", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/29545520250205083945filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "9740080658" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೋದಿಲ್ಲ ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ...Read more" } ", "keywords": "Node,Hubballi-Dharwad,Public-News", "url": "https://publicnext.com/node" }
ನವಲಗುಂದ: ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೋದಿಲ್ಲ ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ ಎಂದು ಶಲವಡಿಯ ಗುರುಶಾಂತೇಶ್ವರ ಮಠದ ಅಭಿನವ ಗುರುಶಾಂತೇಶ್ವರ ಸ್ವಾಮಿಜಿ ಹೇಳಿದರು.
ವಿಧಾನಸಬಾ ಕ್ಷೇತ್ರದ ಶಲವಡಿ ಗ್ರಾಮದ ಗುರುಶಾಂತೇಶ್ವರ ಸರಕಾರಿ ಪ್ರೌಡ ಶಾಲೆಯ 1965 ರಿಂದ 1980ರ ಅವಧಿಯ ವಿದ್ಯಾರ್ಧಿಗಳಿಂದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಜಗತ್ತಿನಲ್ಲಿ ಗುರುವಿಗೆ ದೊಡ್ಡ ಸ್ಥಾನ ನೀಡಿದ ಏಕೈಕ ದೇಶ ಭಾರತ ವಿವಿದ ಇಲಾಖೆಗಳಲ್ಲಿ ನೌಕರರಿಗೆ ಸಿಗದ ಗೌರವ ಮರ್ಯಾದೆ ಶಿಕ್ಷಣ ಇಲಾಖೆಯಲ್ಲಿ ಸಿಗುತ್ತದೆ ಎಂದರಲ್ಲದೆ ಇದು ಗೌರವಪೂರ್ಣ ಕಾರ್ಯಕ್ರಮ ನೀವು ಶಿಕ್ಷಕರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ಈ ವೇದಿಕೆಯಿಂದ ಸಾಬಿತಾಗಿದೆ ಗುರುವಿನ ಆಶಿರ್ವಾದ ಸದಾಕಾಲ ನಿಮ್ಮೆಲ್ಲರಮೇಲಿದೆ ನಿಮ್ಮ ಬದುಕಿನಲ್ಲಿ ಅವರು ತೋರಿದ ಮಾರ್ಗ ನೀವು ಮುಂದಿನ ಪಿಳಿಗೆಗೆ ಮಾರ್ಗದರ್ಶಕರಾಗಿ ಸಾಧನೆ ಮಾಡಿ ಎಂದು ನುಡಿದರು.
ನಿವೃತ್ತ ಶಿಕ್ಷಕ ಎಸ್.ವಾಯ್ ಕೊಪ್ಪದ ಮಾತನಾಡಿ, ಅಂದಿನ ಸಮಯದಲ್ಲಿ ನಮ್ಮ ಶಾಲೆಯ ವಾತವರಣ ಒಂದೇ ಕುಟುಂಬದಂತೆ ಸಾಮರಸ್ಯ ಬದುಕನ್ನು ನಡೆಸಿದ್ದೇವೆ. ಆದರೆ ಈಗ ಕಾಲ ಬದಾಲಾಗಿದೆ ಅಂದಿನ ಗುಣಮಟ್ಟದ ಶಿಕ್ಷಣ ಉಚಿತವಾಗಿ ದೊರೆಯುತ್ತಿತ್ತು .ಆದರೆ ಈಗ ಎಲ್ಲ ಪಾಲಕರು ಖಾಸಗಿ ಶಾಲೆಯ ಮೊರೆ ಹೋಗಿ ಹಣ ಕೊಟ್ಟು ಶಿಕ್ಷಣ ಪಡೆದರು ಅಂದಿನ ಸಂಸ್ಕಾರ ದೊರೆಯುದೆ ಇರುವುದು ಆತಂಕ ಮೂಡಿಸಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಇದೇ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಶಿವಾನಂದ ಕಲಕೇರಿ ಅವರು ತಾಯಿ ಸ್ಮರಣಾರ್ಥವಾಗಿ ಶಾಲೆಯ ಅಭಿವೃದ್ಧಿಗೆ 5 ಲಕ್ಷ ರೂ ದೇಣಿಗೆಯ ಚಕ್ಕನ್ನು ಮುಖ್ಯೋಪಾದ್ಯಯರಾದ ಎನ್.ವ್ಹಿ.ಕುರವತ್ತಿಮಠ ಅವರಿಗೆ ನೀಡಿದರು.
Kshetra Samachara
05/02/2025 08:39 pm