ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ ಚುನಾವಣೆ- ಕಾಂಗ್ರೆಸ್, ಬಿಜೆಪಿ ಪ್ರತಿಷ್ಠೆ ಕಣ

ಶಿವಮೊಗ್ಗ : ರಾಜ್ಯದ ಪ್ರತಿಷ್ಠಿತ ಸಹಕಾರ ಸಂಘವಾದ ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘ(ಮಾಮ್‌ಕೋಸ್)ದ ಆಡಳಿತ ಮಂಡಳಿ ಚುನಾವಣೆಯು ಹಿಂದೆಂದೂ ಇಲ್ಲದಷ್ಟು ಜಿದ್ದಾಜಿದ್ದಿನಿಂದ ಕೂಡಿದೆ. ಇಪ್ಪತ್ತು ವರ್ಷಗಳಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಿಡಿತದಲ್ಲಿರುವ ಆಡಳಿತವನ್ನು ಕೈವಶ ಪಡೆದುಕೊಳ್ಳಲು ಕಾಂಗ್ರೆಸ್ ಜಿದ್ದಿಗೆ ಬಿದ್ದಿದ್ದು ಭಾರೀ ಪೈಪೋಟಿಯಿಂದ ಚುನಾವಣೆ ಗರಿಗೆದರಿದೆ.

ಹೌದು, ಇದು ಪಕ್ಷಾತೀತವಾದ ಚುನಾವಣೆಯಾದರೂ ಅಭ್ಯರ್ಥಿಗಳ ಬೆನ್ನಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಿಂತಿವೆ. ಎರಡು ದಶಕಗಳಿಂದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಿಡಿತದಲ್ಲಿ ಉಳಿದಿರುವ ಮಾಮ್ ಕೋಸ್ ಆಡಳಿತವನ್ನು ಕೈ ವಶ ಮಾಡಿಕೊಳ್ಳಲು ಆಡಳಿತ ಪಕ್ಷವಾದ ಕಾಂಗ್ರೆಸ್ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದೆ. ಸಹಕಾರ ಭಾರತಿಗೆ ಎದುರಾಗಿ ಕಾಂಗ್ರೆಸ್ ಬೆಂಬಲಿತ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಹೆಸರಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಾಗಿದೆ.

ಫೆಬ್ರವರಿ 4ರಂದು ಮತದಾನ ನಡೆಯಲಿದ್ದು, 19 ಸ್ಥಾನಗಳಿಗೆ 39 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ನೇರ ಸ್ಪರ್ಧೆ ಇರುವುದರಿಂದ ಭಾರಿ ಪೈಪೋಟಿ ಏರ್ಪಟ್ಟಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನೆಲೆ ಎನಿಸಿಕೊಂಡ ಮಲೆನಾಡು ಮತ್ತು ಅರೆಮಲೆನಾಡು ಪ್ರದೇಶದಲ್ಲಿ ಸಹಕಾರ ಭಾರತಿ ಸಹಜವಾಗಿ ನಿರಂತರವಾಗಿ ಗೆದ್ದು ಬರುತ್ತಿದೆ. ಸಹಕಾರ ಭಾರತಿಯ ಲೋಪಗಳು, ಕೇಂದ್ರ ಸರಕಾರದ ನೀತಿ ಮತ್ತು ಬಿಜೆಪಿಯಲ್ಲಿನ ಒಡಕನ್ನು ಬಂಡವಾಳವಾಗಿಸಿಕೊಂಡು ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯ ಶಾಸಕರು ಸಹಕಾರ ಭಾರತಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರೂ ಕಾಂಗ್ರೆಸ್ ಶಾಸಕರು ಗಮನ ಹರಿಸುತ್ತಿದ್ದದ್ದು ಬಹಳ ಕಡಿಮೆ. ಆದರೆ, ಕೆಪಿಸಿಸಿಯು ಈ ಬಾರಿ ಮಾಮ್ ಕೋಸ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ.

-ವೀರೇಶ್ ಜಿ. ಹೊಸೂರ್, ಪಬ್ಲಿಕ್ ನೆಕ್ಸ್ಟ್ ಶಿವಮೊಗ್ಗ

Edited By : Vinayak Patil
Kshetra Samachara

Kshetra Samachara

03/02/2025 09:47 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ