", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/418299-1738291887-mugilu.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಕುಂಭಮೇಳದಲ್ಲಿ ಕಾಲ್ತುಳಿತದಿಂದ ಸಾವನ್ನಪ್ಪಿದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಮಹಾದೇವಿ ಭಾವನ್ನವರ್ ಅಂತ್ಯಕ್ರಿಯೆ ವೀರಶೈವ ...Read more" } ", "keywords": "Kumbh Mela, Stampede Incident, Mahadevi Funeral, Noolvi Village, Karnataka News, Kumbh Mela Tragedy, Crowd Control Measures, Belagavi District News.,Hubballi-Dharwad,Accident", "url": "https://publicnext.com/node" }
ಹುಬ್ಬಳ್ಳಿ: ಕುಂಭಮೇಳದಲ್ಲಿ ಕಾಲ್ತುಳಿತದಿಂದ ಸಾವನ್ನಪ್ಪಿದ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಮಹಾದೇವಿ ಭಾವನ್ನವರ್ ಅಂತ್ಯಕ್ರಿಯೆ ವೀರಶೈವ ಧಾರ್ಮಿಕ ವಿಧಿ ವಿಧಾನದಲ್ಲಿಯೇ ಅಂತ್ಯಗೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿಯಿಂದ ನೇರವಾಗಿ ನೂಲ್ವಿಗೆ ಆಗಮಿಸಿರುವ ಮಹಾದೇವಿ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ನೂಲ್ವಿಗೆ ತರಲಾಗಿದೆ. ಮೃತದೇಹ ಆಗಮಿಸುತ್ತಿದ್ದಂತೆಯೇ ಪೂಜಾ ವಿಧಿ ವಿಧಾನ ನೆರವೇರಿಸಿದ ಕುಟುಂಬಸ್ಥರು, ಪೂಜಾ ವಿಧಿವಿಧಾನಗಳ ನಂತರ ನೂಲ್ವಿಯ ಸ್ವಗ್ರಾಮದ ರುದ್ರಭೂಮಿಯಲ್ಲಿ ಮಹಾದೇವಿ ಭಾವನ್ನವರ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಇನ್ನೂ ಬೆಳಗಾವಿಯಿಂದ ಮೃತದೇಹ ಆಗಮಿಸುತ್ತಿದ್ದಂತೆಯೇ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಮಹಾದೇವಿಯ ಒಡನಾಟ ನೆನೆದು ಕುಟುಂಬಸ್ಥರು ಹಾಗೂ ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಮಹಾದೇವಿಯವರ ಸಾವಿಗೆ ಊರಿಗೆ ಊರೇ ಕಂಬನಿ ಮಿಡಿದಿದ್ದಾರೆ.
ಊರಿನ ಮುದ್ದಿನ ಮಗಳಾಗಿದ್ದಳು. ಸಾಮಾಜಿಕ ಕೆಲಸದಲ್ಲಿ ಭಾಗಿಯಾಗ್ತಿದ್ದಳು. ಅಂತಹ ಮಗಳನ್ನ ಕಳೆದುಕೊಂಡಿದ್ದೇವೆ ಅಂತ ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/01/2025 08:21 am