ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ : ಗರಿಬಿಚ್ಚಿ ಕುಣಿದು ನೋಡುಗರಿಗೆ ಸಂತಸ ತಂದ ನವಿಲು : ಪಕ್ಷಿ ಗಣತಿಯಲ್ಲಿ 253 ಪ್ರಭೇದದ ಪಕ್ಷಿಗಳು ಪತ್ತೆ

ಚಾಮರಾಜನಗರ : ನವಿಲೊಂದು ಗರಿಬಿಚ್ಚಿ ಕುಣಿದು ಪಕ್ಷಿಗಳ ಛಾಯಾಚಿತ್ರ ಸಂಗ್ರಹ ಹಾಗೂ ಪಕ್ಷಿಗಳ ಗಣತಿ ಕಾರ್ಯಕ್ಕಾಗಿ ತೆರಳಿದ್ದವರು ಮತ್ತು ಫೋಟೊ ಗ್ರಾಫರ್ ಗಳನ್ನು ಸಂತಸ ಪಡಿಸಿ, ಅವರ ಕ್ಯಾಮರಾಗೆ ಫೋಸ್ ನೀಡಿರುವ ಅಪರೂಪದ ದೃಶ್ಯ ಮಲೆ ಮಹದೇಶ್ವರ ವನ್ಯಜೀವ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಎರಡು ದಿನಗಳಿಂದ ಮಲೆ ಮಹದೇಶ್ವರವನ್ಯಜೀವಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಪಕ್ಷಿಗಳ ಗಣತಿ ಕಾರ್ಯ ನಡೆಯುತ್ತಿದ್ದು, ಪಕ್ಷಿಗಳ ಗಣತಿ ಕಾರ್ಯಕ್ಕೆ ತೆರಳಿದ ಛಾಯಾಗ್ರಾಹಕರು ಹಾಗೂ ಅರಣ್ಯ ಸಿಬ್ಬಂದಿ ವಿವಿಧ ಬಗೆಯ ಪಕ್ಷಿ ಪ್ರಭೇದಗಳನ್ನು ಕಣ್ತುಂಬಿಕೊಂಡು, ತಮ್ಮ ಕ್ಯಾಮರಾದಲ್ಲಿ ಅವುಗಳ ದೃಶ್ಯವನ್ನು ಸೆರೆಹಿಡಿದರು. ಈ ಸಂದರ್ಭದಲ್ಲಿ ನವಿಲೊಂದು ಕ್ಯಾಮರಾ ನೋಡುತ್ತಿದ್ದಂತೆ ಗರಿ ಬಿಚ್ಚಿ ನರ್ತನ ಮಾಡುಲು ಆರಂಭಿಸಿತು. ಈ ದೃಶ್ಯ ನೋಡುಗರನ್ನು ಆಕರ್ಷಿಸಿತು. 

ಪಕ್ಷಿ ಗಣತಿ ಕಾರ್ಯದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಗಣತಿ ಕಾರ್ಯದಲ್ಲಿ ಸುಮಾರು 253 ಪ್ರಭೇದದ ಪಕ್ಷಿಗಳು ಪತ್ತೆಯಾಗಿವೆ.

Edited By : PublicNext Desk
Kshetra Samachara

Kshetra Samachara

03/02/2025 12:48 pm

Cinque Terre

560

Cinque Terre

0

ಸಂಬಂಧಿತ ಸುದ್ದಿ