", "articleSection": "Politics,Business,Government,Agriculture", "image": { "@type": "ImageObject", "url": "https://prod.cdn.publicnext.com/s3fs-public/229640-1738587772-smgpn.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "MohanKrishnaShivamogga" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿವಮೊಗ್ಗ : ಅಡಿಕೆಗೆ ಕ್ಯಾನ್ಸರ್‌ಕಾರಕ ಎಂದು ಹಣೆಪಟ್ಟಿ ಕಟ್ಟಿದ್ದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ರಮೇಶ್ ಹೆಗಡೆ...Read more" } ", "keywords": "Karnataka politics, Shivamogga news, BJP controversy, Ramesh Hegde, cancer-causing areca nut, Karnataka government, Indian politics, political controversy, health concerns.,Shimoga,Politics,Business,Government,Agriculture", "url": "https://publicnext.com/node" }
ಶಿವಮೊಗ್ಗ : ಅಡಿಕೆಗೆ ಕ್ಯಾನ್ಸರ್‌ಕಾರಕ ಎಂದು ಹಣೆಪಟ್ಟಿ ಕಟ್ಟಿದ್ದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಕೆಪಿಸಿಸಿ ವಕ್ತಾರ ರಮೇಶ್ ಹೆಗಡೆ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಡಿಕೆ ಹಾನಿಕಾರಕ ಎಂದು ಅಫಿಡವಿಟ್ ಹಾಕಿರೋದು ಯಾರು ಎಂಬುದನ್ನು ಮಧು ಬಂಗಾರಪ್ಪ ಸ್ಪಷ್ಟಪಡಿಸಲಿ ಎಂದು ಹೇಳಿರುವ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಅಡಿಕೆ ಕ್ಯಾನ್ಸರ್ ಕಾರಕವೆಂದು ಅಫಿಡವಿಟ್ ಸಲ್ಲಿಸಿದೆ ಎಂದು ಆರಗ ಜ್ಞಾನೇಂದ್ರರವರ ಹೇಳಿಕೆ ಸುಳ್ಳು.
ಆರಗ ಜ್ಞಾನೇಂದ್ರ ಅರೆಬರೆ ಹೇಳಿಕೆ ಕೊಡುತ್ತಾರೆ. ಅವರು ಮ್ಯಾಮ್ ಕೋಸ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಅಡಿಕೆ ಕುರಿತು ಕಾಂಗ್ರೆಸ್ ವಿರುದ್ಧ ಸುಳ್ಳು ಹೇಳಿಕೆ ನೀಡುವುದರ ಮೂಲಕ ಅಡಿಕೆ ಬೆಳೆಗಾರರ ಮನ ಒಲಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಅಡಿಕೆ ಬೆಳೆಗಾರರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿ ಆರಗ ಜ್ಞಾನೇಂದ್ರ ಸುಳ್ಳು ಹೇಳಿಕೆ ನೀಡುತ್ತಿರುವುದು ಖಂಡನೀಯ. ಅಡಿಕೆಯ ಮಾನ ಹಾಗೂ ಮೌಲ್ಯವನ್ನು ತೆಗೆದ ಬಿಜೆಪಿ ಅಡಿಕೆ ಬೆಳೆಗಾರರ ಕ್ಷಮೆಯಾಚಿಸಲು ಕಾಂಗ್ರೆಸ್ ಪಕ್ಷ ಒತ್ತಾಯಿಸುತ್ತದೆ ಎಂದರು.
ಭಾರತೀಯ ಹಿಂದೂ ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕಿನಲ್ಲಿ ಪೂಜ್ಯ ಭಾವನೆಯನ್ನು ಹೊಂದಿರುವ, ಔಷಧಿ ಗುಣವುಳ್ಳ ಹಾಗೂ ಲಕ್ಷಾಂತರ ರೈತರ ಬದುಕಿನ ಬೆಳೆಯಾದ ಅಡಿಕೆಗೆ ಕ್ಯಾನ್ಸರ್ ಕಾರಕವೆಂದು ಹಣೆಪಟ್ಟಿ ಕಟ್ಟಿ, ಕಳ್ಳ ಸಾಗಾಣಿಕೆ ಹಾಗೂ ಅಡಿಕೆ ಅಕ್ರಮ ಆಮದಿಗೆ ಸಹಾಯ ಮಾಡಿ ಅಡಿಕೆಯ ಮಾನ ಮತ್ತು ಮೌಲ್ಯವನ್ನು ತೆಗೆದಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಂದು ಆಗ್ರಹಿಸಿದರು.
PublicNext
03/02/2025 06:33 pm