", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/40083620250205071739filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshChikkamangaluru" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಜೇನು ಸಾಕಾಣಿಕೆ ತಂತ್ರಜ್ಞಾನದಿಂದ ರೈತರ ಸಬಲೀಕರಣ ಸಾಧ್ಯವಾಗಿದ್ದು ಜೇನು ಸಾಕಾಣಿಕೆ ತರಬೇತಿಯ ಸದುಪಯೋಗವನ್ನು ರೈತರು ಪಡೆಯಬೇಕೆಂದು ...Read more" } ", "keywords": "Node,Shimoga,News", "url": "https://publicnext.com/node" }
ಶಿವಮೊಗ್ಗ : ಜೇನು ಸಾಕಾಣಿಕೆ ತಂತ್ರಜ್ಞಾನದಿಂದ ರೈತರ ಸಬಲೀಕರಣ ಸಾಧ್ಯವಾಗಿದ್ದು ಜೇನು ಸಾಕಾಣಿಕೆ ತರಬೇತಿಯ ಸದುಪಯೋಗವನ್ನು ರೈತರು ಪಡೆಯಬೇಕೆಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್.ಸಿ.ಜಗದೀಶ ಹೇಳಿದರು.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಶಿವಮೊಗ್ಗ ಜಿಲ್ಲೆಯಲ್ಲಿ ಜೇನುಸಾಕಾಣೆ ಯತಂತ್ರಗಳೊಂದಿಗೆ ಪರಿಶಿಷ್ಟ ಪಂಗಡಗಳ ಸಬಲೀಕರಣ” ಅಡಿಯಲ್ಲಿ ವಿಶ್ವವಿದ್ಯಾಲಯದ ಶರಾವತಿ ಆಡಳಿತ ಭವನದಲ್ಲಿ ಪರಿಶಿಷ್ಟ ಪಂಗಡದ ರೈತರಿಗೆ ಏರ್ಪಡಿಸಲಾಗಿರುವ “ಜೇನು ಸಾಕಾಣಿಕೆ ತರಬೇತಿ”ಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಸಿ ಮಾತನಾಡಿದ ಅವರು ರೈತರಿಗೆ ಮುಕ್ತವಾಗಿರುವ ಈ ವಿಶ್ವವಿದ್ಯಾಲಯದಲ್ಲಿ ನಡೆಯುವ ಹಲವಾರು ತರಬೇತಿಗಳಲ್ಲಿ ರೈತರು ಭಾಗವಹಿಸಬೇಕೆಂದು ಕರೆ ನೀಡಿದರು.
ಶಿಬಿರಾರ್ಥಿಗಳಿಗೆ ಜೇನುಸಾಕಣೆಯನ್ನು ಆಸಕ್ತಿಯಿಂದ ಮಾಡಲು ಸಲಹೆ ನೀಡಿ, ಹೆಚ್ಚು ಹೆಚ್ಚು ಜೇನುತುಪ್ಪ ಉತ್ಪಾದಿಸಲು ಸಲಹೆ ನೀಡಿದರು ಹಾಗೂ ಉತ್ಪಾದಿಸಿದ ಹೆಚ್ಚುವರಿ ಜೇನುತುಪ್ಪವನ್ನು ವಿಶ್ವವಿದ್ಯಾಲಯವೇ ಖರೀದಿಸುವುದಾಗಿ ಭರವಸೆ ನೀಡಿದರು. ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರದೊಂದಿಗೆ ಜೇನುಸಾಕಾಣಿಕೆಗೆ ಬೇಕಾದ ಪರಿಕರಗಳನ್ನು ವಿತರಣೆಮಾಡಿದರು.
Kshetra Samachara
05/02/2025 07:17 pm