", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/229640-1738754516-anata.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VinayakHubballi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ: ಅವರಿಬ್ಬರೂ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಅನ್ಯೋನ್ಯವಾಗಿ ಜೀವನ ಸಾಗಿಸಿದ್ದರು. ಈ ದಂಪತಿಗೆ ಮುದ್ದಾದ ಎರಡು ...Read more" } ", "keywords": "Hubballi Crime News, Dowry Death, Domestic Violence, Woman Murdered, Husband Accused, Marriage Disputes, Family Tragedy, Karnataka Crime, Hubballi Police, Dowry Harassment, Matrimonial Disputes.,Hubballi-Dharwad,Crime,Law-and-Order", "url": "https://publicnext.com/node" } ಹುಬ್ಬಳ್ಳಿ: ವರದಕ್ಷಿಣೆ ದಾಹಕ್ಕೆ ಮಹಿಳೆ ಬಲಿ - ಗಂಡನೇ ಹೆಂಡತಿ ಕೊಂದ ಆರೋಪ, ತಬ್ಬಲಿಯಾದ ಎರಡು ಮಕ್ಕಳು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವರದಕ್ಷಿಣೆ ದಾಹಕ್ಕೆ ಮಹಿಳೆ ಬಲಿ - ಗಂಡನೇ ಹೆಂಡತಿ ಕೊಂದ ಆರೋಪ, ತಬ್ಬಲಿಯಾದ ಎರಡು ಮಕ್ಕಳು

ಹುಬ್ಬಳ್ಳಿ: ಅವರಿಬ್ಬರೂ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಅನ್ಯೋನ್ಯವಾಗಿ ಜೀವನ ಸಾಗಿಸಿದ್ದರು. ಈ ದಂಪತಿಗೆ ಮುದ್ದಾದ ಎರಡು ಪುಟಾಣಿ ಮಕ್ಕಳಿವೆ. ಮಕ್ಕಳಾದ ಬಳಿಕ ಗಂಡ ಹಣ ತರುವಂತೆ ಪೀಡಿಸತೊಡಗಿದ್ದಾನೆ. ಮದುವೆಯಾಗಿ ನಾಲ್ಕು ವರ್ಷವಾದರೂ ಗಂಡನ ವರದಕ್ಷಿಣೆ ದಾಹ ಮಾತ್ರ ಕಡಿಮೆ ಆಗಿರಲಿಲ್ಲ. ಗಂಡನ ವರದಕ್ಷಿಣೆ ದಾಹಕ್ಕೆ ಹೆಂಡತಿ ಜೀವ ಬಿಟ್ಟಿದ್ದಾಳೆ.

ಒಂದು ಕಡೆ ಆತ್ಮಹತ್ಯೆಗೆ ಶರಣಾಗಿರೋ ಶಬನಮ್. ಮತ್ತೊಂದು ಕಡೆ ತಾಯಿ ಮೇಲೆ ನಡೆಯುತ್ತಿದ್ದ ಕ್ರೌರ್ಯ ಬಿಚ್ಚಿಟ್ಟ ಬಾಲಕ. ಇನ್ನೊಂದು ಕಡೆ ಕಿಮ್ಸ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಅಕ್ರಂದನ‌. ಇವೆಲ್ಲ ದೃಶ್ಯಗಳು‌ ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹುಬ್ಬಳ್ಳಿಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬಳ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾಳೆ. ಎಸ್ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನಿನ್ನೆ 23 ವರ್ಷದ ಶಬನಮ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿದ್ದರು. ಕೂಡಲೇ ಕುಟುಂಬಸ್ಥರು ಅಣ್ಣಿಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ರು. ಚಿಕಿತ್ಸೆ ಫಲಿಸದೆ ಶಬನಮ್ ಮೃತಪಟ್ಟಿದ್ದಾಳೆ. ಇದೊಂದು‌ ಕೊಲೆ ಅನ್ನೋ ಆರೋಪ ಕೇಳಿ ಬಂದಿದೆ.

ಮುದ್ದಾದ ಎರಡು‌ ಮಕ್ಕಳಿದ್ರೂ ಸಾಮದಾನಿ‌ ಹೆಂಡತಿಗೆ ಟಾರ್ಚರ್ ಮಾತ್ರ ಕೊಡೋದನ್ನ ಕಡಿಮೆ‌ ಮಾಡಿರಲಿಲ್ಲ. ಮದುವೆಯಾದ ಕೆಲ ತಿಂಗಳುಗಳು ಮಾತ್ರ ಸಂತೋಷವಾಗಿದ್ದಾರೆ. ನಂತರ ಒಂದಲ್ಲ ಒಂದು ರೀತಿ ಸಾಮದಾನಿ ಟಾರ್ಚರ್ ಕೊಟ್ಟಿದ್ದಾನೆ. ಅದಲ್ಲದೆ ಬರೀ ಹಣ ತರುವಂತೆ ಕಿರುಕುಳ‌ ಕೊಡತಿದ್ದನಂತೆ. ಸಾಮದಾನಿ ಜೊತೆಗೆ ಆತನ ತಂದೆ ತಾಯಿ ಕೂಡಾ ಹಣಕ್ಕಾಗಿ ಪೀಡಿಸುತ್ತಿದ್ದರಂತೆ. ಒಂದು ತಿಂಗಳ ಹಿಂದೆ ಮನೆಗೆ ಬಂದಾಗ ಶಬನಮ್‌ಗೆ ಐದು ಲಕ್ಷ ಹಣ ತರುವಂತೆ ಹೇಳಿದ್ರಂತೆ‌. ಹಣ ತರದೆ ಇದ್ದಾಗ ಸಾಮದಾನಿ‌ ಕುಟುಂಬಸ್ಥರು ಶಬನಮ್ ಮೇಲೆ ಹಲ್ಲೆ ಮಾಡಿದ್ದಾರೆ.

ಒಟ್ಟಾರೆ ವರದಕ್ಷಿಣೆ ಕಿರುಕಳಕ್ಕೆ ಮುದ್ದಾದ ಎರಡು ಮಕ್ಕಳ ತಾಯಿ ಬಲಿಯಾಗಿದ್ದಾಳೆ. ಏನೂ ಅರಿಯದ ಪುಟ್ಟ ಮಕ್ಕಳು ತಾಯಿ ಕಳೆದುಕೊಂಡು ಅನಾಥವಾಗಿದ್ದಾರೆ. ಇತ್ತ ವರದಕ್ಷಿಣೆ ಕಿರಕುಳ ನೀಡಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/02/2025 04:52 pm

Cinque Terre

38.97 K

Cinque Terre

3

ಸಂಬಂಧಿತ ಸುದ್ದಿ