", "articleSection": "Government,News,Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/454921_1738745725_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JameelSagar" }, "editor": { "@type": "Person", "name": "6360536065" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಾಗರ: ಸವಿತಾ ಮಹರ್ಷಿಗಳ ಜಯಂತಿ ಪ್ರಯುಕ್ತ ತಾಲೂಕು ಸವಿತಾ ಸಮಾಜದ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ರಾಜಭೀದಿ ಉತ್ಸವದೊಂದಿಗೆ ಮೆರವಣಿಗೆ ನಡೆಸ...Read more" } ", "keywords": "Node,Shimoga,Government,News,Religion", "url": "https://publicnext.com/node" } ಸಾಗರ: ಅದ್ಧೂರಿಯಾಗಿ ನೆರವೇರಿತು ಸವಿತಾ ಮಹರ್ಷಿಗಳ ಜಯಂತಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಅದ್ಧೂರಿಯಾಗಿ ನೆರವೇರಿತು ಸವಿತಾ ಮಹರ್ಷಿಗಳ ಜಯಂತಿ

ಸಾಗರ: ಸವಿತಾ ಮಹರ್ಷಿಗಳ ಜಯಂತಿ ಪ್ರಯುಕ್ತ ತಾಲೂಕು ಸವಿತಾ ಸಮಾಜದ ವತಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ರಾಜಭೀದಿ ಉತ್ಸವದೊಂದಿಗೆ ಮೆರವಣಿಗೆ ನಡೆಸುವ ಮೂಲಕ ಸವಿತಾ ಮಹರ್ಷಿಗಳ ಜಯಂತಿ ಆಚರಣೆ ಮಾಡಲಾಯಿತು.

ಬುಧವಾರ ಸಾಗರದ ಮಹಾ ಗಣಪತಿ ದೇವಸ್ಥಾನದಲ್ಲಿ ಸಮಾಜದ ಅಧ್ಯಕ್ಷ ರಂಜಿತ್ ಕುಮಾರ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀ ಸವಿತಾ ಮಹರ್ಷಿಗಳ ಭಾವಚಿತ್ರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ರಾಜಭೀದಿ ಉತ್ಸವದೊಂದಿಗೆ ಮೆರವಣಿಗೆ ನಡೆಸುವ ಮೂಲಕ ಈ ಬಾರಿಯ ಸವಿತಾ ಮಹರ್ಷಿಗಳ ಜಯಂತಿ ಆಚರಣೆ ಮಾಡಲಾಯಿತು.

ನಂತರ ಸರ್ಕಾರದ ವತಿಯಿಂದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಸವಿತಾ ಮಹರ್ಷಿಗಳ ಜಯಂತಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ರಂಜಿತ್ ಕುಮಾರ್,ಕಾಯಕ ತತ್ವದ ಮೂಲಕ ಮಾಡುವ ಕೆಲಸಗಳಿಗಿಂತ ಬೌದ್ಧಿಕ ಕೆಲಸಗಳಿಗೆ ಪ್ರಾಮುಖ್ಯತೆ ದೊರೆಯುತ್ತಾ ಸಾಗಿದಂತೆ ಅನೇಕ ಕಾಯಕ ತತ್ವಾಧರಿತ ಕೆಲಸಗಳು ಪ್ರಾಮುಖ್ಯತೆಯನ್ನು ಕಳೆದುಕೊಳ್ಳರಾಂಭಿಸಿದೆ. ಆದರೆ ಕ್ಷೌರ ಸೇರಿದಂತೆ ಇನ್ನೂ ಹಲವಾರು ಕಾಯಕ ತತ್ವಾಧರಿತ ಕೆಲಸಗಳು ಪ್ರಾಮುಖ್ಯತೆ ಕಳೆದುಕೊಂಡಿಲ್ಲ ಆದರೆ ಸಮಾಜದ ಯುವ ಜನತೆ ಅದನ್ನೇ ವೃತ್ತಿಯಾಗಿ ತೆಗೆದುಕೊಳ್ಳುವಷ್ಟು ವಿಸ್ತಾರವನ್ನು ಪಡೆದುಕೊಂಡಿಲ್ಲ, ಆದರೂ ಸಮಾಜದಲ್ಲಿ ಈಗಲೂ ಕಾಯಕತತ್ವಾಧರಿತ ಈ ಕೆಲಸ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

05/02/2025 02:25 pm

Cinque Terre

600

Cinque Terre

0

ಸಂಬಂಧಿತ ಸುದ್ದಿ