ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ಮುಂದಾದ ಡಿಸಿ

ಧಾರವಾಡ: ಜನ ಸಾಲ ಪಡೆದಿದ್ದಾರೆ ಎಂಬ ಕಾರಣಕ್ಕೆ ಕೆಲ ಮೈಕ್ರೋ ಫೈನಾನ್ಸ್‌ಗಳು ಜನರ ರಕ್ತವನ್ನೇ ಹಿಂಡುತ್ತಿವೆ. ಇನ್ನೂ ಕೆಲ ಫೈನಾನ್ಸ್‌ಗಳು ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರನ್ನು ಮನೆಯಿಂದ ಹೊರ ಹಾಕಿ ಮನೆ ಸೀಜ್ ಮಾಡುತ್ತಿವೆ. ಧಾರವಾಡ ಜಿಲ್ಲೆಯಲ್ಲೂ ಅಂತಹ ಕೆಲ ಪ್ರಕರಣಗಳು ನಡೆದಿದ್ದರಿಂದ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಲು ಧಾರವಾಡ ಜಿಲ್ಲಾಧಿಕಾರಿ ಮುಂದಾಗಿದ್ದಾರೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಅವರೊಂದಿಗೆ ವಿವಿಧ ಮೈಕ್ರೋ ಫೈನಾನ್ಸ್‌ಗಳ ಮುಖ್ಯಸ್ಥರು ಸಭೆ ನಡೆಸಿದರು.

ಜಿಲ್ಲೆಯಲ್ಲಿ ಎಷ್ಟು ಮೈಕ್ರೋ ಫೈನಾನ್ಸ್‌ಗಳಿವೆ? ಎಷ್ಟೆಷ್ಟು ಸಾಲ ನೀಡಿವೆ. ಸಾಲ ವಸೂಲಾತಿಗೆ ಇರುವ ಮಾನದಂಡಗಳೇನು? ಬಡ್ಡಿ ಎಷ್ಟಿದೆ ಎಂಬ ಇತ್ಯಾದಿ ಮಾಹಿತಿಗಳನ್ನೂ ಪಡೆದುಕೊಂಡಿರುವ ಡಿಸಿ, ಫೈನಾನ್ಸ್‌ಗಳಿಂದ ಸಾಲಗಾರರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕೆಲಸ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

30/01/2025 10:52 pm

Cinque Terre

9.18 K

Cinque Terre

2

ಸಂಬಂಧಿತ ಸುದ್ದಿ