", "articleSection": "Infrastructure,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/40083620250205114337filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "VeereshChikkamangaluru" }, "editor": { "@type": "Person", "name": "9731141698" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಅರಣ್ಯ ಮತ್ತು ಸರ್ವೇ ಇಲಾಖೆಗಳಿಗೆ ಪೊಲೀಸರು ಸಹಕರಿಸ ಬಾರದು. ಬಡ ರೈತರು ಕಷ್ಟ ಪಟ್ಟು ಬಗರ್ ಹುಕುಂ ಭೂಮಿಯನು ತಲತಲಾಂತರದಿಂದ ಸಾಗುವಳ...Read more" } ", "keywords": "Node,Shimoga,News,Infrastructure,Government,Agriculture", "url": "https://publicnext.com/node" }
ಶಿವಮೊಗ್ಗ : ಅರಣ್ಯ ಮತ್ತು ಸರ್ವೇ ಇಲಾಖೆಗಳಿಗೆ ಪೊಲೀಸರು ಸಹಕರಿಸ ಬಾರದು. ಬಡ ರೈತರು ಕಷ್ಟ ಪಟ್ಟು ಬಗರ್ ಹುಕುಂ ಭೂಮಿಯನು ತಲತಲಾಂತರದಿಂದ ಸಾಗುವಳಿ ಮಾಡುತ್ತಾ ಅಂತಹ ಭೂವಿಯನ್ನು ಒಡೆತನವನ್ನು ಒತ್ತುವರಿ ನೆಪದಲ್ಲಿ ತೆರವು ಮಾಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಮಾನ್ಯ ಮಾಡುವಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ರೈತರು 50 ವರ್ಷಗಳಿಗಿಂತಲೂ ಅಧಿ ಕ ಕಾಲದಿಂದ ಅನಧಿಕೃತವಾಗಿ ಸಾಗುವಳಿ ಮಾಡುತ್ತಾ ದೇಶದ ಆಹಾರ ಭದ್ರತೆಗೂ ಕೊಡುಗೆ ನೀಡಿದ್ದರೂ ಸರ್ಕಾರಗಳು ಇಂತಹವರಿಗೆ ಭೂಮಿ ಮಾನ್ಯ ಮಾಡಿ ಕೊಡದೆ ರೈತರು ಹೈರಾಣವಾಗಿದ್ದಾರೆ. ಭೂಮಿಯ ಹಕ್ಕು ಪಡೆಯಲು ದಿನನಿತ್ಯ ತಾಲೂಕು ಕಚೇರಿಗಳಿಗೆ ಅಲೆದಾಡುವುದೇ ಆಗಿದೆ. ಕಂದಾಯಾಧಿಕಾರಿಗಳು ಕ್ರಮ ಬದ್ದವಾಗಿ ಕೆಲಸ ಮಾಡದ ರೈತರನ್ನು ಹಿಂಸಿಸಿದರೆ, ದುರ್ಲಾಭ ಪಡೆದುಕೊಂಡ ಆರಣ್ಯ ಇಲಾಖೆ ಭೂಮಿಯನ್ನು ಕಿತ್ತುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
05/02/2025 11:43 am