", "articleSection": "Public News", "image": { "@type": "ImageObject", "url": "https://prod.cdn.publicnext.com/s3fs-public/29545520250204114016filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarNavalagunda" }, "editor": { "@type": "Person", "name": "9740080658" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವಲಗುಂದ: ಸೋಲು ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ತೀರ್ಪುಗಾರರು ನ್ಯಾಯಯುತವಾದ ನಿರ್ಧಾರ ಕೈಗೊಂಡಾಗ ಮಾತ್ರ ತೀರ್ಪಿಗೆ ಹೆಚ್ಚಿ...Read more" } ", "keywords": "Node,Hubballi-Dharwad,Public-News", "url": "https://publicnext.com/node" }
ನವಲಗುಂದ: ಸೋಲು ಗೆಲುವಿಗಿಂತ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ, ತೀರ್ಪುಗಾರರು ನ್ಯಾಯಯುತವಾದ ನಿರ್ಧಾರ ಕೈಗೊಂಡಾಗ ಮಾತ್ರ ತೀರ್ಪಿಗೆ ಹೆಚ್ಚಿನ ಮೌಲ್ಯ ಸಿಗುತ್ತದೆ ಎಂದು ಶಿಗ್ಗಾವಿ ಕ್ಷೇತ್ರದ ಶಾಸಕ ಯಾಸಿರ್ ಅಹಮ್ಮದಖಾನ್ ಪಠಾಣ ಹೇಳಿದರು.
ಅವರು ಕುಮಾರಗೊಪ್ಪ ಕ್ರಾಸ್ ಬಳಿ ಇರುವ ಸಾಗರ ದಾಬಾ ಆವರಣದಲ್ಲಿ ನವಲಗುಂದ ಸರ್ವಧರ್ಮ ವೇದಿಕೆಯಡಿ ವಿನೋದ ಅಸೂಟಿ ಅಭಿಮಾನಿ ಬಳಗದೆ ಸಹಯೋಗದಲ್ಲಿ ರಾಜ್ಯ ಮಟ್ಟದ ಭಾರೀ ಜಿದ್ದಾಜಿದ್ದಿ ಟಗರಿನ ಕಾಳಗಕ್ಕೆ ಚಾಲನೆ ನೀಡಿ ಮಾತನಾಡಿದರು.
ಲೋಕಸಭೆ ಚುನಾವಣೆಯಲ್ಲಿ ಅಲ್ಪ ಅಂತರದಲ್ಲಿ ವಿನೋದ ಅಸೂಟಿಗೆ ಸಂಸದ ಸ್ಥಾನ ಕೈತಪ್ಪಿತು. ಆದರೆ ಮುಂದಿನ ಬಾರಿ ಎಂಪಿ ಆಗುವದು ಖಚಿತ. ಇನ್ನೂ ಶಿಗ್ಗಾವಿ-ಸವಣೂರ ಉಪಚುನಾವಣೆಯಲ್ಲಿ ನವಲಗುಂದ ಕ್ಷೇತ್ರದ ಮುಖಂಡರು ನನ್ನ ಗೆಲುವಿಗೆ ಹಗಲು ಇರುಳು ಶ್ರಮಿಸಿದ್ದೀರಿ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.
ವಿನೋದ ಅಸೂಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವ ಟಗರಿನ ಕಾಳಗವನ್ನು ಅಭಿಮಾನಿಗಳು ಮತ್ತೆ ಮೆರಗು ತರುವಂತೆ ನಡೆಸುತ್ತಿರುವುದು ಬಹಳ ಸಂತೋಷದಾಯಕ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 8, 6, 4, 2 ಹಾಗೂ ಹಾಲಹಲ್ಲಿನ ಟಗರುಗಳು, ಸೇರಿದಂತೆ 250ಕ್ಕೂ ಹೆಚ್ಚು ಟಗರುಗಳು ಭಾಗವಹಿಸಿದ್ದವು. ಇನ್ನೂ ಕಾಳಗದ ಮೈದಾನದ ಪಕ್ಕದಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಿತು.
Kshetra Samachara
04/02/2025 11:40 am