ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹುಬ್ಬಳ್ಳಿ, ಧಾರವಾಡದಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಪ್ರಕರಣ ದಾಖಲು

ಧಾರವಾಡ: ಮೈಕ್ರೋ ಫೈನಾನ್ಸ್ ವಿರುದ್ಧ ಹುಬ್ಬಳ್ಳಿ, ಧಾರವಾಡದಲ್ಲಿ ಮೊದಲ ಪ್ರಕರಣ ದಾಖಲಾಗಿದೆ.

ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಮೈಕ್ರೋ ಫೈನಾನ್ಸ್‌ ಮುಖ್ಯಸ್ಥರೊಂದಿಗೆ ನಡೆದ ಸಭೆಯ ನಂತರ ಈ ಮಾಹಿತಿಯನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ನೀಡಿದ್ದಾರೆ.

ಮೆಹಬೂಬ್ ಅಲಿ (43) ಎಂಬಾತ ಫೈನಾನ್ಸ್‌ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದೇ ವಿಷಯವಾಗಿ ಫೈನಾನ್ಸ್ ವಿರುದ್ಧ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ ಎಂದರು.

ಈ ಫೈನಾನ್ಸ್‌ನವರು ಮನೆಗೆ ನುಗ್ಗಿ ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದರಂತೆ. ಪಿಗ್ಮಿ ಕಲೆಕ್ಟ್ ಮಾಡುವಾತ ಹೆಣ್ಣು ಮಕ್ಕಳಿಗೆ ದಬಾಯಿಸಿ ಬೆದರಿಸಿದ್ದಾನೆ. ಸಾಲ ಮರುಪಾವತಿ ಮಾಡದಿದ್ದರೆ ಮರ್ಯಾದೆ ತೆಗೆಯುವ ಬೆದರಿಕೆ ಹಾಕಿದ್ದರು. ಹೀಗಾಗಿ ಮೆಹಬೂಬ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನೋದ್, ಸುಚಿತ್, ಸುನೀಲ ಹಾಗೂ ರವಿ ಪೂಜಾರ್ ಎಂಬುವವರನ್ನು ಬಂಧಿಸಿದ್ದೇವೆ. ಮೆಹಬೂಬ್ ಅಲಿ ಶ್ರೀಫಿನ್, ಇಕ್ವಿಟಾಸ್, ಕ್ರೆಡಿಟ್ ಎಕ್ಸಿಸ್ ಎಂಬ ಫೈನಾನ್ಸ್‌ನಲ್ಲಿ ಸಾಲ ಮಾಡಿದ್ದ. ಸಾಲ ವಸೂಲಾತಿಗೆ ಅದರದ್ದೇ ಆದ ನಿಯಮ ಇದೆ. ಆ ನಿಯಮ ಉಲ್ಲಂಘನೆ ಆಗಬಾರದು ಎಂದರು.

ಬೆದರಿಕೆ, ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಮನೆಯೊಳಗೆ ನುಗ್ಗುವುದು, ಗುಂಪಾಗಿ ಬಂದು ಸಾಲ ವಸೂಲಿ ಮಾಡುವುದು ನಿಯಮದಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಇದೀಗ ದೂರು ದಾಖಲಾಗಿದೆ. ಇದು ನಮ್ಮಲ್ಲಿ ಆಗಿರುವ ಮೊದಲ ಪ್ರಕರಣ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದರ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

30/01/2025 08:33 pm

Cinque Terre

26.7 K

Cinque Terre

4

ಸಂಬಂಧಿತ ಸುದ್ದಿ