", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/286525-1738085236-WhatsApp-Image-2025-01-28-at-10.10.20-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SundarChamarajnagar" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಾಮರಾಜನಗರ: ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ ಭೀಮನದ್ದೇ ದರ್ಬಾರ್ ಶುರು...Read more" } ", "keywords": "Bandipur National Park, Chamrajanagar, Karnataka Tourism, Wildlife Safari, Tiger Reserve, Bheem the Tiger, Forest Department, Conservation Efforts, Eco Tourism, Travel India, Karnataka News, Wildlife News, Tiger Conservation, Forest Officials, Tourist Attractions, Indian Wildlife, Nature Reserves, Wildlife Protection, Endangered Species, Conservation Status, Karnataka Forest Department, Bandipur Tiger Reserve, Wildlife Enthusiasts, Travel Karnataka, Indian National Parks,Chamarajnagar,Nature", "url": "https://publicnext.com/node" } ಚಾಮರಾಜನಗರ: ಬಂಡೀಪುರದಲ್ಲಿ ಈಗ 'ಭೀಮನ'ದ್ದೇ ದರ್ಬಾರ್..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಬಂಡೀಪುರದಲ್ಲಿ ಈಗ 'ಭೀಮನ'ದ್ದೇ ದರ್ಬಾರ್..!

ಚಾಮರಾಜನಗರ: ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಈಗ 'ಭೀಮನ'ದ್ದೇ ದರ್ಬಾರ್ ಶುರುವಾಗಿದೆ.. ಒಂದು ಕಾಲದಲ್ಲಿ ಪ್ರವಾಸಿಗರ ಫೇವರೇಟ್ ಆಗಿದ್ದ ಪ್ರಿನ್ಸ್‌ನಂತೆ ಈಗ ಭೀಮ ಕೂಡ ಎಲ್ಲರ ನೆಚ್ಚಿನ ಹುಲಿರಾಯ ಆಗಿದ್ದಾನೆ.

ಬಂಡೀಪುರ ಅಂದರೆ ಸಾಕು ವನ್ಯಪ್ರೇಮಿಗಳಿಗೆ ನೆನಪಾಗುವುದು ಪ್ರಿನ್ಸ್ ಹೆಸರಿನ ಹುಲಿ... ಹುಲಿ ಬಲಿಷ್ಠ ಪ್ರಾಣಿಯಾಗಿದ್ದರೂ ಮನುಷ್ಯರನ್ನು ಕಂಡ್ರೆ ಮರೆಯಾಗುವುದೇ ಹೆಚ್ಚು. ಆದರೆ, ಬಂಡೀಪುರದಲ್ಲಿ ಈ ಹಿಂದೆ ಇದ್ದ ಪ್ರಿನ್ಸ್ ಎಂಬ ಹುಲಿ ಪ್ರವಾಸಿಗರನ್ನು ಕಂಡರೇ ದೂರ ಓಡದೇ ಹತ್ತಿರಕ್ಕೆ ಬರುತ್ತಿದ್ದ. ಗಂಟೆಗಟ್ಟಲೆ ದರ್ಶನ ಕೊಡುತ್ತಿದ್ದ ಪ್ರಿನ್ಸ್, ಸಫಾರಿ ಜೀಪ್ ಹತ್ತಿರವೇ ಸುಳಿದಾಡುತ್ತಿದ್ದ. ಈಗ ಪ್ರಿನ್ಸ್‌ನಂತೆ ಭೀಮ ಎಂಬ ಹುಲಿಯು ಪ್ರವಾಸಿಗರನ್ನು ಸೆಳೆಯುತ್ತಿದೆ.

ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ, ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡ್ತಾನೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಹಾಕ್ತಾನೆ, ಸಫಾರಿ ವಾಹನ ಬಂದರೂ ಹೆದರದೇ ರಸ್ತೆ ದಾಟಿ, ರಗಡ್ ಲುಕ್ ಕೊಡಲಿದ್ದು ಭೀಮನ ಪ್ರವಾಸಿಗರು ಫಿದಾ ಆಗಿದ್ದಾರೆ.

Edited By : Shivu K
PublicNext

PublicNext

28/01/2025 10:57 pm

Cinque Terre

32.7 K

Cinque Terre

0