", "articleSection": "Education,Government,Public News", "image": { "@type": "ImageObject", "url": "https://prod.cdn.publicnext.com/s3fs-public/29545520250204114626filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "9740080658" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ನವಲಗುಂದ ತಾಲೂಕಿನ ಮೊರಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ನಂ-3 ರ ಶಾಲೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ, ಮಕ್ಕಳ ಹಾಜರಾತಿ, ಶ...Read more" } ", "keywords": "Node,Hubballi-Dharwad,Public-News,Education,Government", "url": "https://publicnext.com/node" }
ನವಲಗುಂದ: ನವಲಗುಂದ ತಾಲೂಕಿನ ಮೊರಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ನಂ-3 ರ ಶಾಲೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ, ಮಕ್ಕಳ ಹಾಜರಾತಿ, ಶಿಕ್ಷಕರ ಬೋಧನೆ ಮತ್ತು ತರಗತಿಗಳಿಗೆ ಹೋಗಿ ಮಕ್ಕಳ ಕಲಿಕೆಯ ಗುಣಮಟ್ಟ ಬಗ್ಗೆ ಮಾಹಿತಿ ಕಲೆ ಹಾಕಿ ಶಾಲೆಗೆ 348 ವಿದ್ಯಾರ್ಥಿಗಳು ದಾಖಲಾಗಿದ್ದು, 11 ಜನ ಶಿಕ್ಷಕರು ಸೇವೆ ಸಲ್ಲಿಸುತ್ತಿರುವುದರ ಬಗ್ಗೆ ಮಾಹಿತಿ ಪಡೆದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಮ್ಮ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ಕಡಿಮೆ ಆಗಲು ಪ್ರಾಥಮಿಕ ಶಾಲೆಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀಡದಿರುವುದು ಕಾರಣವಾಗಿದೆ. ವಿದ್ಯಾರ್ಥಿಯ ಹಾಜರಾತಿ, ಕಲಿಕೆಯ ಗುಣಮಟ್ಟದ ಬಗ್ಗೆ ಶಿಕ್ಷಕರು ಕಾಳಜಿ ವಹಿಸಬೇಕು, ಶಾಲಾ ಅಂಗಳದಲ್ಲಿ ಪೇವರ್ಸ್ ಅಳವಡಿಕೆ, ಶಾಲಾ ಕಂಪೌಂಡ್ ದುರಸ್ತಿ ಹಾಗೂ ವಿದ್ಯಾರ್ಥಿಗಳ ಬೇಡಿಕೆಯಾದ ಕ್ಲಾಸ್ ರೂಮ್ ಗಳಿಗೆ ಸ್ಮಾರ್ಟ್ ಬೋರ್ಡ್ ಅಳವಡಿಕೆ, ಕುಡಿಯಲು ನಿರಂತರ ನೀರಿನ ಸೌಲಭ್ಯದ ಕುರಿತು ಗ್ರಾಮ ಪಂಚಾಯತದಿಂದ ತಕ್ಷಣ ಕ್ರಮವಹಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ನಂತರ ಮಾತನಾಡಿದ ಶಾಸಕ ಎನ್.ಎಚ್. ಕೋನರಡ್ಡಿ ಅವರು, ಶಾಲೆ ಅಭಿವೃದ್ಧಿ ಪಡಿಸಿರುವ ಮತ್ತು ಶಾಲೆಗಳಿಗೆ ಸೌಲಭ್ಯ ನೀಡಿರುವ ಕುರಿತು ವಿವರಿಸಿದರು.
ಜಿಲ್ಲಾಧಿಕಾರಿಗಳು 5 ನೇ ತರಗತಿ ಕೋಣೆಗೆ ಭೇಟಿ ನೀಡಿದ ಮಕ್ಕಳಿಗೆ ಸಂಕಲನ, ವ್ಯವಕಲನ ಮತ್ತು ಗುಣಾಕಾರ ಲೆಕ್ಕ ಕೇಳಿ, ಗಣಿತ ಕಲಿಕೆಯ ಬಗ್ಗೆ ಪರಿಶೀಲಿಸಿ 4ನೇ ತರಗತಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಪ್ರದರ್ಶಿಸಿದ 0 ದಿಂದ 9 ಅಂಕಿಯವರೆಗೆ ಅಂಕಿಗಳ ಮಹತ್ವ ಸಾರುವ ಸಂಖ್ಯೆಗಳ ರಾಜ ಯಾರು? ಎಂಬ ಕಿರು ನಾಟಕ ನೋಡಿ ಭೇಷ್ ಎಂದು, ವಿದ್ಯಾರ್ಥಿಗಳ ಬೆನ್ನು ತಟ್ಟಿದರು.
Kshetra Samachara
04/02/2025 11:46 am