", "articleSection": "Education,Government,News", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/454921_1738757342_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "JameelSagar" }, "editor": { "@type": "Person", "name": "6360536065" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಸಾಗರ : ಎಸ್.ಎಸ್.ಎಲ್.ಸಿ. ಪರೀಕ್ಷೆಗೆ 44 ದಿನಗಳಿವೆ. ವಿದ್ಯಾರ್ಥಿಗಳು ಕ್ಷಣಕೂಡ ವಿಳಂಬ ಮಾಡದೆ ಓದಿನ ಕಡೆ ಗಮನ ಹರಿಸಬೇಕು. ಓದು ಮತ್ತು ಆರೋಗ್ಯ ...Read more" } ", "keywords": "Node,Shimoga,Government,Education,News", "url": "https://publicnext.com/node" }
ಸಾಗರ : ಎಸ್.ಎಸ್.ಎಲ್.ಸಿ. ಪರೀಕ್ಷೆಗೆ 44 ದಿನಗಳಿವೆ. ವಿದ್ಯಾರ್ಥಿಗಳು ಕ್ಷಣಕೂಡ ವಿಳಂಬ ಮಾಡದೆ ಓದಿನ ಕಡೆ ಗಮನ ಹರಿಸಬೇಕು. ಓದು ಮತ್ತು ಆರೋಗ್ಯ ಎರಡೂ ನಿಮಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಹಕಾರಿಯಾಗುತ್ತದೆ ಎಂದು ಡಯಟ್ ಪ್ರಾಚಾರ್ಯೆ ಬಿಂಬಾ ಕೆ.ಆರ್. ತಿಳಿಸಿದರು.
ಉರ್ದು ಪ್ರೌಢಶಾಲೆಯಲ್ಲಿ ಬುಧವಾರ 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉತ್ತಮ ಫಲಿತಾಂಶ ಪಡೆಯುವ ಆಸೆ ಶಿಕ್ಷಕರ ಜೊತೆ ವಿದ್ಯಾರ್ಥಿಗಳಿಗೂ ಇರಬೇಕು. ಸರ್ಕಾರಿ ಉರ್ದು ಪ್ರೌಢಶಾಲೆ ಸತತ 7 ವರ್ಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ಫಲಿತಾಂಶ ಪಡೆದು ದಾಖಲೆ ನಿರ್ಮಿಸಿದೆ. ಇಲಾಖೆ, ಸಮಾಜ ನಿಮ್ಮ ಶಾಲೆ ಬಗ್ಗೆ ಹೆಚ್ಚಿನ ಭರವಸೆ ಇರಿಸಿಕೊಂಡಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಶಾಲೆಯಲ್ಲಿ ಸತತ 100 ಫಲಿತಾಂಶ ಬರುತ್ತಿರುವುದು ಸಾಗರ ಉರ್ದು ಶಾಲೆ ಎಂಬ ಹೆಮ್ಮೆ ನಿಮಗೆ ಇರಬೇಕು.
ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಈ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಮುಖ್ಯ ಶಿಕ್ಷಕ ದತ್ತಾತ್ರೇಯ ಎಸ್. ಭಟ್ . ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ತಬರೇಜ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಮೇಶ್, ಜಬಿವುಲ್ಲಾ, ಎಸ್.ಎನ್.ಪಾಲಾಕ್ಷಪ್ಪ, ಗಣಪತಿ ಹಾಜರಿದ್ದರು. ಮಕ್ದೂಮ್ ಶಾ ಪ್ರಾರ್ಥಿಸಿದರು. ಗಣೇಶ್ ಟಿ. ನಾಯ್ಕ್ ಸ್ವಾಗತಿಸಿದರು. ಅಸ್ಮಾ ಕೌಸರ್ ವಂದಿಸಿದರು. ಹೀನಾ ಕೌಸರ್ ನಿರೂಪಿಸಿದರು.
Kshetra Samachara
05/02/2025 05:39 pm