", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/286525-1738746765-WhatsApp-Image-2025-02-05-at-2.42.35-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ವಿದ್ಯಾನಗರದಲ್ಲಿನ ಬಾರ್‌ವೊಂದರ ಪಾರ್ಕಿಂಗ್ ಜಾಗದಲ್ಲಿ ನಡೆದ ಆಕಾಶ ಎಂಬ ಯುವಕನ ಭೀಕರ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗ...Read more" } ", "keywords": "Karnataka Politics, Siddaramaiah Resignation, R Ashoka Prediction, Karnataka Chief Minister, Congress Government, Karnataka Political Crisis, DK Shivakumar, HD Kumaraswamy, Karnataka News, Indian Politics, State Politics, Karnataka Government, Congress Party, Karnataka CM Decision,Hubballi-Dharwad,Crime", "url": "https://publicnext.com/node" }
ಹುಬ್ಬಳ್ಳಿ: ವಿದ್ಯಾನಗರದಲ್ಲಿನ ಬಾರ್‌ವೊಂದರ ಪಾರ್ಕಿಂಗ್ ಜಾಗದಲ್ಲಿ ನಡೆದ ಆಕಾಶ ಎಂಬ ಯುವಕನ ಭೀಕರ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರ ತನಿಖೆ ಮುಂದುವರೆದಿದ್ದು, ಬಂಧಿತ ಕೊಲೆಯ ಆರೋಪಿಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಕಳೆದ ಜನವರಿ 28ರಂದು ಬಾರ್‌ನ ವಾಹನ ಪಾರ್ಕಿಂಗ್ ಜಾಗದಲ್ಲಿ ಆನಂದ ನಗರದ ಆಕಾಶ ಎಂಬಾತನನ್ನು ಆತನ ಸ್ನೇಹಿತರೇ ಚಾಕುವಿನಿಂದ ಎಲ್ಲೆಂದರಲ್ಲಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಕೂಡಲೇ ಅಲರ್ಟ್ ಆಗಿದ್ದ ಪಿಎಸ್‌ಐ ಗಳಾದ ಶ್ರೀಮಂತ ಹಾಗೂ ಸುನೀಲ್ ಅವರು ಪ್ರಮುಖ ಆರೋಪಿಗಳಾದ ಅಭಿಷೇಕ್, ವಿನೋದ ಹಾಗೂ ಯಲ್ಲಪ್ಪನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದರು.
ಸಿದ್ಧಾರೂಢ ಮಠದಲ್ಲಿ ನಡೆದಿದ್ದ ಗಲಾಟೆ ವಿಚಾರವನ್ನೇ ಮನದಲ್ಲಿ ಇಟ್ಟುಕೊಂಡಿದ್ದ ಆರೋಪಿಗಳು, ಹೇಗಾದ್ರು ಮಾಡಿ ಆಕಾಶನನ್ನು ಕೊಲೆ ಮಾಡಬೇಕು ಅಂತ ಸ್ಕೆಚ್ ಹಾಕಿದ್ದರು. ಮೂರು ಬಾರಿ ಆತನ ಕೊಲೆಗೆ ಪ್ರಯತ್ನ ಮಾಡಿ ಫೇಲ್ ಆಗಿದ್ದರು ಎಂಬ ವಿಚಾರ ತನಿಖೆಯಲ್ಲಿ ಬಯಲಿಗೆ ಬಂದಿತ್ತು. ಈ ಕೊಲೆಯ ಹಿಂದೆ ಇನ್ನೂ ಕೆಲವರ ಕೈವಾಡ ಇದೆ ಅಂತ ಎನ್ನುವುದು ತಿಳಿಸಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ರೋಹನ್, ಶಿವರಾಜ್ ಹಾಗೂ ವಿನಾಯಕ್ ಎಂಬ ಮೂವರನ್ನು ಬಂಧಿಸಿ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಸದ್ಯ ಆಕಾಶ ಕೊಲೆಯ ಹಿಂದೆ ಹಲವರು ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ಬಂಧಿತರ ಸಂಖ್ಯೆ ಇನ್ನು ಜಾಸ್ತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಕೊಲೆಯಾದ ಆಕಾಶ ಈ ಹಿಂದೆ ಸಂಗೀತಾ ಶೋ ರೂಮ್‌ನಲ್ಲಿ ಖರೀದಿ ಮಾಡಿದ್ದ ಮೊಬೈಲ್ ಯಾರು ಉಪಯೋಗ ಮಾಡುತ್ತಿದ್ದಾರೆ ಎಂಬ ಹಲವು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಆದಷ್ಟು ಬೇಗ ಹಲವರು ಜೈಲು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/02/2025 02:42 pm