", "articleSection": "Crime,Law and Order,Nature,Government", "image": { "@type": "ImageObject", "url": "https://prod.cdn.publicnext.com/s3fs-public/462628-1738679563-new.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MadhuKeshavSorab" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ನಾಶವಾದ ಜಿಲ್ಲೆ ಶಿವಮೊಗ್ಗ ಎಂದು ತಜ್ಞ ವರದಿ ಹೇಳಿದ್ದಾಗ್ಯೂ ಜಿಲ್ಲೆಯ ಅರಣ್ಯ ಅಧಿಕಾರಿಗಳಾಗಲಿ, ಜ...Read more" } ", "keywords": "Shivamogga, forest, tree felling, deforestation, environmental damage, Ananth Hegde Ashisara, Karnataka news, Indian news, forest department, tree cutting, wood smuggling, conservation, sustainability, eco-friendly, green initiatives, wildlife protection, biodiversity, forest conservation, tree plantation, afforestation, reforestation, environmental activism, social responsibility, government accountability, forest policy, tree rights, ecological balance, nature preservation, Shivamogga news, Karnataka forest, Indian forest, ,Shimoga,Crime,Law-and-Order,Nature,Government", "url": "https://publicnext.com/node" }
ಶಿವಮೊಗ್ಗ : ರಾಜ್ಯದಲ್ಲೇ ಅತಿ ಹೆಚ್ಚು ಅರಣ್ಯ ನಾಶವಾದ ಜಿಲ್ಲೆ ಶಿವಮೊಗ್ಗ ಎಂದು ತಜ್ಞ ವರದಿ ಹೇಳಿದ್ದಾಗ್ಯೂ ಜಿಲ್ಲೆಯ ಅರಣ್ಯ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸದ ಪರಿಣಾಮ ಈಚೆಗೆ ಜಿಲ್ಲೆಯ ಸೊರಬ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅರಣ್ಯ ನಾಶ, ಅಕ್ರಮ ಮರಳು ದಂಧೆ, ವನ್ಯಮೃಗಗಳ ಬೇಟೆ ವ್ಯಾಪಕವಾಗಿ ಹೆಚ್ಚಳ ಸಾಧಿಸಿದೆ.
ಈಚೆಗೆ ಸೊರಬ ಕಂತನಹಳ್ಳಿ ಸರ್ವೇ ನಂಬರ್ ೮ ರ ಅರಣ್ಯದ ಮಾರಣಹೋಮದ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಮಗ್ರ ವರದಿ ನೀಡಿ ರಾಜ್ಯದ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತಹೆಗಡೆ ಅಶಿಸರ, ಸೊರಬ ದ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಗಂಗಾಧರ ಗೌಡ ಹೊಳೆಮರೂರು, ಹೆಚ್.ಎಂ.ಪ್ರಶಾಂತ್ ಮೊದಲಾದವರು ಅರಣ್ಯ ಅಧಿಕಾರಿ ಆರ್ ಎಫ್ ಒ ಜಾವೀದ್ ಅವರೊಂದಿಗೆ ಸ್ಥಳಕ್ಕೆ ತೆರಳಿ ಮರಗಳ ನಾಶ ವೀಕ್ಷಿಸಿದರು.
ಪುರಾತನ ಅನೇಕ ಮರಗಳನ್ನು ಕಡಿದುರುಳಿಸಿರುವುದು ಅರಣ್ಯ ಒತ್ತುವರಿಗಾಗಿ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇಷ್ಟೆಲ್ಲಾ ಬೃಹತ್ ಪ್ರಮಾಣದಲ್ಲಿ ನಾಶವಾಗಿರುವುದನ್ನ ಗಮನಿಸಿದರೆ ನಾಶದ ಹಿಂದೆ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿ ಸಹಕರಿಸಿದಂತೆ ಕಾಣಿಸುತ್ತಿದೆ. ಈ ನಾಶದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಾಗ್ಯೂ, ಅರಣ್ಯ ಸಚಿವರೆ ಕ್ರಮ ಕೈಗೊಳ್ಳಲು ಸೂಚಿಸಿದ್ದಾಗ್ಯೂ ಜಿಲ್ಲೆಯ ಯಾವುದೇ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದಿರುವುದು ಅವರ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಯಾವುದೇ ಕಾರಣಕ್ಕೂ ಅರಣ್ಯ ಪ್ರಮಾಣ ತಗ್ಗಿಸ ಕೂಡದು ಎಂದು ನ್ಯಾಯಾಲಯ ಆದೇಶಿಸಿದ್ದರೂ ಅರಣ್ಯ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಈ ಎಲ್ಲಾ ಅರಣ್ಯ ನಾಶಕ್ಕೆ ಇಲಾಖೆಯೇ ಹೊಣೆಹೊರಬೇಕು ಎಂದು ಅನಂತಹೆಗಡೆ ಅಶಿಸರ ಆಗ್ರಹಿಸಿದರು.
ಕೂಡಲೇ ನಾಶದ ಕುಕೃತ್ಯದ ಹಿನ್ನೆಲೆ ಪತ್ತೆಹಚ್ಚಿ ಅರಣ್ಯ, ಜೀವವೈವಿಧ್ಯ, ವನ್ಯ ಜೀವಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಿ ಎಂದು ಅರಣ್ಯಾಧಿಕಾರಿ ಜಾವೀದ್ ಅವರಿಗೆ ಸೂಚಿಸಿದರು.
ಅರಣ್ಯಾಧಿಕಾರಿ ಜಾವೀದ್ ಮಾತನಾಡಿ, ಈಗಾಗಲೇ ಮರ ಕಡಿದ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಎಫ್ಐಆರ್ ಹಾಕಲಾಗಿದೆ. ಈ ಬೀಟ್ ನ ಡಿವೈಆರ್ಎಫ್ಒ ಅವರನ್ನು ವರ್ಗಾಯಿಸಲಾಗಿದೆ. ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎಂಬುದು ಈಗಾಗಲೇ ಸೂಚನೆ ದೊರಕಿದ್ದು ಶೀಘ್ರವಾಗಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ಮರಗಳ ನಾಶದ ಬೆನ್ನಲ್ಲೇ ಇದೇ ಸನಂ ಪಶ್ಚಿಮ ಭಾಗದಲ್ಲಿ ಹಾಗೂ ಅದಕ್ಕೆ ತಾಗಿಕೊಂಡಿರುವ ಜಂಬಳ್ಳಿ ಸರ್ವೇ ನಂಬರ್ ೨೮ ರ ಅರಣ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಾಟಕ್ಕಾಗಿ ಮರಗಳನ್ನು ಕಡಿಯಲಾಗಿದೆ. ಈ ನಾಟ ವ್ಯವಹಾರದ ಹಿಂದೆ ದೊಡ್ಡ ಲಾಭಿಯೇ ಇದ್ದು ತನಿಖೆಯಾಗಲಿ ಎಂದು ಆಗ್ರಹಿಸಲಾಯಿತು.
ವರದಿ: ಮಧು ರಾಮ್ ಪಬ್ಲಿಕ್ ನೆಕ್ಸ್ಟ್ ಸೊರಬ
PublicNext
04/02/2025 07:16 pm