ಶಿವಮೊಗ್ಗ : ಶಿವಮೊಗ್ಗ ಸಂಸ್ಕೃತಿ ಹಾಗೂ ಕಲೆಗಳ ತವರೂರು ಇಂತಹ ತವರೂರಿನಲ್ಲಿ ಜನಿಸಿದ ನಾವು ಪುಣ್ಯವಂತರು. ಈ ತಾಯಿಯ ಅಂಗಳದಲ್ಲಿ ನಾವುಗಳು ಕೇವಲ ಅಂಕಗಳಿಗೋಸ್ಕರ ಓದುವುದು ಬೇಡ, ಅದರ ಜೊತೆಗೆ ನಮ್ಮ ಸಂಸ್ಕೃತಿ ಸಂಸ್ಕಾರದ ಅರಿವನ್ನು ಹೊಂದುವುದು ಮುಖ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.
ಶಿವಮೊಗ್ಗ ಗುರುಪುರ ಹೊರ ವಲಯದ ಬಿಜಿಎಸ್ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ವಹಿಹಿ ಮಾತನಾಡಿದ ಅವರು ನಮಗೆ ನಮ್ಮ ಗುರುಗಳು ಯಾವತ್ತೂ ಭಿಕ್ಷೆ ಎತ್ತುವುದನ್ನು ಬಿಡಬೇಡಿ ಜನಸೇವೆಗೆ ಅದರಿಂದ ಸಹಾಯ ಮಾಡಿ ಉಳ್ಳವರ ಕೈಯಿಂದ ಪಡೆದು ಅಶಕ್ತರ, ದುಬ್ಬಲರ ಬದುಕಿಗೆ ದಾರಿ ದೀಪವಾಗುವಂತಹ ಕೆಲಸವನ್ನು ಮಾಡಿ, ಈ ಹಿನ್ನೆಲೆಯಲ್ಲಿ ಜ್ಞಾನದಾಸೋಹ, ಅನ್ನದಾಸೋಹವನ್ನ ಮಕ್ಕಳಿಗೆ ಹಾಗೂ ಜನರಿಗೆ ನೀಡುವ ಮೂಲಕ ಸಮಾಜದ ಒಳಿತಿಗೆ, ಸಂಸ್ಕೃತಿಯ ಒಳಿತಿಗೆ ಕೆಲಸ ಮಾಡಲು ನಿರ್ಧರಿಸಿ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಹತ್ತಾರು ಮಹತ್ತರ ಸಾಮಾಜಿಕ ಕಾರ್ಯಕ್ರಮಗಳನ್ನ ನಡೆಸುತ್ತಾ ಬಂದಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಅಡಿಯಲ್ಲಿ ಅಂದರ, ಕಿವುಡರ ಬದುಕಿಗೆ ದಾರಿದೀಪವಾಗುವಂತಹ ಶಾಲೆಗಳನ್ನು ತೆರೆದಿದೆ. ವೃದ್ಯಾಪ್ಯದಲ್ಲಿ ಅವರನ್ನು ಅನಾಥರನ್ನಾಗಿಸುವ ಮಕ್ಕಳ ಸ್ಥಿತಿಯನ್ನು ಅವಲೋಕಿಸಿದಾಗ ನಿಜಕ್ಕೂ ಬೇಸರವಾಗುತ್ತದೆ.ಈ ಹಿನ್ನೆಲೆಯಲ್ಲಿ ನಾವು ಗುರು ಹಿರಿಯರನ್ನ ಪೂಜ್ಯ ತಂದೆ-ತಾಯಿಯರನ್ನ ಗೌರವಿಸುವ ಪಾಠ ಕಲಿಯಬೇಕಿದೆ. ಮಕ್ಕಳು ಕನಿಷ್ಠಪಕ್ಷ ದಿನಕ್ಕೊಮ್ಮೆಯಾದರೂ ಹಿರಿಯರನ್ನ, ಹೆತ್ತವರನ್ನು ಗೌರವಿಸುವುದನ್ನು, ನಮಸ್ಕರಿಸುವುದನ್ನು ಕಲಿಯಿರಿ, ಚೆನ್ನಾಗಿ ಓದಿ, ಸೋಮಾರಿತನ ಬಿಡಿ ಸಂಸ್ಕೃತಿ ಅರಿವು ನಿಮಗಿರಲಿ ಮಕ್ಕಳಿಗೆ ಕಿವಿಮಾತು ಹೇಳಿದರು.
Kshetra Samachara
05/02/2025 12:26 pm