ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಸಡಗರದಿಂದ ನಡೆದ ಶ್ರೀ ನಾಗದೇವತೆ ವರ್ಧಂತಿ ಮಹೋತ್ಸವ

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಮ ಸಮೀಪದ ಶ್ರೀರಾಮನಸರ ಶ್ರೀ ನಾಗದೇವತೆ, ಚೌಡೇಶ್ವರಿ ದೇವಸ್ಥಾದಲ್ಲಿ ನಡೆದ 19ನೇ ವರ್ಷದ ಶ್ರೀ ನಾಗದೇವತೆ ವರ್ಧಂತಿ ಮಹೋತ್ಸವ ನೂರಾರು ಭಕ್ತರ ನಡುವೆ ವಿಜಂಭಣೆಯಿಂದ ಜರುಗಿತು.

ವರ್ಧಂತಿ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಶಾಲಿವಾಹನ ಶಕ ಶ್ರೀ ಕ್ರೋಧಿನಾಮ ಸಂವತ್ಸರ ಉತ್ತರಾಯಾಣ ಮಾಘ ಮಾಸ ಶುಕ್ಲಪಕ್ಷದಲ್ಲಿ ಕಲಾಹೋಮ, 108 ಕಲಾಶಾಭಿಷೇಕ, ಹೋಮ ಹವನಗಳ ಪೂರ್ಣಾಹುತಿ ಮಹಾಮಂಗಳಾರತಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ 6 ಗಂಟೆಗೆ ಆಶ್ಲೇಷ ಬಲಿ ಮತ್ತು ರಂಗ ಪೂಜೆ ಜರುಗಿತು. ಶ್ರೀನಾಗದೇವತೆಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಶ್ರೀನಾಗದೇವತೆ ವರ್ಧಂತಿ ಮಹೋತ್ಸವದ ಹಿನ್ನಲೆಯಲ್ಲಿ ಹೊನ್ನಾವರ ತಾಲೂಕು ನಗರಬಸ್ತಿಕೇರಿಯ ಗೇರಸಪ್ಪಾ ಸೀಮೆಯ ಶ್ರೀ ಮುಖ್ಯಪ್ರಾಣ ದೇವರಾದ ಶ್ರೀ ಆಂಜನೇಯ ಸ್ವಾಮಿ ದೇವರ ಅಡ್ಡಪಲ್ಲಕ್ಕಿ ಉತ್ಸವ ಇದೇ ವೇಳೆ ಜರುಗಿತು. ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಕೃತಾರ್ಥರಾದರು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಸುನಂದಮ್ಮ, ಚಂದ್ರಶೇಖರ್(ಪುಟ್ಟು) ಹಾಗೂ ನಾಗರಾಜ್ ಸೇರಿದಂತೆ ಅನೇಕರು ಇದ್ದರು.

Edited By : Shivu K
PublicNext

PublicNext

04/02/2025 09:16 pm

Cinque Terre

22.58 K

Cinque Terre

0

ಸಂಬಂಧಿತ ಸುದ್ದಿ