ಹುಬ್ಬಳ್ಳಿ: ಬೈಕ್ ಮತ್ತು ಟಾಟಾ ಇಂಟ್ರಾ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನೋರ್ವ ಗಾಯಗೊಂಡ ಘಟನೆ ಗಬ್ಬೂರು ಹೊರವಲಯದ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಅರಳಿಕಟ್ಟಿ ಗ್ರಾಮದ ಕಾರ್ತಿಕ ಬೆನ್ನಿ ಎಂಬಾತನೆ ಗಂಭೀರವಾಗಿ ಗಾಯಗೊಂಡ ಸವಾರನಾಗಿದ್ದಾನೆ. ಕಾರ್ತಿಕ ಬೈಕ್‌ನಲ್ಲಿ ಗಬ್ಬೂರಿನಿಂದ ಕುಂದಗೋಳತ್ತ ಹೊರಟ್ಟಿದ್ದ. ಆದರೆ ನಿಯಂತ್ರಣ ತಪ್ಪಿದ ಬೈಕ್ ಕುಂದಗೋಳ ಕ್ರಾಸ್ ಕಡೆಯಿಂದ ಗಬ್ಬೂರ ಕಡೆಗೆ ಎದುರಿಗೆ ಬರುತ್ತಿದ್ದ ಇಂಟ್ರಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ ಸಂಪೂರ್ಣವಾಗಿ ನಜ್ಜುನುಜ್ಜಾಗಿದ್ದು, ಟಾಟಾ ಇಂಟ್ರಾ ವಾಹನದ ಮುಂಭಾಗ ಕೂಡಾ ಜಖಂಗೊಂಡಿದೆ.
ಈ ಘಟನೆ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತದ ಕುರಿತು ಟಾಟಾ ಇಂಟ್ರಾ ವಾಹನದ ಚಾಲಕ ಹೇಳಿದ್ದು ಹೀಗೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/02/2025 09:28 am