಹಳ ದಿನಗಳಿಂದಲೂ ನಿಂತುಹೋಗಿದ್ದ ಕಾರ್ಯಗಳಿಗೆ ಮರುಚಾಲನೆ ಸಿಗಲಿದೆ. ಮಕ್ಕಳಿಂದ ಕಿರಿಕಿರಿಯಾದೀತು.
ಮಿಥುನ : ಸರ್ಕಾರಿ ಅಧಿಕಾರಿಗಳ ಸಹಾಯ ಸಿಗಲಿದೆ. ಅಲರ್ಜಿಯಿಂದ ಸ್ವಲ್ಪ ತೊಂದರೆಯಾದೀತು. ವಿರುದ್ಧಾಹಾರ ಸೇವಿಸದಿರಿ.
ಕಟಕ: ಕುಟುಂಬದಲ್ಲಿ ಶುಭವಾರ್ತೆ ಕೇಳಿಬರಲಿದೆ. ಮಕ್ಕಳ ವಿಚಾರದಲ್ಲಿ ಬಹಳ ಹರ್ಷಪಡುವಿರಿ. ವ್ಯಾವಹಾರಿಕ ಜಾಣ್ಮೆ ಇರಲಿ.
ಸಿಂಹ: ಆಪ್ತ ಮಿತ್ರರು ಶತ್ರುಗಳಾಗಿ ಬದಲಾದರೂ ಹೊಸ ಮೈತ್ರಿಯಿಂದ ನಿಮಗೆ ಲಾಭವಿದೆ. ಬಟ್ಟೆ ಖರೀದಿಸುವಾಗ ಜಾಗ್ರತೆ ಬೇಕು.
ಕನ್ಯಾ: ವಾಯುಬಾಧೆ ಅನುಭವಕ್ಕೆ ಬರಬಹುದು. ನೆರೆಯವರು ನೆರವು ನೀಡುವರು. ಚಿನ್ನದ ಖರೀದಿಗೆ ಸುಸಂದರ್ಭವಿದು.
ತುಲಾ: ಸಂಜೆಯ ವೇಳೆಗೆ ಸಂತಸದ ಸಮಾಚಾರ ಕೇಳಿಬರಬಹುದು. ಹೊಟ್ಟೆನೋವಿನ ಬಗ್ಗೆ ಕಾಳಜಿ ವಹಿಸುವುದು ಉತ್ತಮ.
ವೃಶ್ಚಿಕ: ಖಾಸಗಿ ಉದ್ಯೋಗಿಗಳಿಗೆ ಸ್ವಲ್ಪ ಕಿರಿಕಿರಿಯ ದಿನವಾಗಿದೆ. ಯಾವುದೇ ಕಾರಣಕ್ಕೂ ಆತುರ ಪಡದಿರಿ. ಶಿವನನ್ನು ಸ್ತುತಿಸಿ.
ಧನುಸ್ಸು : ಧನಾಗಮನದ ಸಾಧ್ಯತೆಯಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರಬಹುದು. ಸುಮ್ಮನೆ ಅನವಶ್ಯಕ ಚರ್ಚೆ ಮಾಡದಿರಿ.
ಮಕರ: ಬಾಳಸಂಗಾತಿಗೆ ಅಸೌಖ್ಯ ಸಂಭವಿಸಬಹುದು. ಕಾಗದಪತ್ರಗಳ ವಿಚಾರದಲ್ಲಿ ವಿಶೇಷವಾದ ಎಚ್ಚರ ವಹಿಸಲೇಬೇಕಾಗುತ್ತದೆ.
ಕುಂಭ: ಸಮಾಜದಲ್ಲಿ ಮನ್ನಣೆಯನ್ನು ಗಳಿಸಬಹುದು. ಬಂಧುಮಿತ್ರರಿಂದ ಸಹಾಯ ಸಹಕಾರ ಲಭ್ಯ. ಆರೋಗ್ಯದೆಡೆಗೆ ಕಾಳಜಿ ಅಗತ್ಯ.
ಮೀನ: ದ್ರವ್ಯಲಾಭ ಉಂಟಾಗಲಿದೆ. ವಾಹನ ಖರೀದಿ ಮಾಡುವ ಬಗ್ಗೆ ಯೋಚಿಸಬಹುದು. ಭಕ್ತಿಯಿಂದ ಶಿವನಾಮದ ಸ್ಮರಣೆ ಮಾಡಿ.
PublicNext
13/12/2020 07:49 am