ಧಾರವಾಡ: ಧಾರವಾಡ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನ ಉದ್ಘಾಟನೆ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಗಾಂಧಿವಾದಿಗಳು ಧರಣಿ ನಡೆಸಿದರು.
ಧಾರವಾಡ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿ ಗಾಂಧಿ ಭವನ ನಿರ್ಮಿಸಿ ಕೆಲ ತಿಂಗಳುಗಳೇ ಕಳೆದಿದ್ದು, ಅದರ ಉದ್ಘಾಟನೆ ಮಾತ್ರ ಇನ್ನೂ ಆಗಿಲ್ಲ. ಇದಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಗಾಂಧಿ ಭವನ ಉದ್ಘಾಟನೆಯಾಗುವವರೆಗೂ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಧರಣಿ ನಡೆಸಲು ಗಾಂಧಿವಾದಿಗಳು ನಿರ್ಧರಿಸಿ ಇಂದಿನಿಂದ ಧರಣಿ ಆರಂಭಿಸಿದ್ದಾರೆ.
ಶಂಕರ ಹಲಗತ್ತಿ, ಶ್ರೀಶೈಲಗೌಡ ಕಮತರ ಸೇರಿದಂತೆ ಇತರರು ಈ ಧರಣಿಯ ನೇತೃತ್ವ ವಹಿಸಿದ್ದಾರೆ.
Kshetra Samachara
30/01/2025 11:06 pm