ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹ - ಹೊಸ ಬಾಂಬ್ ಸಿಡಿಸಿದ ಶ್ರೀರಾಮಸೇನಾ...!

ಹುಬ್ಬಳ್ಳಿ: ಅದೊಂದು ಇಳಿಸಂಜೆ ಹೊತ್ತಲ್ಲಿ ನಡೆದಿದ್ದ ಕೊಲೆ ಪ್ರಕರಣ ಹುಬ್ಬಳ್ಳಿ ಮಾತ್ರವಲ್ಲದೇ ದೇಶವನ್ನೇ ಬೆಚ್ಚಿಬೀಳಿಸಿತ್ತು. ವಿದ್ಯಾರ್ಥಿಯೊಬ್ಬಳ ಕೊಲೆಗೆ ದೇಶಕ್ಕೆ ದೇಶವೇ ಮಮ್ಮಲ ಮರುಗಿ ಕಣ್ಣೀರು ಹಾಕಿತ್ತು. ಸ್ಥಳೀಯ ನಾಯಕರು ಮಾತ್ರವಲ್ಲದೆ ರಾಷ್ಟ್ರೀಯ ನಾಯಕರು ಕೂಡ ಹುಬ್ಬಳ್ಳಿಗೆ ಆಗಮಿಸಿ ಘಟನೆ ಪರಿಶೀಲಿದ್ದರು. ಆ ಪ್ರಕರಣ ಈಗ ಮತ್ತೇ ಮುನ್ನೆಲೆಗೆ ಬಂದಿದ್ದು, ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ನೇಹಾ ಹಿರೇಮಠ ಕೊಲೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದ್ದು, ಈ ಪ್ರಕರಣವನ್ನ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದೆ.

ಹೌದು.. ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ನಡೆದು ಒಂಬತ್ತು ತಿಂಗಳು ಗತಿಸಿದೆ. ನೇಹಾ ಹಿರೇಮಠ ಹತ್ಯೆ ಪ್ರಕರಣದ ವಿಚಾರದಲ್ಲಿ ಸರ್ಕಾರ ಭರವಸೆ ನೀಡಿತ್ತು. ಈ‌ ಪ್ರಕರಣದ ವಿಚಾರದಲ್ಲಿ ನಾಲ್ಕು ತಿಂಗಳಲ್ಲಿ ಮೃತಳ ಕುಟುಂಬಕ್ಕೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿತ್ತು. ಆದ್ರೆ ಒಂಬತ್ತು ತಿಂಗಳು ಕಳೆದರೂ ಇದುವರೆಗೂ ಈ ಕುರಿತು ಯಾವುದೇ ಪ್ರಕ್ರಿಯೆ ನಡೆದಿಲ್ಲ, ಸಿಎಂ ಹಾಗೂ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಕೇವಲ ಭೂಟಾಟಿಕೆ ಮಾಡುತ್ತಿದೆ ಎಂದು ಶ್ರೀರಾಮಸೇನಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ನೇಹಾ ಕೊಲೆ ಪ್ರಕರಣದಲ್ಲಿ ಪಾಸ್ಟ್ರಾಕ್ ಕೋರ್ಟ್ ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಭರವಸೆ ನೀಡಿದ್ದು, ಒಂಬತ್ತು ತಿಂಗಳೂ ಕಳೆದರೂ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಕೂಡಲೇ ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ಇನ್ನೂ ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆ ಮಾಡುವ ಮೊಂಡುತನ ಪ್ರದರ್ಶನ ಮಾಡುತ್ತಿದೆ. ಮುಸ್ಲಿಮರು ಓಟ್ ಬ್ಯಾಂಕ್‌ಗಾಗಿ ಸರ್ಕಾರ ಈ‌ ರೀತಿ ವರ್ತಿಸುತ್ತಿದೆ. ಸಿಬಿಐಗೆ ವಹಿಸಿದರೆ ಮಾತ್ರ ನೇಹಾ ಹತ್ಯೆಗೆ ನ್ಯಾಯ ಸಿಗಲಿದೆ. ನೇಹಾ ಹತ್ಯೆ ಪ್ರಕರಣದ ನಂತರ ರಾಜ್ಯದಲ್ಲಿ 42 ಲವ್ ಜಿಹಾದ್ ಪ್ರಕರಣಗಳು‌ ನಡೆದಿವೆ. ಈ ರೀತಿ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ.

ಇಂತಹ‌ ಪ್ರಕರಣಗಳಲ್ಲಿ ಸರ್ಕಾರದ್ದು ಎಷ್ಟು ಜವಾಬ್ದಾರಿ ಇದೆಯೋ‌ ಅಷ್ಟೇ ನ್ಯಾಯಾಲಯಗಳಿಗೂ ಜವಾಬ್ದಾರಿ ಇದೆ. ದೇಶದಲ್ಲಿ, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ವಿಶೇಷ ನ್ಯಾಯಾಲಯ ರಚನೆ ಮಾಡಿ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಬೇಕು‌ ಎಂದು ಆಗ್ರಹಿಸಿದ್ದಾರೆ. ಈ ನಡುವೆ ಗಂಭೀರ ಆರೋಪ ಮಾಡಿದ್ದು, ಈ ಪ್ರಕರಣದ ಹಿಂದೆ ಒಬ್ಬ ಶಾಸಕನ ಕೈವಾಡವಿದೆ.

ಈ‌ ಕೊಲೆಯ ಹಿಂದೆ ಪ್ರಭಾವಿ ಶಾಸಕರೊಬ್ಬರ ಕೈವಾಡವಿದೆ. ಯಾರು ಆ ಪ್ರಭಾವಿ ಶಾಸಕ ಅನ್ನೋದನ್ನ ಸಿಬಿಐಗೆ ವಹಿಸಿದ ನಂತರ ದಾಖಲೆ‌ ಸಮೇತ ಬಿಡುಗಡೆ ಮಾಡ್ತೀನಿ ಎಂದು ಮಾಹಿತಿ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ನೇಹಾ ಕೊಲೆಯ ಹಿಂದೆ ಆ ಪ್ರಭಾವಿ ಶಾಸಕನ ಯಾರು ಅನ್ನೋ ಕುರಿತು ತನಿಖೆಯಾಗಬೇಕಿದೆ. ನೇಹಾ ಕೊಲೆ ವಿಚಾರದಲ್ಲಿ ಪ್ರಮೋದ್ ಮುತಾಲಿಕ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ಸರ್ಕಾರ ಸಿಬಿಐಗೆ ವಹಿಸುತ್ತದೆಯೋ..? ಪಾಸ್ಟ್ರಾಕ್ ಕೋರ್ಟ್ ಸ್ಥಾಪನೆ ಮಾಡುತ್ತದೆಯೋ ಕಾದುನೋಡಬೇಕಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/01/2025 10:53 pm

Cinque Terre

23.1 K

Cinque Terre

5

ಸಂಬಂಧಿತ ಸುದ್ದಿ