ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮೈಕ್ರೋ ಫೈನಾನ್ಸ್‌ನವರಿಂದ ಸಾಲದ ಕಿರಿಕಿರಿ ಇದೆಯಾ? ಈ ಕಂಟ್ರೋಲ್‌ ರೂಮ್‌ಗೆ ಕರೆ ಮಾಡಿ

ಧಾರವಾಡ: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ವರಿಂದ ಸಾಲ ಪಡೆದವರು ಕಿರುಕುಳ ಅನುಭವಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲೂ ಮೈಕ್ರೋ ಫೈನಾನ್ಸ್‌ನವರಿಂದ ಸಾಲ ಪಡೆದ ಅನೇಕರ ಮನೆಗಳನ್ನು ಸೀಜ್ ಮಾಡಲಾಗಿದೆ. ಯಾವ್ಯಾವ ಸಾಲಗಾರರು ಫೈನಾನ್ಸ್‌ನವರಿಂದ ಕಿರುಕುಳ ಅನುಭವಿಸುತ್ತಿದ್ದಾರೋ ಅವರಿಗಾಗಿ ಧಾರವಾಡ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಫೈನಾನ್ಸ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಾಲಗಾರರಿಂದ ಸಾಲ ವಸೂಲಿ ಮಾಡಬೇಕಾದರೆ ಯಾವ್ಯಾವ ಮಾನದಂಡಗಳನ್ನು ಅನುಸರಿಸಬೇಕು? ಎಂಬುದರ ಕುರಿತು ಫೈನಾನ್ಸ್‌ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮೈಕ್ರೋ ಫೈನಾನ್ಸ್ ಸಂಬಂಧಿತ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದೇವೆ. ಫೈನಾನ್ಸ್‌ಗಳಿಂದ ಸಿಗುವ ಸಾಲ ಜನಸಾಮಾನ್ಯರಿಗೆ ಅನುಕೂಲ. 3 ಲಕ್ಷದೊಳಗೆ ಆದಾಯ ಇರುವವರಿಗೆ ಕೊಡುವ ಲೋನ್ ಇವಾಗಿವೆ. ಇದಕ್ಕಾಗಿಯೇ ಆರ್‌ಬಿಐ ನಿಯಮಾವಳಿ ಕೂಡ ಇವೆ ಎಂದರು.

ಧಾರವಾಡ ಜಿಲ್ಲೆಯಲ್ಲಿ 1105 ಸಾಲ ಕೊಡುವ ಸಂಸ್ಥೆಗಳಿವೆ. ಅವರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಸಂಸ್ಥೆ ಮತ್ತು ಕಚೇರಿಯಲ್ಲಿ ಬಡ್ಡಿ ಮಾಹಿತಿ ಪ್ರದರ್ಶಿಸಬೇಕು. ಕಂತಿನ ವಿವರ, ಮಾನದಂಡ ಪ್ರದರ್ಶಿಸಬೇಕು. ಒಂದು ತಿಂಗಳಲ್ಲಿ ಈ ಸಂಬಂಧ ವರದಿ ಸಲ್ಲಿಸುವಂತೆ ತಿಳಿಸಿದ್ದೇವೆ. ಅಧಿಕಾರಿಗಳಿಗೂ ಪರಿಶೀಲನೆ ಮಾಡಲು ತಿಳಿಸಿದ್ದೇವೆ. ಸಾಲ ಕಿರುಕುಳ ತಡೆಗೆ ಕಂಟ್ರೋಲ್ ರೂಮ್ ತೆರೆಯುತ್ತಿದ್ದೇವೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ವಿಭಾಗ ಕೂಡ ತೆರೆಯಲಾಗುತ್ತಿದೆ. ಟೋಲ್ ಫ್ರೀ ನಂಬರ್ 1077ಕ್ಕೆ ಕರೆ ಮಾಡಿ ಜನ ದೂರು ನೀಡಬಹುದು. ಅಲ್ಲದೇ 0836-2445508 ಕ್ಕೂ ಕರೆ ಮಾಡಿ ದೂರು ನೀಡಬಹುದು. ದೂರು ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/01/2025 07:41 pm

Cinque Terre

52.12 K

Cinque Terre

2

ಸಂಬಂಧಿತ ಸುದ್ದಿ