", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/462628-1738678859-smgele.mp4_snapshot_00.00.332.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshShimogga" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಶಿವಮೊಗ್ಗದಲ್ಲಿ ನಡೆಯುತ್ತಿರುವ ಮ್ಯಾಮ್ ಕೋಸ್ ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿಗರು ಮತ್ತು ಬಿಜೆಪಿ ಬೆಂಗಲಿಗರ ನಡುವೆ ವಾಗ್ವಾದ ನ...Read more" } ", "keywords": "I tried to find some SEO keywords for you, but couldn't quite get what you're looking for. You might want to try searching online for more information on Shivamogga election news and party debates.,Shimoga,Politics", "url": "https://publicnext.com/node" }
ಶಿವಮೊಗ್ಗ : ಶಿವಮೊಗ್ಗದಲ್ಲಿ ನಡೆಯುತ್ತಿರುವ ಮ್ಯಾಮ್ ಕೋಸ್ ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿಗರು ಮತ್ತು ಬಿಜೆಪಿ ಬೆಂಗಲಿಗರ ನಡುವೆ ವಾಗ್ವಾದ ನಡೆದಿದೆ. ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತ ಚುನಾವಣೆ ಇಂದು ನಡೆಯುತ್ತಿದ್ದು 19 ನೇ ನಿರ್ದೇಶಕರ ಆಯ್ಕೆಗಾಗಿ ಎಲೆಕ್ಷನ್ ನಡೆಯುತ್ತಿದೆ.
ಚುನಾವಣೆ ವೇಳೆ ಕಾಂಗ್ರೆಸ್ ಬೆಂಬಲಿತರು ಹಾಗೂ ಬಿಜೆಪಿ ಬೆಂಬಲಿತರ ನಡುವೆ ವಾಗ್ವಾದ ನಡೆದಿದೆ. ಕೇಸರಿ ಶಾಲು ಹಾಕಿಕೊಂಡ ಬಿಜೆಪಿ ಬೆಂಬಲಿಗರು, ಹಸಿರು ಟೋಪಿ ಹಾಕಿಕೊಂಡ ಕಾಂಗ್ರೆಸ್ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಕಣಕಣದಲ್ಲೂ ಕೇಸರಿ ಎಂದು ಬಿಜೆಪಿ ಬೆಂಬಲಿಗರು ಕೂಗಿದ್ರೆ, ಕೇಸರಿ ಕ್ಯಾನ್ಸರ್ ಎಂದು ಕಾಂಗ್ರೆಸ್ ಬೆಂಬಲಿಗರು ಘೋಷಣೆ ಕೂಗಿದ್ದಾರೆ. ಬೆಂಬಲಿಗರನ್ನು ಚದುರಿಸಲು ಪೊಲೀಸರು ಕೆಲ ಕಾಲ ಹರಸಾಹಸಪಟ್ರು.
PublicNext
04/02/2025 07:51 pm